ETV Bharat / state

ವಿಶ್ವ ಜಲ ದಿನಾಚರಣೆ: ಜಲಮಂಡಳಿಯಿಂದ ಹೋಟೆಲ್​ಗಳಿಗೆ ಗ್ರೀನ್ ಸ್ಟಾರ್ ಚಾಲೆಂಜ್ ಸ್ಪರ್ಧೆ - Green Star Challenge Competition - GREEN STAR CHALLENGE COMPETITION

ವಿಶ್ವ ಜಲ ದಿನಾಚರಣೆ ನಿಮಿತ್ತ ಜಲಮಂಡಳಿಯಿಂದ ಹೋಟೆಲ್ ಗಳಿಗೆ ಗ್ರೀನ್ ಸ್ಟಾರ್ ಚಾಲೆಂಜ್ ಸ್ಪರ್ಧೆ ಆರಂಭಿಸಿರುವುದಾಗಿ ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ತಿಳಿಸಿದರು.

ಜಲ ಮಂಡಳಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್
ಜಲ ಮಂಡಳಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್
author img

By ETV Bharat Karnataka Team

Published : Mar 22, 2024, 10:57 PM IST

ಬೆಂಗಳೂರು : ವಿಶ್ವ ಜಲ ದಿನಾಚರಣೆಯನ್ನು ವಿನೂತನವಾಗಿ ಆಚರಿಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಗ್ರೀನ್ ಸ್ಟಾರ್ ಚಾಲೆಂಜ್ ಸ್ಪರ್ಧೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ಡಾ ರಾಮಪ್ರಸಾತ್ ಮನೋಹರ್ ಹೇಳಿದರು.

ಶುಕ್ರವಾರ ನಗರದ ಶಾಂಗ್ರಿಲಾ ಹೋಟೆಲ್​​​​​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಪ್ರಸಾತ್ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನೀರನ್ನು ಉಳಿತಾಯ ಮಾಡುವಂತಹ ಎರಿಯೆಟರ್ ಅಳವಡಿಸುವ ಮೂಲಕ ಗ್ರೀನ್ ಸ್ಟಾರ್ ಚಾಲೆಂಜ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, 30 ದಿನಗಳಲ್ಲಿ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತಹ ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ ಗಳಿಗೆ ಬೆಂಗಳೂರು ಜಲ ಮಂಡಳಿಯ ವತಿಯಿಂದ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ತಿಳಿಸಿದರು.

ನೀರಿನ ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು. ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಳ್ಳಬೇಕು. ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ಈ ಎಲ್ಲ ಹೊಸ ಅನುಷ್ಠಾನಗಳ ಬಗ್ಗೆ ಗ್ರಾಹಕರಿಗೆ ಹಾಗೂ ಸಿಬ್ಬಂದಿಗೆ ಮಾಹಿತಿ ಕೊಡುವ ಮೂಲಕ ನೀರಿನ ಉಳಿತಾಯದ ಮಹತ್ವವನ್ನು ಸಾರುಬೇಕು. ಈ ಪಂಚ ಸೂತ್ರಗಳನ್ನು ಅಳವಡಿಸಿಕೊಂಡರೆ ಫೈವ್ ಸ್ಟಾರ್ ಗ್ರೀನ್ ರೇಟಿಂಗ್​​ ನೀಡುವುದಾಗಿ ಘೋಷಿಸಿದರು.

ಇಂದಿನಿಂದ 30 ದಿನಗಳ ಕಾಲ ನಾವು ಹೋಟೆಲ್​ಗಳ ನೀರಿನ ಬಳಕೆಯನ್ನು ಮಾನಿಟರಿಂಗ್ ಮಾಡುತ್ತೇವೆ. ಗ್ರೀನ್ ಸ್ಟಾರ್ ರೇಟಿಂಗ್ ಪಡೆಯಲು ಬಯಸುವಂತಹ ಹೋಟೆಲ್​​​ಗಳು ಈ ಎಲ್ಲ ಕ್ರಮಗಳ ಅಳವಡಿಕೆಯ ನಂತರ ಜಲ ಮಂಡಳಿಗೆ ತಿಳಿಸುವುದು ಅವಶ್ಯಕ. ಆನಂತರ ಜಲ ಮಂಡಳಿಯ ಸಿಬ್ಬಂದಿಗಳು ಅಗತ್ಯ ಪರಿಶೀಲನೆಯನ್ನು ಮಾಡುತ್ತಾರೆ. ನಂತರ ಈ ಪಂಚ ಸೂತ್ರಗಳನ್ನು ಅಳವಡಿಸಿಕೊಂಡಿರುವ ಹೋಟೆಲ್​​​​​ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಿದ್ದಾರೆ.

ಇದೇ ರೀತಿ ಅಪಾರ್ಟ್ಮೆಂಟ್​ಗಳ ಗ್ರೀನ್ ಸ್ಟಾರ್ ರೇಟಿಂಗ್​​​​ಗೆ ನಾಳೆ ಚಾಲನೆ ನೀಡಲಾಗುವುದು. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಗ್ರೀನ್ ಸ್ಟಾರ್ ಚಾಲೆಂಜ್ ಅನ್ನ ಪ್ರಾರಂಭಿಸಲಾಗುವುದು ಇದೇ ಪಂಚಸೂತ್ರಗಳ ಆಧಾರದ ಮೇಲೆ ಅಪಾರ್ಟ್ಮೆಂಟ್ ಗಳಿಗೆ ಗ್ರೀನ್ ಸ್ಟಾರ್ ರೇಟಿಂಗ್ ನೀಡಲಾಗುವುದು ಎಂದು ರಾಮಪ್ರಸಾತ್ ಮಾಹಿತಿ ನೀಡಿದರು.

ನೀರು ಅನಗತ್ಯ ಪೋಲು ಮಾಡುವುದರ ವಿರುದ್ಧ ಅಗತ್ಯ ಕ್ರಮ : ಕುಡಿಯುವ ನೀರಿನ ದುರ್ಬಳಕೆ ತಪ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ಕಚೇರಿಗಳು ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಅನಗತ್ಯವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ದಂಡವನ್ನ ವಿಧಿಸಲಾಗುವುದು. ಜನಸಾಮಾನ್ಯರು ಜಲ ಮಂಡಳಿಯ ಈ ಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಕಣ್ಣುಗಳಾಗಿ ಕಾರ್ಯನಿರ್ವಹಿಸಬೇಕು. ನಗರದ ಯಾವುದೇ ಪ್ರದೇಶದಲ್ಲಿ ಅನಧಿಕೃತವಾಗಿ ಬೋರ್ವೆಲ್​ಗಳನ್ನು ಕೊರೆಯುತ್ತಿರುವುದು ಅಥವಾ ನೀರಿನ ದುರ್ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಮಂಡಳಿಯ ದೂರವಾಣಿ ಸಂಖ್ಯೆಗೆ ದೂರು ನೀಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುಲಾಗುವುದು ಎಂದು ರಾಮಪ್ರಸಾತ್ ಭರವಸೆ ನೀಡಿದರು.

ಬೆಂಗಳೂರು ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆಯ ತೀವ್ರತೆ ಇಳಿಕೆ : ಬೆಂಗಳೂರು ನಗರದ ಹೃದಯ ಭಾಗದಲ್ಲಿ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಇದ್ದಂತಹ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮೊದಲ ಹಂತದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತಿದ್ದವು ಈಗ ಅವುಗಳ ಸಂಖ್ಯೆ 100ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ಸಮರ್ಪಕ ನೀರು ಸರಬರಾಜು ಮಾಡುವ ಮೂಲಕ ದೂರುಗಳ ಮತ್ತು ಸಮಸ್ಯೆಗಳ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಲಾಗುವುದು ಎಂದು ರಾಮಪ್ರಸಾತ್ ನುಡಿದರು.

ಎಲ್ಲಾ ಸುಧಾರಣೆಯ ಕ್ರಮಗಳಲ್ಲಿ ನಗರದ ಜನರ ಸಹಕಾರ ಬಹಳಷ್ಟು ಮುಖ್ಯವಾಗಿದೆ. ನೀರನ್ನು ಮಿತವಾಗಿ ಬಳಸುವುದು ಅಗತ್ಯವಾಗಿ ಪೋಲಾಗುವುದನ್ನು ತಡೆಯುವುದು ಬಹಳ ಮುಖ್ಯವಾಗಿದೆ. ಈ ಬಗ್ಗೆ ಜನರು ಸಹಕಾರ ನೀಡುತ್ತಿದ್ದು, ಇನ್ನಷ್ಟು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಮಪ್ರಸಾತ್ ಮನೋಹರ್ ಕರೆ ನೀಡಿದರು.

ಹೋಳಿ ರೈನ್‌ ಡ್ಯಾನ್ಸ್‌ ಪ್ರಕಟಿಸಿದ್ದ ಹೊಟೇಲ್‌ಗಳಿಗೆ ನೊಟೀಸ್‌ : ಹೋಳಿ ಆಚರಣೆಗೆ ರೈನ್‌ ಡ್ಯಾನ್ಸ್‌ ಆಯೋಜಿಸುವುದಾಗಿ ಪ್ರಕಟಿಸಿದ್ದ ಮೈಸೂರು ರಸ್ತೆಯ ಜೆ.ಕೆ ಗ್ರಾಂಡ್‌ ಅರೆನಾ ಹಾಗೂ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ಗಳಿಗೆ ಶುಕ್ರವಾರ ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ರೈನ್‌ ಡ್ಯಾನ್ಸ್‌ ಗೆ ಕಾವೇರಿ ಹಾಗೂ ಕೊಳವೆ ಬಾವಿ ನೀರು ಬಳಸದಂತೆ ನೊಟೀಸ್‌ ನೀಡಿದರು.

ಸಾಂಸ್ಕೃತಿ ಹಬ್ಬವಾಗಿ ಆಚರಣೆಗೆ ಯಾವುದೇ ನಿಷೇಧ ಇಲ್ಲ. ಆದರೆ ವಾಣಿಜ್ಯ ಉದ್ದೇಶಗಳಿಗಾಗಿ ರೈನ್‌ ಡ್ಯಾನ್ಸ್‌ ಹಾಗೂ ಪೂಲ್‌ ಡ್ಯಾನ್ಸ್‌ ಆಯೋಜಿಸುವುದರಿಂದ ನೀರು ಪೊಲಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದು ಹೊಟೇಲ್‌ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.

ಇದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಟೇಲ್‌ ಸಿಬ್ಬಂದಿಗಳು ಮಂಡಳಿಯ ನಿರ್ದೇಶನದಂತೆ ರೈನ್‌ ಡ್ಯಾನ್ಸ್‌ ಹಾಗೂ ಪೂಲ್‌ ಡ್ಯಾನ್ಸ್‌ ಮಾಡುವುದಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸುವಂತೆ ಸೂಚನೆ ನೀಡಲಾಯಿತು.

ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘಿಸಿದ್ದಲ್ಲಿ ಕೂಡಲೇ ದೂರು ದಾಖಲಿಸಬೇಕು: ತುಷಾರ್ ಗಿರಿನಾಥ್ - Lok Sabha Election

ETV Bharat Logo

Copyright © 2025 Ushodaya Enterprises Pvt. Ltd., All Rights Reserved.