ETV Bharat / state

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಮಾಜಿ ಸಚಿವ ಬಿ.ನಾಗೇಂದ್ರ - B NAGENDRA

ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಕಣ್ಣೀರು ಹಾಕಿದ್ದಾರೆ.

Former minister B Nagendra
ಬಳ್ಳಾರಿಯಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಕಣ್ಣೀರು (ETV Bharat)
author img

By ETV Bharat Karnataka Team

Published : Oct 17, 2024, 3:30 PM IST

Updated : Oct 17, 2024, 7:35 PM IST

ಬಳ್ಳಾರಿ: "ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದವರು ಯಾರೂ ಕೂಡ ಇಂತಹ ನೀಚ ಕೆಲಸಕ್ಕೆ ಕೈ ಹಾಕಲ್ಲ. ಬಳ್ಳಾರಿ ಜಿಲ್ಲೆಗೆ ಬರಬಾರ್ದು ಅಂದುಕೊಂಡಿದ್ದೆ. ಆರೋಪಮುಕ್ತ ಎಂದು ಫ್ರೂವ್ ಮಾಡಿಕೊಂಡು ಬರಬೇಕೆಂದು ಯೋಚಿಸಿದ್ದೆ" ಎಂದು ಹೇಳುತ್ತಾ ಮಾಜಿ ಸಚಿವ ಬಿ.ನಾಗೇಂದ್ರ ಕಣ್ಣೀರು ಹಾಕಿದರು.

ಇಂದು ಬಳ್ಳಾರಿಯಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕೆಟ್ಟ ರಾಜಕೀಯದಿಂದ ನನ್ನನ್ನು ಜೈಲಿಗೆ ಕಳುಹಿಸಿದರು. ನನ್ನ ವಿರುದ್ಧ ರಾಜಕೀಯ ಮಾಡಿದವರನ್ನು ಈ ಜಿಲ್ಲೆಯಿಂದ ಕಿತ್ತೊಗೆಯುವ ಕೆಲಸ ಮಾಡುತ್ತೇವೆ" ಎಂದರು.

ಮಾಜಿ ಸಚಿವ ಬಿ.ನಾಗೇಂದ್ರ ಮಾತು (ETV Bharat)

"ನನ್ನ ಆತ್ಮಕ್ಕೆ ಗೊತ್ತು ವಾಲ್ಮೀಕಿ ನಿಗಮದಲ್ಲಿ ಏನ್ ಆಗಿದೆ ಅಂತ. ಮೂರು ತಿಂಗಳಲ್ಲಿ ನಾನು ಜೈಲಿನಲ್ಲಿ ನೋವು ಅನುಭವಿಸಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ತೀರ್ಮಾನಿಸಿದ್ದೆ. ಹೀಗೆ ಮಾಡಿದರೆ ಜಿಲ್ಲೆ, ರಾಜ್ಯದ ಜನರು ನಾನು ತಪ್ಪು ಮಾಡಿದ್ದೇನೆ ಎಂದು ತಿಳಿದುಕೊಳ್ತಾರೆ. ಹೀಗಾಗಿ ನಾನು ದೋಷಮುಕ್ತನಾಗಿ ಹೊರಬರುವೆ" ಎಂದು ಹೇಳಿದರು.

ಅದ್ಧೂರಿ ಸ್ವಾಗತ: ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ಮೂರು ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ಇಂದು ಬಳ್ಳಾರಿಗೆ ಆಗಮಿಸಿದ ಬಿ.ನಾಗೇಂದ್ರ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ಎಸ್​ಪಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಶಾಸಕ ಭರತ್ ರೆಡ್ಡಿ ಅವರೊಂದಿಗೆ ವಾಲ್ಮೀಕಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಆ ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಡ್ಯಾನ್ಸ್ ಮಾಡಿದರು.

ಮಾಜಿ ಸಚಿವ ಬಿ.ನಾಗೇಂದ್ರ ಹೇಳಿಕೆ (ETV Bharat)

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾಗೇಂದ್ರ, "ವಾಲ್ಮೀಕಿ ಸಮುದಾಯದ ಮಗನಾಗಿ ವಾಲ್ಮೀಕಿ ಜಯಂತಿಯಂದು ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತಾಡೋಕೆ ಬೇಸರವಾಗ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲವೂ ಬಿಜೆಪಿ ಕುತಂತ್ರ. ಸಿಬಿಐ, ಇ.ಡಿ. ಬಳಸಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುವೆ" ಎಂದರು.

ಇದೇ ವೇಳೆ ಜನಾರ್ದನ ರೆಡ್ಡಿಗೆ ಎದುರೇಟು ನೀಡಿ, "ಜನಾರ್ದನ ರೆಡ್ಡಿ ಇ.ಡಿ., ಸಿಬಿಐ ಭಯದಿಂದ ಬಿಜೆಪಿ ಸೇರಿದ್ದಾರೆ. ಅವರು ಕೆಆರ್​ಪಿಪಿ ಪಕ್ಷ ಕಟ್ಟಿದಾಗ ಬಿಜೆಪಿ ವಿರುದ್ದ ಸಾಕಷ್ಟು ಆರೋಪಗಳನ್ನು ಮಾಡಿದ್ದರು" ಎಂದು ಹೇಳಿದರು.

"ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ ಅರಮನೆ ಮಾಡಿದ್ರೂ ಕಾಂಗ್ರೆಸ್ ಗೆಲುವು ಫಿಕ್ಸ್. ಅವರು ಬಳ್ಳಾರಿಗೆ ಬಂದಿರೋದು ನಮ್ಮ‌ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ" ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿ.ನಾಗೇಂದ್ರ; ಇ.ಡಿ. ತನಿಖೆ, ಒತ್ತಡದ ಬಗ್ಗೆ ಸಮಾಲೋಚನೆ

Last Updated : Oct 17, 2024, 7:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.