ETV Bharat / state

ವಿಧಾನಸೌಧದ ಆವರಣದಲ್ಲಿ ಎಸ್​ಎಂಕೆ ಪ್ರತಿಮೆ ಅನಾವರಣಕ್ಕೆ ಹೆಚ್.ಕೆ.ಪಾಟೀಲ್ ಮನವಿ - SMK STATUE

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್​.ಕೆ.ಪಾಟೀಲ್ ಅವರು ವಿಧಾನಸೌಧದ ಆವರಣದಲ್ಲಿ ಎಸ್​.ಎಂ.ಕೃಷ್ಣ ಪ್ರತಿಮೆ ಅನಾವರಣದ ಕುರಿತು ಸಭಾಧ್ಯಕ್ಷರಿಗೆ ಮನವಿ ಮಾಡಿದರು.

h-k-patil
ಸಚಿವ ಹೆಚ್​.ಕೆ.ಪಾಟೀಲ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Dec 10, 2024, 8:29 PM IST

ಬೆಂಗಳೂರು/ಬೆಳಗಾವಿ: ಎಸ್.ಎಂ.ಕೃಷ್ಣ ಅವರ ಕೊಡುಗೆಗಳನ್ನು ಸ್ಮರಿಸುವ ದೃಷ್ಟಿಯಿಂದ ವಿಧಾನ ಸೌಧದ ಆವರಣದಲ್ಲಿ ಅವರ ಪ್ರತಿಮೆ ನಿರ್ಮಿಸುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಅವರು ಸಭಾಧ್ಯಕ್ಷರಲ್ಲಿ ಮನವಿ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಬಚಾವತ್ ನ್ಯಾಯಾಧೀಕರಣ ಶಿಫಾರಸಿನ ಮೇರೆಗೆ ಕೃಷ್ಣಾ ನದಿ ನೀರಿನಲ್ಲಿ ರಾಜ್ಯಕ್ಕೆ 734 ಟಿ.ಎಂ.ಸಿ ನೀರು ಲಭಿಸಿತು. ಅದುವರೆಗೂ ಕೇವಲ 400 ಟಿ.ಎಂ.ಸಿ ನೀರಿಗೆ ಮಾತ್ರ ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಕೂಡಲೇ 729 ಟಿ.ಎಂ.ಸಿ ನೀರು ಬಳಕೆಗೆ ಎ ಸ್ಕೀಂ ಯೋಜನೆ ರೂಪಿಸಿ ಅನುದಾನ ನೀಡಿದರು. ಸರ್ಕಾರದ ಒಟ್ಟು ಆಯವ್ಯಯದಲ್ಲಿ ಶೇ.37ರಷ್ಟು ನೀರಾವರಿ ಯೋಜನೆಗಳಿಗೆ ಮೀಸಲು ಇರಿಸಿದರು. ಇದರಲ್ಲಿ ಶೇ.75 ರಷ್ಟು ಅನುದಾನ ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಒದಗಿಸುವ ಮೂಲಕ ಉತ್ತರ ಕರ್ನಾಟಕ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದರು ಎಂದು ಹೇಳಿದರು.

ರಾಜ್ಯದ ಪ್ರಾದೇಶಿಕ ಅಸಮತೋಲನತೆಯನ್ನು ನಿವಾರಿಸಲು ಎಸ್.ಎಂ.ಕೃಷ್ಣ ಅವರು ಡಾ.ಡಿ.ಎಂ.ನಂಜುಡಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದರು. ಈ ಸಮಿತಿ ವರದಿಯನ್ನು ಆಧರಿಸಿ ಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಿದರು. ತಮ್ಮ ಅಧಿಕಾರವದಿಯಲ್ಲಿ ಸಹಕಾರ ಸದಸ್ಯರಿಗೆ ಯಶಸ್ವಿನಿ ಯೋಜನೆ ಜಾರಿ ಮಾಡಿದರು. ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಯೋಜನೆ ಜಾರಿ ಮಾಡಿದರು ಎಂದರು.

R. Ashok
ಪ್ರತಿಪಕ್ಷದ ನಾಯಕ ಆರ್.ಅಶೋಕ್ (ETV Bharat)

ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಇಂದು ನಾವೆಲ್ಲರೂ ಹೆಮ್ಮೆಯಿಂದ ಹೇಳುವ ಬ್ರಾಂಡ್ ಬೆಂಗಳೂರು ಎಂಬ ಪರಿಕಲ್ಪನೆಯ ರುವಾರಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಎಂದು ಹೇಳಿದ್ದಾರೆ.

ಬೆಂಗಳೂರಿನ ಜನ ಎಂದಿಗೂ ಎಸ್.ಎಂ.ಕೃಷ್ಣ ಅವರ ಅಭಿವೃದ್ಧಿ ಕಾರ್ಯವನ್ನು ಮರೆಯುವುದಿಲ್ಲ. ಇಂದು ಯಾವುದೇ ಅಂತಾರಾಷ್ಟ್ರೀಯ ನಾಯಕರು ರಾಷ್ಟ್ರಕ್ಕೆ ಬಂದರೆ ತಪ್ಪದೇ ಬೆಂಗಳೂರಿಗೆ ಭೇಟಿ ನೀಡುತ್ತಾರೆ. ಇಂತಹ ಘನತೆ ಬೆಂಗಳೂರು ನಗರಕ್ಕೆ ಬರಲು ಕೃಷ್ಣ ಕಾರಣರಾಗಿದ್ದಾರೆ ಎಂದರು.

ರಾಜ್ಯದ ಆರ್ಥಿಕತೆಗೆ ಶೇ.60ರಷ್ಟು ಕೊಡುಗೆ ಬೆಂಗಳೂರು ನಗರ ನೀಡುತ್ತದೆ. ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಪ್ರತ್ಯೇಕ ಟಾಸ್ಕ್ ಪೋರ್ಸ್ ರಚಿಸಿ, ಕಳಪೆ ಕಾಮಗಾರಿ ಆಗದ ರೀತಿ ನೋಡಿಕೊಂಡರು. ಪತ್ರಿಷ್ಠಿತ ಇಂಡಿಯಾ ಟುಡೆ ಪತ್ರಿಕೆ ಎಸ್.ಎಂ.ಕೃಷ್ಣ ಅವರನ್ನು ದೇಶದ ನಂ.1 ಮುಖ್ಯಮಂತ್ರಿ ಎಂದು ಬಣ್ಣಿಸಿತ್ತು. ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಕಳಂಕ, ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗದೆ ಆಡಳಿತ ನಡೆಸಿದರು ಎಂದು ಹೇಳಿದರು.

ಪಾಂಚಜನ್ಯ ಮೂಲಕ ರಾಜ್ಯದ ಜನರ ಆಶೀರ್ವಾದ ಪಡೆದು ಮುಖ್ಯಮಂತ್ರಿಗಳಾದ ಅವರು, ತಮ್ಮ ಆಡಳಿತ ಅವಧಿಯಲ್ಲಿ ತೀವ್ರ ಬರ ಪರಿಸ್ಥಿತಿ, ಕಂಬಾಲಪಲ್ಲಿ ದಲಿತರ ಹತ್ಯೆ, ಡಾ. ರಾಜ್​ಕುಮಾರ್ ಅಪಹರಣ, ಮಾಜಿ ಸಚಿವ ನಾಗಪ್ಪ ಅಪಹರಣ, ಕಾವೇರಿ ನೀರು ಹಂಚಿಕೆ ಹೋರಾಟ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಇವುಗಳನ್ನು ಶಾಂತ ರೀತಿಯಿಂದ ಪರಿಹರಿಸಿದರು ಎಂದರು.

ಎಸ್.ಎಂ.ಕೃಷ್ಣ ಅವರ ತಂದೆ ಮಲ್ಲಯ್ಯನವರು ಮಂಡ್ಯನಗರದಲ್ಲಿ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಿಸಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ಹರಿಜನರ ಉದ್ದಾರಕ್ಕಾಗಿ ನಿಧಿ ಸಂಗ್ರಹ ಉದ್ದೇಶದಿಂದ ಮಲ್ಲಯ್ಯನವರ ಮನೆಗೂ ಭೇಟಿ ನೀಡಿದ್ದರು. ಈ ವೇಳೆ ಕೃಷ್ಣ ಅವರು ತಮ್ಮ ಬಂಗಾರದ ಕಿವಿಯೋಲೆ ಅರ್ಪಿಸಿ ಗಾಂಧೀಜಿ ಅವರ ಆಶೀರ್ವಾದ ಪಡೆದಿದ್ದನ್ನು ಆರ್.ಅಶೋಕ್ ಸ್ಮರಿಸಿದರು.

Home Minister Dr. G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

ಎಸ್.ಎಂ.ಕೃಷ್ಣ ಕ್ರೀಡಾಸ್ಫೂರ್ತಿ ನಮಗೆಲ್ಲ ಮಾದರಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ತಮ್ಮ ವ್ಯಕ್ತಿತ್ವ ಮೂಲಕವೇ ಎಸ್.ಎಂ.ಕೃಷ್ಣ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಟೆನಿಸ್ ಕ್ರೀಡಾಪಟು ಆಗಿದ್ದ ಅವರು, ರಾಜಕಾರಣದಲ್ಲೂ ಸಹ ಕ್ರೀಡಾಸ್ಪೂರ್ತಿ ಹೊಂದಿದ್ದರು ಎಂದು ಹೇಳಿದರು.

ವಿದ್ಯಾರ್ಥಿ ದೆಸೆಯಿಂದಲೂ ಪ್ರತಿಭಾನ್ವಿತರಾಗಿದ್ದ ಎಸ್.ಎಂ.ಕೃಷ್ಣ ಪ್ರಖ್ಯಾತ ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ಫುಲ್ ಬ್ರೆಂಟ್ ಸ್ಕಾಲರ್‌ಶಿಪ್ ಪಡೆದ ಏಕೈಕ ರಾಜಕಾರಣಿಯಾಗಿದ್ದಾರೆ. ಬೆಂಗಳೂರನ್ನು ಐಟಿ ಕ್ರಾಂತಿ ಮೂಲಕ ಇಡೀ ಜಗತ್ತಿಗೆ ಪರಿಚಯಿಸಿಕೊಟ್ಟರು. ಅವರು ಮುಖ್ಯಮಂತ್ರಿಗಳು ಆಗಿದ್ದ ವೇಳೆ ದಿನವೊಂದಕ್ಕೆ 200ರಿಂದ 300 ಸಣ್ಣ ಹಾಗೂ ದೊಡ್ಡ ಐಟಿ ಕಂಪನಿಗಳು ನೋಂದಣಿಯಾಗಿದ್ದ ಉದಾಹರಣೆ ಇದೆ. ಈ ಕಂಪನಿಗಳೇ ಇಂದು ದೈತ್ಯ ಐಟಿ ಕಂಪನಿಗಳಾಗಿ ಬೆಳೆದಿವೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಶಾಲೆಗಳಲ್ಲಿ ಜಾರಿಗೆ ತಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದೆ ರಾಷ್ಟ್ರೀಯ ನೀತಿಯಾಗಿ ಇಡೀ ದೇಶದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.

ಮುಖ್ಯಮಂತ್ರಿಯಾಗಿ ತಮ್ಮ ಸಂಪುಟದ ಸಹೋದ್ಯೋಗಿಗಳನ್ನು ಗೌರವದಿಂದ ಕಾಣುತ್ತಿದ್ದರು. ಸಚಿವ ಸಂಪುಟ ಒಪ್ಪಿಗೆ ಪಡೆದು ರಾಷ್ಟ್ರಾದ್ಯಂತ ಗಮನಸೆಳೆದ ತೆಲಗಿ ಛಾಪಾ ಕಾಗದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ್ದನ್ನು ಸ್ಮರಿಸಿದರು.

ಸಂತಾಪ ಸೂಚನೆ ನಿರ್ಣಯದ ಮೇಲೆ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಆರಗ ಜ್ಞಾನೇಂದ್ರ ಸೇರಿದಂತೆ ಇತರೆ ಶಾಸಕರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಜೊತೆಗಿನ ಒಡನಾಟ ಹಾಗೂ ಕೊಡುಗೆಯನ್ನು ಸ್ಮರಿಸಿದರು.

ಇದನ್ನೂ ಓದಿ: ವಿಧಾನಸಭೆ, ಪರಿಷತ್​ನಲ್ಲಿ ಎಸ್.ಎಂ.ಕೃಷ್ಣಗೆ ಭಾವಪೂರ್ಣ ಶ್ರದ್ಧಾಂಜಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.