ETV Bharat / state

ಹಾವೇರಿ: ದೇವರ ಕೋಣ ನಾಪತ್ತೆ, ಹುಡುಕಿಕೊಡುವಂತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು - TEMPLE BULLOCK MISSING

ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿ ಹೆಸರಿನಲ್ಲಿ ಬಿಟ್ಟಿದ್ದ ಕೋಣ, ಗ್ರಾಮದಲ್ಲಿ ಓಡಾಡಿಕೊಂಡಿತ್ತು. ಆದರೆ ಕಳೆದ ಎರಡು ತಿಂಗಳುಗಳಿಂದ ನಾಪತ್ತೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Makari Villagers go to police station to find missing temple bullock
ದೇವರ ಕೋಣ ನಾಪತ್ತೆ, ಹುಡುಕಿಕೊಡುವಂತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು (ETV Bharat)
author img

By ETV Bharat Karnataka Team

Published : Dec 17, 2024, 7:14 AM IST

Updated : Dec 17, 2024, 12:42 PM IST

ಹಾವೇರಿ: ದೇವರ ಕೋಣ ನಾಪತ್ತೆಯಾಗಿದ್ದು, ಹುಡುಕಿ ಕೊಡುವಂತೆ ಗ್ರಾಮಸ್ಥರು ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

ಮಕರಿ ಗ್ರಾಮದ ಆರಾಧ್ಯದೈವ ದುರ್ಗಾದೇವಿ. ನಾಲ್ಕು ವರ್ಷಗಳ ಹಿಂದೆ ದುರ್ಗಾದೇವಿಯ ಹೆಸರಿನಲ್ಲಿ ಕೋಣವನ್ನು ಬಿಡಲಾಗಿತ್ತು. ಗ್ರಾಮದಲ್ಲಿಯೇ ಕೋಣ ಓಡಾಡಿಕೊಂಡು ಮೇವು ತಿಂದುಕೊಂಡು ಇತ್ತು. ಈಗ ಎರಡು ತಿಂಗಳ ಹಿಂದೆ ದೇವರ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಹಾಗೂ ಸಮಿತಿ ಸದಸ್ಯರು ಹುಡುಕಾಟ ನಡೆಸಿದರೂ ಕೋಣ ಮಾತ್ರ ಪತ್ತೆಯಾಗಿಲ್ಲ. ಇದೀಗ ಗ್ರಾಮಸ್ಥರು ದೇವರ ಕೋಣ ಹುಡುಕಿಕೊಡುವಂತೆ ರಟ್ಟಿಹಳ್ಳಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಗ್ರಾಮಸ್ಥರ ಮನವಿ (ETV Bharat)

ಎರಡು ತಿಂಗಳ ಹಿಂದೆಯೇ ಕೋಣ ನಾಪತ್ತೆಯಾಗಿದೆ. ಗ್ರಾಮದ ಜನರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಟ ಮಾಡಿದ್ದಾರೆ. ಆದರೂ ಸಹ ದೇವರ ಕೋಣ ಸಿಕ್ಕಿಲ್ಲ. ಗ್ರಾಮದ ಆರಾಧ್ಯದೈವ ಗ್ರಾಮದ ದೇವಿಯ ಕೋಣ ಗ್ರಾಮದಲ್ಲಿಯೇ ಓಡಾಡಿಕೊಂಡು ಇರಬೇಕು. ಅದು ಗ್ರಾಮದಲ್ಲಿಯೇ ಇದ್ದರೆ ಗ್ರಾಮದ ಜನರಿಗೆ ಹಾಗೂ ಗ್ರಾಮಕ್ಕೆ ಒಳಿತು ಆಗುತ್ತದೆ ಎನ್ನುವ ನಂಬಿಕೆ ಗ್ರಾಮದ ಜನರದ್ದು. ಹೀಗಾಗಿ ಆದಷ್ಟು ಬೇಗ ಕೋಣವನ್ನು ಹುಡುಕಿಕೊಡಿ ಎಂದು ಗ್ರಾಮಸ್ಥರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 1 ವರ್ಷದ ಗಂಡು ಮಗು ನಾಪತ್ತೆ: ಹುಡುಕಿ ಕೊಡುವಂತೆ ಅಲೆಮಾರಿ ದಂಪತಿಯ ಅಳಲು

Last Updated : Dec 17, 2024, 12:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.