ಹಾವೇರಿ: ಜಮೀನಿನಲ್ಲಿ ನೀರು ಹಾಯಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ-ತಮ್ಮನ ನಡುವೆ ನಡೆದ ಜಗಳ ಅಣ್ಣನ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಅಣ್ಣನ್ನನ್ನ 62 ವರ್ಷದ ನಾಗಪ್ಪ ಬೆನಕನಹಳ್ಳಿ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ತಮ್ಮನ್ನನ್ನ ಯಲ್ಲಪ್ಪ ಬೆನಕನಹಳ್ಳಿ ಎಂದು ಗುರುತಿಸಲಾಗಿದೆ. ಜಮೀನಿಗೆ ನೀರು ಹಾಯಿಸುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಯಲ್ಲಪ್ಪ ಕೊಲಿನಿಂದ ನಾಗಪ್ಪನ ಎದೆಯ ಭಾಗಕ್ಕೆ ಜೋರಾಗಿ ಹೊಡೆದಿದ್ದಾನೆ. ಇದರಿಂದ ನಾಗಪ್ಪ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಆರೋಪಿ ಯಲ್ಲಪ್ಪನ್ನ ಸವಣೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗೋವಾದಿಂದ ಬೆಂಗಳೂರಿಗೆ ಅಕ್ರಮ ಮದ್ಯ ಸಾಗಣೆ: 50 ಲಕ್ಷ ಮೌಲ್ಯದ ಮಾಲು ವಶ
ಕುಡಿದ ಅಮಲಿನಲ್ಲಿ ಪತ್ನಿಯ ಕೊಲೆ: ಕುಡಿದ ಅಮಲಿನಲ್ಲಿ ಪತಿಯೇ ಪತ್ನಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಘಟನೆ ಕಳೆದ ಮೂರು ದಿನಗಳ ಹಿಂದೆ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಕಾಲೋನಿಯಲ್ಲಿ ನಡೆದಿತ್ತು. ಮಾಚಿ ಎಂಬಾಕೆಯನ್ನು ಪತಿ ರವಿ ಹತ್ಯೆ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಗಂಡ ಹೆಂಡತಿ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಪತಿ ರವಿ, ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಕುತ್ತಿಗೆ ಮತ್ತು ತಲೆಗೆ ಬಲವಾಗಿ ಹೊಡೆದ ಪರಿಣಾಮ ಪತ್ನಿ ಮಾಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುದ್ಧಿವಾದ ಹೇಳಿದಕ್ಕೆ ಚಿಕ್ಕಮ್ಮನ ಕೊಲೆ: ಬುದ್ಧಿವಾದ ಹೇಳಿದಕ್ಕೆ ಚಿಕ್ಕಮ್ಮನನ್ನೇ ಪುತ್ರ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಜ.10ರಂದು ನಡೆದಿತ್ತು. ಮಗನೇ ಚಿಕ್ಕಮ್ಮನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದ. ಮಂಗಳಾ ತುಕಾರಾಮ ಸಾವಡಕರ ಕೊಲೆಯಾದ ಮಹಿಳೆ. ಸಂಜಯ್ ಸಾವಡಕರ ಚಿಕ್ಕಮ್ಮನನ್ನು ಹತ್ಯೆ ಮಾಡಿರುವ ಆರೋಪಿ.
ಕಬ್ಬಿಣದ ರಾಡ್ ಪೆಟ್ನಿಂದ ತೀವ್ರ ಗಾಯಗೊಂಡಿದ್ದ ಮಂಗಳಾ ಸಾವಡಕರ ಮಹಾರಾಷ್ಟ್ರ ಮಿರಜ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳಾ ಸಾವಿಗೀಡಾಗಿದ್ದರು. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಾಲಿಸಿಕೊಂಡು ಆರೋಪಿ ಸಂಜಯ್ನನ್ನು ಪೊಲೀಸರು ಬಂಧಿಸಿದ್ದಾರೆ.