ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆರು ಮಂದಿಯನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ 12 ರಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಈ ಕೆಳಕಂಡ ವ್ಯಕ್ತಿಗಳನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
- ಡಾ. ಸಿ.ಜಗದೀಶ್, ಡಾ. ಸಿ.ಜಗದೀಶ್ ಡೆಂಟಲ್ ಕ್ಲಿನಿಕ್ ಇಂದಿರಾನಗರ ಬೆಂಗಳೂರು.
- ಡಾ.ಪಶುಪತಿ ಎಂ., ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕರು, ವಿಜಯನಗರ ಬೆಂಗಳೂರು.
- ಡಾ. ಕಿರಣ್ ಕುಮಾರ್.ಎಸ್. ಕುಳಗೇರಿ, ಚಿಕ್ಕಮಕ್ಕಳ ತಜ್ಞರು, ಸಮುದಾಯ ಆರೋಗ್ಯಕೇಂದ್ರ ಕೆರೂರ, ಬಾದಾಮಿನಗರ, ಬಾಗಲಕೋಟೆ ಜಿಲ್ಲೆ.
- ಡಾ. ಬಿ.ಕೆ. ಮಧುಸೂದನ್, ವಿಭಾಗದ ಮುಖ್ಯಸ್ಥರು, ಹಿರಿಯ ಸಲಹೆಗಾರರು, ನ್ಯೂರಾಲಜಿ ಮತ್ತು ಸ್ಟ್ರೋಕ್ ಸರ್ವಿಸ್, ಸಾಗರ್ ಆಸ್ಪತ್ರೆ ಬೆಂಗಳೂರು.
- ಡಾ. ಶೀಲಾ. ವಿ. ಮಾನೆ, ಪ್ರಾಧ್ಯಾಪಕರು, ಒಬಿಜಿ ವಿಭಾಗ, ವಸಂತನಗರ ಬೆಂಗಳೂರು.
- ಡಾ.ಮಹ್ಮದ್ ರಫೀಕ್, ಡೆಂಟಲ್ ಕ್ಲಿನಿಕ್, ಕಲಬುರಗಿ.