ETV Bharat / state

ಅರಮನೆ ನಗರಿಯಲ್ಲೊಂದು 'ಹಸಿರು ಮನೆ'; 190 ಬಗೆಯ ಗಿಡ, ಬಳ್ಳಿಗಳಿಂದ ಮೈದಳೆದ ವನಸಿರಿ - Green House - GREEN HOUSE

ಮೈಸೂರು ನಗರದ ಗೋಕುಲಂನ ಮೂರನೇ ಹಂತದಲ್ಲಿ ಆಕರ್ಷಕವಾದ ಹಸಿರುಮನೆಯೊಂದು ನಿರ್ಮಾಣವಾಗಿದೆ. ಈ ಮನೆಯ ಸುತ್ತೆಲ್ಲಾ ಸುಮಾರು 190ಕ್ಕೂ ಹೆಚ್ಚಿನ ಪ್ರಬೇಧದ 10 ಸಾವಿರ ಗಿಡಬಳ್ಳಿಗಳಿವೆ.

green house
ಹಸಿರು ಮನೆ
author img

By ETV Bharat Karnataka Team

Published : Apr 11, 2024, 7:03 PM IST

Updated : Apr 11, 2024, 10:27 PM IST

ಮನೆಯ ಮಾಲೀಕ ಬೆಂಜಮಿನ್ ವಾಸು

ಮೈಸೂರು: ಮೈಸೂರಿನ ಕಾಂಕ್ರಿಟ್ ಬಿಲ್ಡಿಂಗ್​ಗಳ ಮಧ್ಯೆ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಹಚ್ಚ ಹಸುರಿನ ಗಿಡಬಳ್ಳಿಗಳಿಂದಲೇ ತುಂಬಿರುವ ಈ ಮನೆ ಎಲ್ಲರ ಮನ ಸೆಳೆಯುತ್ತಿದೆ. ಇದನ್ನು ನಿಸರ್ಗವೇ ನಿರ್ಮಿಸಿದ ಅಪರೂಪದ ಮನೆ ಎನ್ನಬಹುದು. ಮನೆಯೊಳಗೆ ಹೆಜ್ಜೆಯಿಟ್ಟರೆ ಕೂಲ್​ ಕೂಲ್ ಅನ್ನಿಸುವ ಹಿತಾನುಭವ. ಹಾಗಂತ, ಇಲ್ಲಿ ಯಾವುದೇ ಎಸಿ, ಫ್ಯಾನ್​​ಗಳಾಗಲೀ ಇಲ್ಲ. ಆದರೂ, ಈ ಬಿರು ಬೇಸಿಗೆಯಲ್ಲಿ ಇಲ್ಲಿ ತಣ್ಣನೆ ಬೀಸುವ ಗಾಳಿ ನಮ್ಮನ್ನು ಮುದಗೊಳಿಸುತ್ತದೆ.

ಈ ಮನೆ ಮುಂದೆ ನಿಂತರೆ ಇದೊಂದು ಮನೆಯೋ ಅಲ್ಲಾ, ಕಾಡೋ ಅಥವಾ ಮಿನಿವಸ್ತು ಸಂಗ್ರಹಾಲಯವೋ ಅಂತನ್ನಿಸಬಹುದು. ಹೀಗೆ ಗೋಚರಿಸುವ ಈ ಮನೆ ಇರುವುದು ಮೈಸೂರಿನ ಗೋಕುಲಂನ 3ನೇ ಹಂತದಲ್ಲಿ. 45x65 ಅಡಿ ಜಾಗದಲ್ಲಿ ತಲೆ ಎತ್ತಿರುವ ಎರಡಂತಸ್ತಿನ ಮನೆ ಇದಾಗಿದ್ದು ಸಂಪೂರ್ಣ ಹಚ್ಚ ಹಸುರಿಂದ ತುಂಬಿದೆ. ಸುಮಾರು 10 ಸಾವಿರ ಗಿಡಬಳ್ಳಿಗಳನ್ನು ಹೊದ್ದುಕೊಂಡಿದೆ. 190ಕ್ಕೂ ಹೆಚ್ಚು ನಾನಾ ಜಾತಿಯ ಸಸ್ಯರಾಶಿಯಿಂದ ಆವರಿಸಿಕೊಂಡಿರುವ ಈ ಹಸಿರು ಮನೆಯ ಮಾಲೀಕರು ಬೆಂಜಮಿನ್ ವಾಸು.

ಮೂಲತಃ ಕೊಡಗಿನ ಸೋಮವಾರಪೇಟೆಯರಾದ ಬೆಂಜಮಿನ್, ಕಳೆದ 20 ವರ್ಷಗಳ ಹಿಂದೆ ಮೈಸೂರಿಗೆ ಬಂದಿದ್ದರು. ಹೀಗೆ ಬಂದವರು ಎಸ್ಟೇಟ್ ಮಾದರಿಯಲ್ಲಿ ಮನೆ ನಿರ್ಮಿಸುವ ಕನಸು ಕಂಡರು. ಅದರಂತೆ ಇದೀಗ ತಮ್ಮ ಮನೆ ಸುತ್ತಲೂ ಬಗೆಬಗೆಯ ಗಿಡಬಳ್ಳಿಗಳನ್ನು ಬೆಳೆಸಿ ಮನೆಯನ್ನು ಹಸಿರಿನಿಂದ ತುಂಬಿಸಿದ್ದಾರೆ. ಸದ್ಯ ಈ ಮನೆ ಎಲ್ಲರ ಆಕರ್ಷಣೆಯ ಕೇಂದ್ರ.

greenhouse
ಕಪ್ಪೆಚಿಪ್ಪು

ಈ ಮನೆಯಲ್ಲಿ ಸಾಮಾನ್ಯ ಗಿಡಬಳ್ಳಿಗಳೊಂದಿಗೆ ಔಷಧಿಯುಕ್ತ ಬಳ್ಳಿಗಳು, ಹಳೆ ಕಾಲದ ಕಲ್ಲಿನ ಮೂರ್ತಿಗಳು, ಪಾರಂಪರಿಕ ಚಿತ್ರಗಳು, ಆಟಿಕೆಗಳು, ವರ್ಣಚಿತ್ರಗಳು, ಕಲಾಕೃತಿಗಳು, ಪ್ರಾಣಿ, ಪಕ್ಷಿಗಳಿವೆ. ಹೀಗಾಗಿ ನೋಡಲು ಥೇಟ್‌ ಮಿನಿವಸ್ತು ಸಂಗ್ರಹಾಲಯದಂತೆ ಭಾಸವಾಗುತ್ತದೆ. ಮನೆಗೆ ಕ್ರಿಮಿಕೀಟಗಳು ಬರದಂತೆ ಗಿಡಗಳನ್ನು ಹಾಕಿರುವುದು ಇಲ್ಲಿ ಮತ್ತೊಂದು ವಿಶೇಷ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೆಂಜಮಿನ್‌ ವಾಸು ಅವರ ಮಾತುಗಳಲ್ಲೇ ತಿಳಿಯೋಣ.

ಮನೆಯ ಮಾಲೀಕ ಬೆಂಜಮಿನ್ ವಾಸು

"ಮನೆಯಲ್ಲಿ ಸುಮಾರು 10 ಸಾವಿರ ಗಿಡ ಬಳ್ಳಿಗಳನ್ನು ಹಾಕಿದ್ದೇನೆ. ಹಾವುಗಳು ಬರದಂತೆ ತಡೆಯುವ ಗಿಡಗಳು, ಸೊಳ್ಳೆ, ಕ್ರಿಮಿಕೀಟಗಳು ಬರದಂತೆ ತಡೆಯುವ ಗಿಡಗಳನ್ನು ಬೆಳೆಸಿದ್ದೇನೆ. ಇದರಿಂದಾಗಿ ಪಕ್ಷಿಗಳು ಜಾಸ್ತಿ ಸಂಖ್ಯೆಯಲ್ಲಿ ಬಂದು ಮನೆ ಮೇಲೆ ಕುಳಿತುಕೊಳ್ಳುತ್ತವೆ. ಬೆಳಗಿನ ಜಾವ ಹೆಚ್ಚು ಪಕ್ಷಿ ಬರುತ್ತವೆ".

"ಮೈಸೂರಿಗೆ ಬಂದು 20 ವರ್ಷವಾಯಿತು. ಮೊದಲಿನಿಂದಲೂ ಗಿಡ, ಬಳ್ಳಿಗಳನ್ನು ಬೆಳೆಸುತ್ತಿದ್ದೆ. ಕಳೆದ 10 ವರ್ಷಗಳಿಂದ ಮನೆ ಸುತ್ತಮುತ್ತ ಗಿಡ, ಬಳ್ಳಿಗಳನ್ನು ಬೆಳೆಸೋಕೆ ಶುರು ಮಾಡಿದೆ. ಅದು ಈಗ ಇಷ್ಟು ದೊಡ್ಡದಾಗಿ ಬೆಳೆದಿವೆ. ಬಳ್ಳಿಗಳು ಜಾಸ್ತಿ ಇವೆ. ದ್ರಾಕ್ಷಿಯಂಥ ಹಣ್ಣುಗಳಿವೆ. ಆಯುರ್ವೇದಿಕ್​ಗೆ ಬಳಸುವ ಬಳ್ಳಿಗಳಿವೆ. 10 ರೀತಿಯ ವಿಭಿನ್ನ ಬಳ್ಳಿಗಳಿವೆ. 190 ರೀತಿಯ ಗಿಡಗಳಿವೆ. ಔಷಧಿಗೆ ಬೇಕಿರುವ ಬಳ್ಳಿಗಳು ಇವೆ. ಹೂವಿನ ರೀತಿಯ ಬಳ್ಳಿಗಳು ಮತ್ತು ಗಿಡಗಳಿವೆ."

parrot
ಗಿಳಿ

"ಈ ಗಿಡ, ಬಳ್ಳಿಗಳು ತುಂಬಾ ತೇವಾಂಶಭರಿತವಾಗಿವೆ. ಚಳಿಗಾಲ ಮತ್ತು ಮಳೆಗಾಲದಲ್ಲಿ 1 ತಿಂಗಳಿಗೊಮ್ಮೆ ನೀರು ಹಾಯಿಸಿದರೆ ಸಾಕು. ಆದರೆ ಈ ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಹಾಕಬೇಕಾಗುತ್ತದೆ. ಜನರು ಇದನ್ನು ನೋಡಿ ಬಹಳ ಇಷ್ಟಪಡುತ್ತಾರೆ. ಇದರಂತೆ ನಾವೂ ಮನೆ ಕಟ್ಟಬೇಕು ಹಾಗೂ ಗಿಡ ಬಳ್ಳಿಗಳನ್ನು ಬೆಳೆಸಬೇಕು ಎನ್ನುತ್ತಾರೆ."

"ಜಗತ್ತಿನ ತಾಪಮಾನ ಕಡಿಮೆ ಮಾಡಲು ಇದು ಬಹಳ ಅವಶ್ಯಕ. ನಮ್ಮ ಕೊಡಗಿನಲ್ಲಿ ತುಂಬಾ ಜಾಗ ಇತ್ತು. ಅಲ್ಲಿ ಈ ರೀತಿ ಗಿಡ ಬಳ್ಳಿಗಳನ್ನು ಬೆಳೆಸಿದೆ. ಆದರೆ ಇದು ನಗರ. ಈ ರೀತಿ ಬಳ್ಳಿ ಬೆಳೆಸುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಮೊದಲು ಮೈಸೂರಿನಲ್ಲಿ ಇಷ್ಟೊಂದು ತಾಪಮಾನ ಇರಲಿಲ್ಲ. ಆದರೆ ಈಗ ತಾಪ ಹೆಚ್ಚಾಗುತ್ತಿದೆ. ಆದ್ದರಿಂದ ಈ ರೀತಿ ಬಳ್ಳಿಗಳನ್ನು ಬೆಳೆಸುವುದು ಒಳ್ಳೆಯ ಕೆಲಸ ಎಂದು ಜನರು ಹೇಳುತ್ತಿದ್ದಾರೆ."

"ಮೈಸೂರು ವಿವಿಯಿಂದ ವಿದ್ಯಾರ್ಥಿಗಳು ಬರುತ್ತಿರುತ್ತಾರೆ. ಅವರು ಇಂಟರ್​ವ್ಯೂವ್​ ತೆಗೆದುಕೊಂಡು ಹೋಗುತ್ತಾರೆ. ಈ ಗಾರ್ಡನ್ ಬಗ್ಗೆ ಮಾಹಿತಿ ಪಡೆದು ಅಧ್ಯಯನ ಮಾಡುತ್ತಾರೆ. ಇದರ ಗಾಳಿ ಸೇವಿಸಿದರೆ ನಮಗೆ ಖಾಯಿಲೆ ಕೂಡ ಬರುವುದಿಲ್ಲ. ನಾನು ವೈದ್ಯರ ಹತ್ತಿರ ಚೆಕಪ್​ಗೆ ಹೋಗಿ ಸುಮಾರು 30 ವರ್ಷಗಳೇ ಆಗಿವೆ. ಆದರೆ ಕೋವಿಡ್ ಸಮಯದಲ್ಲಿ ವಿಮಾನದಲ್ಲಿ ಹೋಗಬೇಕು ಎಂದಾಗ ಮಾತ್ರ ಕೋವಿಡ್ ಇಂಜೆಕ್ಷನ್ ಸರ್ಟಿಫಿಕೇಟ್ ಕೇಳುತ್ತಾರೆ. ಆ ಸಂದರ್ಭದಲ್ಲಿ ಕೋವಿಡ್​ ಇಂಜೆಕ್ಷನ್ ಮಾಡ್ಸಿದ್ದು ಅಷ್ಟೇ. ಅದು ಬಿಟ್ಟರೆ ಇನ್ನಾವುದೇ ರೀತಿಯ ಇಂಜೆಕ್ಷನ್ ತೆಗೆದುಕೊಂಡಿಲ್ಲ."

greenhouse
ಹಸಿರು ಮನೆ

"ನನಗೆ 66 ವಯಸ್ಸು. ಮನೆಯಲ್ಲಿ ಪ್ರಾಣಿ, ಪಕ್ಷಿಗಳಿರುವ ಚಿಕ್ಕ ಮ್ಯೂಸಿಯಂ ಇದೆ. 250 ಕಲ್ಲಿನ ವಿಗ್ರಹಗಳಿವೆ. 150 ಮರದ ಕೆತ್ತನೆಗಳಿವೆ."

"ನಮಗೆ ಇದು ಆರೋಗ್ಯ ಕೊಡುವಂತಹ ಮನೆ. ಇದರಿಂದ ಉಳಿತಾಯವೂ ಆಗುತ್ತಿದೆ. ಪೇಂಟಿಂಗ್ ಅವಶ್ಯಕತೆ ಇಲ್ಲ. ಇದು ಲಾಭ. ಮೈ ಹುಷಾರಿಲ್ಲದಾಗ ಬೇಕಾಗುವ ಗಿಡಗಳಿವೆ. ನಾಗತಳೆ ಗಿಡವೂ ನಮ್ಮ ಬಳಿ ಇದೆ."

ಇದನ್ನೂ ಓದಿ: ಹಸಿರು ಮನೆಯಲ್ಲಿ ಕೃಷಿ: ಖರ್ಚು ಸ್ವಲ್ಪ ಹೆಚ್ಚಿದ್ದರೂ ಲಾಭ ಮಾತ್ರ ಪಕ್ಕಾ!

Last Updated : Apr 11, 2024, 10:27 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.