ETV Bharat / state

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ: ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ - Assembly session

author img

By ETV Bharat Karnataka Team

Published : Jul 23, 2024, 10:06 PM IST

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ ಬೆಂಗಳೂರು ನಗರವನ್ನು 10 ಪಾಲಿಕೆಗಳವರೆಗೆ ವಿಭಜಿಸುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ - 2024 ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಮಂಡಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಶ್ವತ್ಥ ನಾರಾಯಣ್, ಸುರೇಶ್ ಕುಮಾರ್ ಸೇರಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು

ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ
ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ (ETV Bharat)

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ ಬೆಂಗಳೂರು ನಗರವನ್ನು 10 ಪಾಲಿಕೆಗಳವರೆಗೆ ವಿಭಜಿಸುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ - 2024 ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಮಂಡಿಸಿದರು.

ಮೇಯರ್‌ ಹಾಗೂ ಉಪ ಮೇಯರ್‌ ಅವಧಿಯನ್ನು 5 ವರ್ಷಕ್ಕೆ ಹೆಚ್ಚಳ, ಪ್ರತಿ ಪಾಲಿಕೆಗಳಲ್ಲಿ ಗರಿಷ್ಠ 200 ವಾರ್ಡ್​ಗಳು ಸೇರಿದಂತೆ ಹಲವು ಮಹತ್ವದ ಅಂಶಗಳುಳ್ಳ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ಮಂಗಳವಾರ ಮಂಡನೆ ಮಾಡಲಾಯಿತು. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಎಲೆಕ್ಟ್ರಾನಿಕ್‌ ಸಿಟಿ, ಬಿಡದಿ, ಆನೇಕಲ್‌ ಸೇರಿ ಎರಡು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿ ಗ್ರೇಟರ್‌ ಬೆಂಗಳೂರು ರಚಿಸುವ ವಿಧೇಯಕ ಇದಾಗಿದೆ‌.

ಮಂಡನೆಗೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ: ಡಿಸಿಎಂ ಡಿ.ಕೆ.ಶಿವಕುಮಾರ್ ವಿಧೇಯಕವನ್ನು ಮಂಡಿಸುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಅಶ್ವತ್ಥ ನಾರಾಯಣ್, ಸುರೇಶ್ ಕುಮಾರ್ ಸೇರಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರ ಬಗ್ಗೆ ಚರ್ಚೆ ಆಗಬೇಕು, ಇದಕ್ಕೆ ನಮ್ಮ ವಿರೋಧ ಇದೆ. ಅವೈಜ್ಞಾನಿಕವಾಗಿ ವಿಧೇಯಕ ತಂದಿದ್ದಾರೆ. ಈಗಾಗಲೇ ಬೆಂಗಳೂರು ನರಕ ಆಗಿದೆ. ಸರ್ಕಾರಕ್ಕೆ ಒಂದು ರೂಪಾಯಿ ಕೊಡೋಕೆ ಯೋಗ್ಯತೆ ಇಲ್ಲ. ಜು.27ಕ್ಕೆ ಸಭೆ ಕರೆದಿದ್ದೀರಲ್ಲ ಇದರ ಬಗ್ಗೆ ಚರ್ಚೆ ಮಾಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಅಧಿಕಾರಿಗಳಿಗೆ ಬೆಂಗಳೂರಿನ ಬಗ್ಗೆ ಏನು ಬದ್ಧತೆ ಇದೆ. ಅವರು ಏನೋ ವಿಧೇಯಕ ಮಾಡಿ ಎಲ್ಲೋ ಹೋಗ್ತಾರೆ. ನಾವು ಇಲ್ಲೇ ಬದುಕಬೇಕು, ಇಲ್ಲೇ ಸಾಯಬೇಕು. ಬೆಂಗಳೂರು ಛಿದ್ರ ಛಿದ್ರ ಮಾಡಿದ್ರೆ. ಕೆಂಪೇಗೌಡರ ಶಾಪ ತಟ್ಟದೇ ನಿಮಗೆ ಇರೋದಿಲ್ಲ. ಬೆಂಗಳೂರನ್ನು ಸರ್ವನಾಶ ಮಾಡೋಕೆ ಹೊರಟಿದ್ದೀರಿ. ಬೆಂಗಳೂರು ಭಾಗ ಮಾಡಿ ಕನ್ನಡ ಕಳೆದುಕೊಳ್ಳಲಿದ್ದೇವೆ. ಎಲ್ಲಾ ಕನ್ನಡಪರ ಸಂಘಟನೆಗಳು ಇದಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ರೇಟರ್ ಬೆಂಗಳೂರು ಅಂತಾ ಮಾಡುತ್ತಿದ್ದೀರಿ. ಇದರ ಬಗ್ಗೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ಆಗಬೇಕು. ಅದಕ್ಕಾಗಿ ಬೆಂಗಳೂರು ಶಾಸಕರ ಸಮಿತಿ ರಚಿಸಿ. ಅಧ್ಯಯನ ವರದಿ ಆಧಾರಿಸಿ ತೀರ್ಮಾನಿಸಿ ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು. ಬೆಂಗಳೂರಿನ ಜನತೆಗೆ ಯಾಕೆ ಕಿರುಕುಳ ಕೊಡುತ್ತಿದ್ದೀರಿ ಎಂದು ಅಶ್ವತ್ಥ​ ನಾರಾಯಣ್ ಟೀಕಿಸಿದರು.

ಡಿಕೆ- ಅಶ್ವತ್ಥ್​ ನಾರಾಯಣ ಜಟಾಪಟಿ: ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಕಿರುಕುಳ ಕೊಡ್ತಿರೋದು ನೀವು, ಬಾಯಿ ದೊಡ್ಡದಿದೆ ಅಂತಾ ಮಾತಾಡಬೇಡಿ. ನಾನು ಹಳ್ಳಿಯಲ್ಲಿ ಹುಟ್ಟಿರಬಹುದು. ಆದರೆ, ನಾನು ಐದು ವರ್ಷದಾಗಿನಿಂದ ಬೆಂಗಳೂರಲ್ಲಿದ್ದೇನೆ. ವಿಧಿಯಿಲ್ಲದೇ ಇವಾಗ ಕನಕಪುರದಲ್ಲಿ ಪ್ರತಿನಿಧಿಸುತ್ತಿದ್ದೇನೆ. ಅವರಿಗೆ ಇದು ಬೇಡ ಅಂದರೆ ನಾವು ಏನು ಮಾಡೋಕೆ ಆಗಲ್ಲ. ಅರ್ಜೆಂಟಾಗಿ ಪಾಸ್ ಮಾಡಿ ಎಂತಲೂ ನಾನು ಹೇಳೋದಿಲ್ಲ. ಬೆಂಗಳೂರನ್ನು ನಿಯಂತ್ರಣ ಮಾಡೋಕೆ ಆಗ್ತಿಲ್ಲ. ನೀರಿನ ಪರಿಸ್ಥಿತಿ, ಕಸದ ಸಮಸ್ಯೆ, ಹೀಗೆ ಬಹಳಷ್ಟು ಸಮಸ್ಯೆಗಳಿವೆ. ಆರ್ಥಿಕತೆ ದೃಷ್ಟಿಯಿಂದ ಈ ಬಿಲ್ ಅನ್ನು ತಂದಿದ್ದೇವೆ. ಬೆಂಗಳೂರು‌ ನಿಮಗೆ ಒಬ್ಬರಿಗೆ ಅಲ್ಲ, ಇಲ್ಲಿ ಕೂತಿರುವ ಎಲ್ಲರಿಗೂ ಸೇರಿದ್ದು. ಹೊರಗಿನಿಂದ ಬಂದವರು ಬೆಂಗಳೂರು ಬಿಟ್ಟು ಹೋಗ್ತಿಲ್ಲ. ನಾನು ಏನು ನಿಮ್ಮನ್ನು ಬಿಟ್ಟು ಇದನ್ನು ಮಾಡಲ್ಲ. ಜು.27ಕ್ಕೆ ಸಭೆ ಕರೆದಿದ್ದೇನೆ ಇದರ ಬಗ್ಗೆ ಚರ್ಚೆ ಮಾಡೋಣ ಎಂದರು.

ಪಾಲಿಕೆ ರಚಿಸಲು ತೀರ್ಮಾನ: ಕನಿಷ್ಠ ಹತ್ತು ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ, ಪ್ರತಿ ಚದರ ಕಿ.ಮೀ.ಗೆ 5 ಸಾವಿರ ಜನಸಂಖ್ಯೆ ಇರಬೇಕು. ಪ್ರತಿ ಪಾಲಿಕೆಗಳಲ್ಲಿ ಕನಿಷ್ಠ 50 ರಿಂದ ಗರಿಷ್ಠ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ‌. ಜಿಬಿಎ ವ್ಯಾಪ್ತಿ ಸುಮಾರು 1400 ಚ.ಕಿ.ಮೀ. ಇರಲಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಬಳಿಕ ಬಿಡಿಎ ಭೂಬಳಕೆ ಮತ್ತು ಅಭಿವೃದ್ಧಿ ನಕ್ಷೆ ಅನುಮೋದಿಸುವ ಅಧಿಕಾರ ಕಳೆದುಕೊಳ್ಳಲಿದೆ. ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಮಾತ್ರ ಹೊಂದಿರಲಿದೆ.

ಸಿಎಂ ಪ್ರಾಧಿಕಾರದ ಅಧ್ಯಕ್ಷರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರಲಿದ್ದಾರೆ. ಬೆಂಗಳೂರು ನಗರ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಬೆಂಗಳೂರು ನಗರಾಭಿವೃದ್ದಿ ಸಚಿವರು ಉಪಾಧ್ಯಕ್ಷರಾಗಿರಲಿದ್ದಾರೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.

ಉಳಿದಂತೆ ಗೃಹ ಸಚಿವ, ನಗರಾಭಿವೃದ್ಧಿ ಸಚಿವ, ಸಾರಿಗೆ ಸಚಿವ, ಇಂಧನ ಸಚಿವ, ಬೃಹತ್‌ ಬೆಂಗಳೂರು ವ್ಯಾಪ್ತಿಯ ಶಾಸಕರಾಗಿ ಸಚಿವರಾಗಿರುವವರು ಪ್ರಾಧಿಕಾರದ ಸದಸ್ಯರಾಗಿರಲಿದ್ದಾರೆ. ಅದೇ ರೀತಿ ಮಹಾನಗರ ಪಾಲಿಕೆಗಳ ಮೇಯರ್‌ಗಳು, ಪ್ರತಿ ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶನಗೊಂಡ ಇಬ್ಬರು, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ಎಂಡಿ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ನಗರ ಯೋಜನಾಧಿಕಾರಿ, ಪ್ರಧಾನ ಮುಖ್ಯ ಎಂಜಿನಿಯರ್‌, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಸದಸ್ಯರಾಗಿರಲಿದ್ದಾರೆ.

ಯಾವ ಇಲಾಖೆಗಳು ಪ್ರಾಧಿಕಾರದ ವ್ಯಾಪ್ತಿಗೆ?: ನಗರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಪ್ರಾಧಿಕಾರ ವ್ಯಾಪ್ತಿಗೆ ಬರಲಿದೆ. ಜಿಬಿಎ ಅಡಿಯಲ್ಲಿಯೇ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ನಮ್ಮ ಮೆಟ್ರೋ, ಸಂಚಾರ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಕಾರ್ಯ ನಿರ್ವಹಿಸಲಿದೆ.

ಇದನ್ನೂ ಓದಿ: ಕೃಷ್ಣ ಜಲಭಾಗ್ಯ ನಿಗಮ ಪರಿಹಾರ ಅಕ್ರಮ: ತನಿಖೆಗೆ ಶೀಘ್ರ ತನಿಖಾ ತಂಡ ರಚನೆ - ಡಿಸಿಎಂ ಡಿ.ಕೆ.ಶಿವಕುಮಾರ್ - D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.