ETV Bharat / state

ಘಟಾನುಘಟಿಗಳ ಮೊಮ್ಮಕ್ಕಳ ನಡುವೆ ಜಿದ್ದಾಜಿದ್ದಿ: ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಕ್ಷೇತ್ರ - HASSAN LOK SABHA PROFILE

HASSAN CONSTITUENCY, KARNATAKA LOK SABHA ELECTION 2024: ರಾಜ್ಯ ರಾಜಕಾರಣದ ಜಿದ್ದಾಜಿದ್ದಿನ ಕಣಗಳ ಪೈಕಿ ಹಾಸನ ಲೋಕಸಭಾ ಕ್ಷೇತ್ರವೂ ಒಂದು. ಈ ಕ್ಷೇತ್ರ ರಾಜ್ಯವಷ್ಟೇ ಅಲ್ಲದೇ ದೇಶದ ರಾಜಕಾರಣದಲ್ಲಿಯೂ ರಾಜಕೀಯ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿದೆ. ಇಂತಹ ಜಿಲ್ಲೆ ಈಗ ಮತ್ತೊಮ್ಮೆ ಚುನಾವಣಾ ಕದನಕ್ಕೆ ಸಜ್ಜಾಗಿದೆ.

ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಕ್ಷೇತ್ರ
ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಕ್ಷೇತ್ರ
author img

By ETV Bharat Karnataka Team

Published : Apr 22, 2024, 5:39 PM IST

Updated : Apr 23, 2024, 11:55 AM IST

ಹಾಸನ: ಬಿಸಿಲಿನ ಝಳ ಜಾಸ್ತಿಯಾದಂತೆಲ್ಲ ಚುನಾವಣೆಯ ಕಾವೂ ಕೂಡ ಏರತೊಡಗಿದೆ. ಏಪ್ರಿಲ್ 26ರಂದು ಕರ್ನಾಟಕ ಮೊದಲ ಹಂತದ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ಹಾಸನ ಕ್ಷೇತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾಸನ ಮಾಜಿ ಪ್ರಧಾನಿ ಹಾಗು ಹಾಲಿ ರಾಜ್ಯಸಭಾ ಸದಸ್ಯ ಹೆಚ್​.ಡಿ.ದೇವೇಗೌಡರ ಕುಟುಂಬದ ಪ್ರಭಾವ ಇರುವ ಕ್ಷೇತ್ರ. ಅಷ್ಟೆ ಅಲ್ಲ, ಆ ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರವೂ ಹೌದು. ಆದ್ದರಿಂದ ಪ್ರತಿ ಬಾರಿಯೂ ಹಾಸನ ಚುನಾವಣೆ ಒಂದಲ್ಲೊಂದು ಕಾರಣಕ್ಕೆ ಕುತೂಹಲ ಮೂಡಿಸುತ್ತದೆ. ಈ ಬಾರಿಯೂ ಕೂಡ ಅಂತಹದ್ದೇ ವಾತಾವರಣವಿದೆ.

ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆ

ಪ್ರಸಕ್ತ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಎಂ.ಶ್ರೇಯಸ್ ಪಟೇಲ್ ಸ್ಪರ್ಧಿಸಿದ್ದಾರೆ. ಎನ್​ಡಿಎ ಮೈತ್ರಿ ಅಭ್ಯರ್ಥಿಯಾಗಿ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ. ಹಾಸನ ಕ್ಷೇತ್ರ ವ್ಯಾಪ್ತಿಗೆ ಹಾಸನ, ಬೇಲೂರು, ಅರಸೀಕೆರೆ, ಶ್ರವಣಬೆಳಗೊಳ, ಸಕಲೇಶಪುರ, ಹೊಳೆನರಸೀಪುರ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣ ಕ್ಷೇತ್ರದಲ್ಲಿ ಮೈತ್ರಿಕೂಟದ ಬಲವೇ ಹೆಚ್ಚಾದಂತೆ ಕಾಣುತ್ತಿದೆ.

ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆ

ಮೊಮ್ಮಕ್ಕಳ ಜಿದ್ದಾಜಿದ್ದಿ: 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಒಟ್ಟು 6,76,606 ಮತಗಳನ್ನು ಪಡೆದು ಸಂಸತ್​ ಪ್ರವೇಶಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಎ.ಮಂಜು 5,35,282 ಮತಗಳನ್ನು ಪಡೆದು ಸೋಲು ಕಂಡರು. 2024ರ ಲೋಕ ಕದನದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದ್ದರೆ, ಅವರ ಗೆಲುವಿಗೆ ಎದುರಾಗಿ ಮತ್ತು ತಮ್ಮ ತಾತನ ಕಾಲದ ಗತವೈಭವವನ್ನು ಮರುಕಳಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ. ಒಂದು ಕಾಲಕ್ಕೆ ದೇವೇಗೌಡರು ಹಾಗೂ ಪುಟ್ಟಸ್ವಾಮಿಗೌಡರು ಸ್ನೇಹಿತರೇ ಆಗಿದ್ದರು. ನಂತರದಲ್ಲಿ ರಾಜಕೀಯ ದ್ವೇಷಿಗಳಾಗಿದ್ದು ಇತಿಹಾಸ. ದೇವೇಗೌಡರು ಕೂಡ ಒಮ್ಮೆ ಪುಟ್ಟಸ್ವಾಮಿಗೌಡರ ಮುಂದೆ ಸೋಲು ಅನುಭವಿಸಬೇಕಾಯಿತು. ಹಾಗಾಗಿ ಇಬ್ಬರು ಘಟಾನುಗಟಿಗಳ ಮೊಮ್ಮಕ್ಕಳು ಕ್ಷೇತ್ರ ಆಗಿದ್ದರಿಂದ ತುಸು ಕುತೂಹಲ ಉಂಟುಮಾಡಿದೆ.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ

ಕ್ಷೇತ್ರದ ಕಿರು ಪರಿಚಯ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಮೊದಲು, ಅಂದರೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಹಾಸನ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂಬ ಹೆಸರಿತ್ತು. 2008ರಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದ ನಂತರ, ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಸ್ಥಾನಮಾನ ಗಳಿಸಿದ್ದರಿಂದ ಈ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರವಾಗಿಯೇ ಉಳಿಯಿತು. ಆರಂಭದಿಂದ ನೋಡಿದಾಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ನದ್ದೇ ಪಾರುಪತ್ಯ. 1991ರ ನಂತರ ಈ ಕ್ಷೇತ್ರದಲ್ಲಿ ದೇವೇಗೌಡರು ಚುನಾವಣೆಗೆ ನಿಲ್ಲಲಾರಂಭಿಸಿದಾಗಿನಿಂದ ಇದು ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ

ಕ್ಷೇತ್ರದ ಮತದಾರರ: ಕ್ಷೇತ್ರದಲ್ಲಿ ಒಟ್ಟು ಮತದಾರರು 1,701,645. ಇದರಲ್ಲಿ ಪುರುಷರು 8,51,100. ಮಹಿಳೆಯರು 8,50,500. ತೃತೀಯ ಲಿಂಗಿ ಮತದಾರರು 45. ಒಕ್ಕಲಿಗರೇ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದು, ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ

ಅಬ್ಬರದ ಪ್ರಚಾರ: ಕ್ಷೇತ್ರದಿಂದ ದೇವೇಗೌಡರು 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ ಬದಲಾದ ರಾಜಕಾರಣದಿಂದ ಗೌಡರು ಈ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡಬೇಕಾಯಿತು. ಮೊದಲ ಚುನಾವಣೆ ಎದುರಿಸಿದ ಪ್ರಜ್ವಲ್, ಕಾಂಗ್ರೆಸ್ ಬೆಂಬಲದೊಂದಿಗೆ ಮೊದಲ ಚುನಾವಣೆಯಲ್ಲಿಯೇ ಜಯಗಳಿಸಿ, ಸಂಸತ್ ಪ್ರವೇಶ ಮಾಡಿದರು. ಅದೇ ಗೆಲುವಿನ ಉತ್ಸಾಹದಲ್ಲಿರುವ ಪ್ರಜ್ವಲ್ ಅಬ್ಬರ ಪ್ರಚಾರ ಕೂಡ ನಡೆಸಿದ್ದಾರೆ. ಪ್ರಜ್ವಲ್ ಪರ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಸೇರಿ ಜೆಡಿಎಸ್‌ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಹೆಚ್​.ಡಿ.ರೇವಣ್ಣ ಎದುರು ಕೇವಲ 2,380 ಮತಗಳ ಅಂತರದಲ್ಲಿ ಸೋತ ಶ್ರೇಯಸ್ ತಮ್ಮ ಮೇಲಿರುವ ಅನುಕಂಪದ ಲಾಭ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ತಮ್ಮ ಈಗ ಗೆಲುವಿಗೆ ಸಹಕರಿಸುವ ಆಶಯ ಸಹ ಇಟ್ಟುಕೊಂಡಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ

3 ಲೋಕಸಭಾ ಚುನಾವಣೆಯ ಫಲಿತಾಂಶ: 2009ರಲ್ಲಿ ಜೆಡಿಎಸ್​ನ ಹೆಚ್​.ಡಿ.ದೇವೇಗೌಡ 4,96,429 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯ ಕೆ.ಹೆಚ್​.ಹನುಮೇಗೌಡ 2,05,316 ಮತಗಳನ್ನು ಪಡೆದು ಸೋಲು ಕಂಡರು. ಕಾಂಗ್ರೆಸ್​ನ ಬಿ.ಶಿವರಾಮು 2,01,147 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದರು. 2014ರ ಚುನಾವಣೆಯಲ್ಲಿ ಜೆಡಿಎಸ್​ನ ಹೆಚ್​.ಡಿ.ದೇವೇಗೌಡ 5,09,841 ಮತಗಳನ್ನು ಪಡೆದು ಗೆಲುವು ಕಂಡರೆ, ಕಾಂಗ್ರೆಸ್​ನ ಎ.ಮಂಜು 4,09,379 ಮತಗಳನ್ನು ಪಡೆದು ಸೋಲನುಭವಿಸಿದರು. ಬಿಜೆಪಿಯ ಸಿ.ಹೆಚ್​.ವಿಜಯಶಂಕರ್ 1,65,688 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದರು. 2019ರ ಚುನಾವಣೆಯಲ್ಲಿ ಜೆಡಿಎಸ್​ನ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದು ಮೊದಲ ಬಾರಿ ಸಂಸತ್​ ಪ್ರವೇಶ ಮಾಡಿದರೆ, ಬಿಜೆಪಿಯ ಎ.ಮಂಜು 5,35,282 ಮತಗಳನ್ನು ಪಡೆದು ಸೋಲು ಕಂಡರು. ಬಿಎಸ್ಪಿಯ ವಿನೋದ್ ರಾಜ್ ಹೆಚ್. 38,761 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು.

ಹಾಸನ ಲೋಕಸಭಾ ಕ್ಷೇತ್ರ
ಹಾಸನ ಲೋಕಸಭಾ ಕ್ಷೇತ್ರ

ಇದನ್ನೂ ಓದಿ: ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್: ಯಾರ ವಿರುದ್ಧ ಯಾರು ಅಖಾಡದಲ್ಲಿದ್ದಾರೆ, ಇಲ್ಲಿದೆ ಸಂಪೂರ್ಣ ಮಾಹಿತಿ - Lok Sabha election 2024

Last Updated : Apr 23, 2024, 11:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.