ETV Bharat / state

ನಾಗರಹೊಳೆ, ಬಂಡೀಪುರ ಉದ್ಯಾನದ ಅತಿಥಿಗಳಿಗೆ ಸಫಾರಿ ಸೌಲಭ್ಯದ ಮಾಹಿತಿ ಒದಗಿಸಲು ಹೈಕೋರ್ಟ್ ಸೂಚನೆ - Safari at national parks

ಖಾಸಗಿ ರೆಸಾರ್ಟ್ ಅತಿಥಿಗಳಿಗೆ ಸಫಾರಿಗೆ ವಾಹನ ಸೌಲಭ್ಯ ಒದಗಿಸದೇ ತಾರತಮ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಮುಂದೂಡಿದೆ.

ಬಂಡೀಪುರ
ಬಂಡೀಪುರ (ETV Bharat)
author img

By ETV Bharat Karnataka Team

Published : May 28, 2024, 3:43 PM IST

ಬೆಂಗಳೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಖಾಸಗಿ ರೆಸಾರ್ಟ್‌ಗಳಲ್ಲಿ ತಂಗುವ ಅತಿಥಿಗಳಿಗೆ ಸಫಾರಿಗೆ ವಾಹನಗಳನ್ನು ಹಂಚಿಕೆ ಮಾಡುವ ವಿಧಾನದ ಕುರಿತಂತೆ ಮಾಹಿತಿ ಒದಗಿಸುವಂತೆ ಜಂಗಲ್ ಲಾಡ್ಜ್​​​​​ ಅಂಡ್ ರೆಸಾರ್ಟ್ ಲಿಮಿಡೆಟ್(ಜೆಎಲ್‌ಆರ್‌ಎಲ್) ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಖಾಸಗಿ ರೆಸಾರ್ಟ್ ಅತಿಥಿಗಳಿಗೆ ಕ್ಯಾಂಟರ್‌ಗಳನ್ನು ಒದಗಿಸಲಾಗುತ್ತಿದೆ. ಆದರೆ, ಜೆಎಲ್‌ಆರ್​​ಎಲ್‌ ಅತಿಥಿ ಗೃಹಗಳಿಗೆ ಬರುವ ಪ್ರವಾಸಿಗರಿಗೆ ಸಫಾರಿಗೆ ಸೂಕ್ತವಾಗಿರುವ ಜೀಪ್‌ಗಳನ್ನು ಒದಗಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ರೆಸಾರ್ಟ್‌ಗಳ ಸಂಘ 2022ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಫಾರಿ ವಾಹನ ಸೌಲಭ್ಯ ಒದಗಿಸುವುದು ಮತ್ತು ಇತರ ಸೌಲಭ್ಯಗಳ ಕುರಿತಂತೆ ಸರ್ಕಾರದೊಂದಿಗೆ ಖಾಸಗಿ ರೆಸಾರ್ಟ್‌ಗಳ ಸಂಘ ಒಪ್ಪಂದ ಮಾಡಿಕೊಂಡಿದೆ. ಆದರೆ, ಜೆಎಲ್‌ಆರ್‌ಎಲ್ ಒಪ್ಪಂದ ಉಲ್ಲಂಘಿಸುತ್ತಿದೆ. ಸಫಾರಿ ವಾಹನಗಳ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸರ್ಕಾರ ಮತ್ತು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹೊಸ ರೆಸಾರ್ಟ್​ಗಳಿಗೆ ಹೊಸ ಸಫಾರಿ ಅನುಮತಿಗಳನ್ನು ನೀಡಲಾಗಿದೆ. ಅಲ್ಲದೇ, ಸಫಾರಿ ವಾಹನಗಳ ನ್ಯಾಯಯುತ ಹಂಚಿಕೆ ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ವಿಸ್ತರಿಸಲು ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಜೆಎಲ್‌ಆರ್‌ಎಲ್ ಅತಿಥಿಗಳಿಗೆ ವನ್ಯಜೀವಿಗಳ ಉತ್ತಮ ವೀಕ್ಷಣೆ ಇರುವ ವಲಯಗಳ ಮಾರ್ಗಗಳಲ್ಲಿ ಸಪಾರಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಿದ್ದಾರೆ. ಆದರೆ, ಖಾಸಗಿ ರೆಸಾರ್ಟ್‌ಗಳ ಅತಿಥಿಗಳಿಗೆ ಈ ಸೌಲಭ್ಯದಿಂದ ವಂಚಿಸುತ್ತಿದ್ದಾರೆ. ಆದ್ದರಿಂದ ಖಾಸಗಿಯವರೆಗೂ ಸಮಾನ ಅವಕಾಶ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಕೋರಿದ್ದರು.

ಇದನ್ನೂ ಓದಿ: ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಕೋರ್ಟ್​ - BHAVANI REVANNA BAIL PLEA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.