ETV Bharat / state

ಹಾವೇರಿ ಸಹೋದರರ ಬದುಕು ಬದಲಿಸಿದ ಹೈನುಗಾರಿಕೆ

ಹಾವೇರಿಯ ಸಹೋದರರು ಹೈನುಗಾರಿಕೆ ಆರಂಭಿಸಿ ಇದೀಗ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ. ಇವರ ದಿನಚರಿ, ಲಾಭ-ಖರ್ಚು ಕುರಿತು ಇಲ್ಲಿದೆ ವಿಶೇಷ ವರದಿ.

dairy-farming
ಹೈನುಗಾರಿಕೆ
author img

By ETV Bharat Karnataka Team

Published : Feb 4, 2024, 10:52 AM IST

Updated : Feb 4, 2024, 2:32 PM IST

ಹಾವೇರಿ ಸಹೋದರರ ಬದುಕು ಬದಲಿಸಿದ ಹೈನುಗಾರಿಕೆ

ಹಾವೇರಿ: ನಗರದ ಮಡಿವಾಳ ಕುಟುಂಬದ ಯುವಕರು ಹೈನುಗಾರಿಕೆ ಕೈಗೊಂಡು ಯಶಸ್ವಿಯಾಗಿದ್ದಾರೆ. ಮುರ್ರಾ ಎಮ್ಮೆ, ಗಿರ್​​ ಆಕಳು, ಹೆಚ್ಎಫ್​ ಆಕಳು, ಮೇಕೆ ಹಾಗೂ ಕೋಳಿಗಳನ್ನು ಸಾಕಿ ಇವರು ಜೀವನ ಕಟ್ಟಿಕೊಂಡಿದ್ದಾರೆ. ಇದಕ್ಕಾಗಿ ವಿಶಾಲ ಫಾರ್ಮ್​ ನಿರ್ಮಿಸಿದ್ದು ಅದಕ್ಕೆ ಕಿಂಗ್ಸ್ ಫಾರ್ಮ್ಸ್‌ ಹೌಸ್​ ಎಂದು ಹೆಸರಿಟ್ಟಿದ್ದಾರೆ.

ಯುವ ಸಹೋದರರು ಈ ಫಾರ್ಮ್‌ನಲ್ಲಿ ದಿನಪೂರ್ತಿ ಕಳೆಯುತ್ತಾರೆ. ಮಡಿವಾಳ ಕುಟುಂಬದಲ್ಲಿ ಏಳು ಸಹೋದರರಿದ್ದು ಐವರು ಯುವಕರು ಫಾರ್ಮ್‌ ನಡೆಸಿಕೊಂಡು ಬರುತ್ತಿದ್ದಾರೆ. 25 ಎಮ್ಮೆ, 15 ಆಕಳು, ಐದು ಎತ್ತುಗಳನ್ನು ಈ ಕುಟುಂಬ ಸಾಕುತ್ತಿದೆ.

ಇದರ ಜೊತೆಗೆ ಐವತ್ತಕ್ಕೂ ಅಧಿಕ ಮೇಕೆ, ನೂರಕ್ಕೂ ಅಧಿಕ ಕೋಳಿಗಳನ್ನೂ ಸಾಕುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆಯೂ ಸೇರಿ ಎಮ್ಮೆ ಮತ್ತು ಹಸುಗಳಿಂದ ಸುಮಾರು 150 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಈ ಪೈಕಿ ಎಮ್ಮೆಯ ಹಾಲು ಮತ್ತು ಆಕಳ ಹಾಲನ್ನು ಬೇರ್ಪಡಿಸಿ ಮಾರಾಟ ಮಾಡಲಾಗುತ್ತಿದೆ.

ಮೂರು ಎಮ್ಮೆಗಳಿಂದ ಶುರುವಾದ ಇವರ ಹೈನೋದ್ಯಮ ಇದೀಗ 70ಕ್ಕೂ ಅಧಿಕ ಎಮ್ಮೆ, ಆಕಳಿಗೆ ತಲುಪಿದೆ. ಆರಂಭದಲ್ಲಿ ಮೂರ್ನಾಲ್ಕು ಎಮ್ಮೆಗಳಿಂದ ಹೈನುಗಾರಿಕೆ ನಡೆಸುತ್ತಿದ್ದಾಗ ಈ ಕುಟುಂಬಕ್ಕೆ ಕಿಂಗ್ ಎಂಬ ಹೆಸರಿನ ಕೊಬ್ಬರಿ ಹೋರಿ ಸಿಗುತ್ತದೆ. ಆ ಬಳಿಕ ಈ ಕುಟುಂಬ ಹಿಂತಿರುಗಿ ನೋಡಲಿಲ್ಲ. ಈ ಕೊಬ್ಬರಿ ಹೋರಿ ಇವರ ಅದೃಷ್ಠವನ್ನೇ ಬದಲಿಸಿದೆ.

"ಕಿಂಗ್​ ಹೋರಿ ನಮ್ಮ ಹೆಸರನ್ನು ಜಿಲ್ಲೆ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪಸರಿಸಿತು. ಈ ಮೂಲಕ ನಮ್ಮ ಹೈನೋದ್ಯಮ ವಿಸ್ತರಣೆಯಾಯಿತು" ಎನ್ನುತ್ತಾರೆ ರೈತ ಶಿವಾನಂದ.

ರೈತ ವೀರೇಶ ಮಡಿವಾಳ ಮಾತನಾಡಿ, "ಈ ದನಗಳಿಗೆ ವರ್ಷಕ್ಕೆ ಬೇಕಾಗುವ ಒಣ ಮೇವು ಸಂಗ್ರಹಿಸಿಡಲಾಗಿದೆ. ವೈದ್ಯರು ತಿಳಿಸುವ ಸಿದ್ಧ ಆಹಾರಗಳನ್ನೂ ಕೂಡಾ ದನಗಳಿಗೆ ಹಾಕಲಾಗುತ್ತದೆ. ಮುಂಜಾನೆ 7 ಗಂಟೆಗೆ ಆರಂಭವಾಗುವ ಕಾಯಕ ಸಂಜೆ 8 ಗಂಟೆಯವರೆಗೂ ನಡೆಯುತ್ತದೆ. ಕೆಲವೊಮ್ಮೆ ಹೊರಗಿನ ಆಳುಗಳನ್ನು ಬಳಸಿಕೊಳ್ಳಲಾಗುತ್ತದೆ. ಜಾನುವಾರುಗಳ ಮೂತ್ರ ಮತ್ತು ಸಗಣಿಯನ್ನು ತಿಪ್ಪೆ ಮಾಡಿದ್ದು ಗೊಬ್ಪರಕ್ಕೂ ಬೇಡಿಕೆ ಇದೆ. ನಮ್ಮ ಫಾರ್ಮ್‌ನಿಂದ ಸಗಣಿ ಪಡೆಯಲು ರೈತರು ಬರುತ್ತಿದ್ದಾರೆ. ಇದರಿಂದಲೇ ನಮಗೆ ವರ್ಷಕ್ಕೆ ಮೂರು ಲಕ್ಷ ರೂಪಾಯಿ ಆದಾಯ ಸಿಗುತ್ತದೆ" ಎಂದು ಹೇಳಿದರು.

"ಪ್ರತಿನಿತ್ಯ ಮೂರು ಬಾರಿ ಮೇವು, ಎರಡು ಬಾರಿ ಹಿಂಡಿಯನ್ನು ಈ ಎಮ್ಮೆ ಆಕಳುಗಳಿಗೆ ನೀಡಲಾಗುತ್ತಿದೆ. ಒಂದು ಬಾರಿ ಹಸಿಮೇವು ಒಂದು ಬಾರಿ ಒಣಮೇವು ಹಾಕುವ ಜೊತೆಗೆ ಸಿದ್ಧ ಆಹಾರಗಳನ್ನು ಒದಗಿಸಲಾಗುತ್ತದೆ. ಹಸುಗಳನ್ನು ಮನೆಯಲ್ಲಿ ಮೇಯಿಸಲಾಗುತ್ತದೆ. ಎಮ್ಮೆಗಳನ್ನು ಹೊರಗೆ ಜಮೀನಿನಲ್ಲಿ ಮೇಯಿಸಲಾಗುತ್ತದೆ. ದಿನನಿತ್ಯ ಮುಂಜಾನೆ ಮತ್ತು ಸಂಜೆ ಸೇರಿ 150ಕ್ಕೂ ಅಧಿಕ ಲೀಟರ್ ಕರೆಯಲಾಗುತ್ತದೆ" ಎಂದು ಅವರು ವಿವರಿಸಿದರು.

ಈ ರೀತಿ ಕರೆದ ಹಾಲನ್ನು ಹಾಲಿನ ಕೇಂದ್ರಕ್ಕೆ ಹಾಕಲಾಗುತ್ತದೆ. ಗ್ರಾಹಕರು ಲೀಟರ್‌ಗೆ 50 ರೂಪಾಯಿಯಿಂದ 60 ರೂಪಾಯಿಯಂತೆ ನೀಡಿ ಪಡೆದುಕೊಳ್ಳುತ್ತಾರೆ. ಪ್ರತಿ ವಾರಕ್ಕೊಮ್ಮೆ ಪಶುವೈದ್ಯರು ದನಗಳ ಆರೋಗ್ಯ ಪರಿಶೀಲನೆ ಮಾಡುತ್ತಾರೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಈ ಸಹೋದರರೇ ಚಿಕಿತ್ಸೆ ನೀಡುತ್ತಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ಸಾವಿರಕ್ಕೂ ಹೆಚ್ಚು ವಿದೇಶಿ ಹಣ್ಣಿನ ಗಿಡಗಳನ್ನು ಬೆಳೆದ ಪ್ರಗತಿಪರ ಕೃಷಿಕ

Last Updated : Feb 4, 2024, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.