ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಅಂತಾರಾಜ್ಯ ಕಳ್ಳರು ತಗ್ಲಾಕೊಂಡಿದ್ದು, ಒಟ್ಟು 14 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ತಮಿಳುನಾಡು ಮೂಲದ ಕೊಡಂಗು ಸ್ವಾಮಿ (58) ಇಂದಿರರಾಜ್ @ ಇಂದ್ರರಾಜ್ (35) ಕೇರಳ ಮೂಲದ ಅಜಿತ್ (23)ಜೇಸುದಾಸ್ @ ಯೇಸುದಾಸ್ (39) ಬಂಧಿತರು. ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಬೇಗೂರು ಹಾಗೂ ಚಾಮರಾಜನಗರ ಮತ್ತು ಕೋಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 14 ಕಳವು ಪ್ರಕರಣ ಎಸಗಿದ್ದ ಇವರುಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಒಂದು ಕೇಸ್ನಿಂದ 14 ಕೇಸ್ ಬೆಳಕಿಗೆ : ಹನೂರಿನ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಮನೆಯಲ್ಲಿ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲು ಖದೀಮರ ಗ್ಯಾಂಗ್ ಇರುವ ಮಾಹಿತಿ ಅರಿತು ಬಂಧಿಸಿದ್ದಾರೆ.
ವಿಚಾರಣೆಗೆ ಒಳಪಡಿಸಲಾಗಿ ಹನೂರು, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಮತ್ತು ಕೋಲಾರದಲ್ಲಿ ಒಟ್ಟು 14 ಕಡೆ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.
ಬಂಧಿತರಿಂದ 41,69,000 ರೂ. ಬೆಲೆ ಬಾಳುವ 514.16 ಗ್ರಾಂ ಚಿನ್ನಾಭರಣಗಳು, ಮೂರು ಕೆಜಿ ಬೆಳ್ಳಿ ಆಭರಣಗಳು, 4,400 ನಗದು ಹಣ, ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಮಾಲೀಕನ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ, ನಗದು ದೋಚಿದ್ದ ಪ್ರಕರಣ ; ನೇಪಾಳ ಮೂಲದ ಮೂವರ ಬಂಧನ