ETV Bharat / state

ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅಮಾನತು: ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ - HASSAN PENDRIVE CASE - HASSAN PENDRIVE CASE

ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣದಿಂದ ಅಮಾನತು ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

HD KUMARASWAMY PRESS MEET  HASSAN MP  HASSAN PENDRIVE CASE  DHARWAD
ಕಾಂಗ್ರೆಸ್​ ವಿರುದ್ಧ ಹೆಚ್​ಡಿಕೆ ವಾಗ್ದಾಳಿ
author img

By ETV Bharat Karnataka Team

Published : Apr 30, 2024, 4:03 PM IST

Updated : Apr 30, 2024, 6:53 PM IST

ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ

ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದಿಂದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ತಕ್ಷಣದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಸ್ಐಟಿ ತನಿಖೆಯಲ್ಲಿ ಪ್ರಜ್ವಲ್ ತಪ್ಪಿತಸ್ಥ ಎಂದು ದೃಢಪಟ್ಟಲ್ಲಿ ಅವರನ್ನು ಪಕ್ಷದಿಂದ ಖಾಯಂ ಆಗಿ ಉಚ್ಚಾಟನೆ ಮಾಡಲಾಗುವುದು ಎಂದು ಸ್ಪಷ್ಟವಾಗಿ ಹೇಳಿದರು. ಈ ಪೆನ್ ಡ್ರೈವ್ ಹಂಚಿಕೆ ಹಿಂದೆ ಸರ್ಕಾರದ ನೇರ ಪಾತ್ರವಿದೆ ಎಂದು ಆರೋಪಿಸಿದ ಅವರು, ಮಾಧ್ಯಮಗೋಷ್ಟಿಯುದ್ದಕ್ಕೂ ಡಿಸಿಎಂ ಡಿಕೆಶಿ ಹಾಗೂ ಸಿಎಂ ವಿರುದ್ಧ ತೀವ್ರವಾಗಿ ಹರಿಹಾಯ್ದರು.

''ಈ ಪ್ರಕರಣವನ್ನು ಮುಂದೆ ಇಟ್ಟುಕೊಂಡು ಸಿಎಂ, ಡಿಸಿಎಂ ಅವರು ದೇವೇಗೌಡ ಕುಟುಂಬದ ವರ್ಚಸ್ಸು ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದು, ನೀಚ ರಾಜಕಾರಣ ಮಾಡುತ್ತಿದ್ದಾರೆಂದು ದೂರಿದರು. ಪ್ರಜ್ವಲ್ ಪ್ರಕರಣ ಎಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿಗೆ ಸಂಬಂಧವಿಲ್ಲವೆಂದರು. ಈ ಪ್ರಕರಣವನ್ನು ನಾವು ಧೈರ್ಯದಿಂದ ಎದುರಿಸುತ್ತೇವೆ. ವಿಡಿಯೋದಲ್ಲಿ ಇರುವ ಮಹಿಳೆಯರ ಮುಖವನ್ನು ಕನಿಷ್ಠವಾಗಿಯಾದರೂ ಮುಸುಕು ಮಾಡಬೇಕಿತ್ತು. ಆದರೇ ಹಾಗೆಯೇ ಇರುವುದರಿಂದ ಹೆಣ್ಣುಮಕ್ಕಳ ಕುಟುಂಬಗಳ ಕಥೆಯೇನು?.. ಅವರ ಜೀವಕ್ಕೆ ಹೆಚ್ಚು ಕಡಿಮೆಯಾದರೇ ಸರ್ಕಾರವೇ ನೇರ ಹೊಣೆ'' ಎಂದು ಹೇಳಿದರು.

ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ

''ಈ ಪ್ರಕರಣ ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲ್ಲು ಹೊರಟಿದೆ. ಅದು ಯಶಸ್ಸು ಆಗೋಲ್ಲ ಎಂದು ಕುಟುಕಿದ ಅವರು, ನಿಮ್ಮ ಅಧಿಕಾರ ದುರಹಂಕಾರ, ನೀಚತನವನ್ನು ಭಗವಂತ ನೋಡಿಕೊಳ್ಳುತ್ತಾನೆ ಎಂದರು. ಸಿಎಂ ಪುತ್ರನ ಪ್ರಕರಣವನ್ನು ನಾವು ಈ ನೀಚ ರಾಜಕಾರಣಕ್ಕೆ ನಿಮ್ಮ ಹಾಗೆ ಬಳಸಿಕೊಳ್ಳುವುದಿಲ್ಲ. ನಿಮ್ಮ ಮಗನ ಪ್ರಕರಣದಲ್ಲಿ ಪ್ರಧಾನಿ ಮೋದಿ ಹಾಗೂ ಸುಸ್ಮಾ ಸುರಾಜ್ ಮರ್ಯಾದೆ ಉಳಿಸಿದ್ದಾರೆ. ನೀವು ಅವರಿಗೆ ಕೃತಜ್ಞತೆಯಾಗಬೇಕು. ಅದು ಬಿಟ್ಟು ಮೋದಿಯವರ ಹೆಸರನ್ನು ಈ ಪ್ರಕರಣದಲ್ಲಿ ಏಕೆ ಎಳೆದು ತರುತ್ತಿದ್ದೀರಿ'' ಎಂದು ಆಕ್ಷೇಪಿಸಿದರು.

''ನಮ್ಮ ಮನೆಯ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಸಿಎಂ ಕುಮ್ಮಕ್ಕು ಕೊಡುತ್ತಿದ್ದಾರೆ. ನಾನು ಒಂದು ವೇಳೆ ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರೇ ಬೀದಿಯಲ್ಲಿ ಅಡ್ಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಅಶ್ಲೀಲ ವಿಡಿಯೋ ಪ್ರಕರಣ ಹರಿ ಬಿಡುವ ಮೂಲಕ ಜನರಿಗೆ ಸರ್ಕಾರ 6ನೇ ಗ್ಯಾರಂಟಿ ನೀಡಿದೆ ಎಂದು ವ್ಯಂಗ್ಯವಾಡಿದರು. ಈ ಪ್ರಕರಣದ ಹೊಸ ಅಧ್ಯಾಯ ಆರಂಭವಾಗಿದೆ. ನಾವು ಹೆದರುವುದಿಲ್ಲ. ಧೈರ್ಯವಾಗಿ ಎದುರಿಸುತ್ತೇವೆ'' ಎಂದರು.

ಹಾಸನ ಡಿಸಿ ಸತ್ಯಭಾಮ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರೀತಿಯಾಗಿ ಹೇಳಿಕೆ ಕೊಡಲು ಅಧಿಕಾರ ಕೊಟ್ಟವರು ಯಾರು?.. ನೀವೇನು ನ್ಯಾಯಾಧೀಶರಾ? ಎಂದು ತರಾಟೆಗೆ ತೆಗೆದೆಕೊಂಡ ಅವರು ಡಿಸಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇವತ್ತು ವಿಕೃತ ಮನೋಭಾವದವರು ಈ ಭೂಮಿಯಲ್ಲಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿರುತ್ತಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಿ. ಡಿಸಿಎಂ ಮೇಲೆಯೂ ತನಿಖೆ ಆಗಬೇಕು. ಒಂದು ತಿಂಗಳ ಹಿಂದೆ ಕೋರ್ಟ್​ನಲ್ಲಿ ಸ್ಟೇ ತಂದಿರೋದು ಗೊತ್ತಿಲ್ಲ. ಸರಿಯಾದ ರೀತಿ ಗೌರವ ಕೊಡ್ತಿಲ್ಲ ಅಂತ ಅಷ್ಟೇ ಗೊತ್ತಿತ್ತು. ಈಗ ಕೆಲ ವಿಷಯಗಳು ಒಂದೊಂದಾಗಿ ಹೊರ ಬರುತ್ತಿವೆ. ನನ್ನ ಗಮನಕ್ಕೆ ಬಂದಿದ್ದರೆ ಅಂದೇ ಸರಿ ಮಾಡುತ್ತಿದ್ದೆ. ಪೆನ್​ಡ್ರೈವ್ ಆದಷ್ಟು ಬೇಗ ನಿಮ್ಮ ಮುಂದಿಡುತ್ತೇನೆ. ಅದು ಅಶ್ಲೀಲ ವಿಡಿಯೋ ಅಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು ಎಂದರು.

ಪೆನ್​ಡ್ರೈವ್ ರಿಲೀಸ್ ಮಾಡಿದ್ದು ಯಾವ ಕಾರಣಕ್ಕೆ?.. ನಿಮಗೆ ರಾಜಕೀಯ ನೀತಿ ಇದ್ದರೆ ಕ್ರಮ ಕೈಗೊಳ್ಳಿ. ನಾವು ಭಗವಂತನನ್ನು ನಂಬುತ್ತೇವೆ. ಡಿಸಿಎಂ ಅನ್ನು ಡಿಸ್ ಮಿಸ್ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ರೇವಣ್ಣ ಮೇಲೆ ಸುಳ್ಳು ದೂರು ಕೊಟ್ಟಿದ್ದಾರೆ. ರಾಜ್ಯದಲ್ಲಿ ಎಸ್​ಐಟಿ ಎಷ್ಟು ರಚನೆಯಾಗಿದೆ?. ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಓದಿ: ಹಾಸನ ವಿಡಿಯೋ ಪ್ರಕರಣ: ಎಸ್ಐಟಿ ತಂಡಕ್ಕೆ 18 ಮಂದಿ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಿದ ಸರ್ಕಾರ - Hassan Video case

Last Updated : Apr 30, 2024, 6:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.