ಶಿವಮೊಗ್ಗ: ಶಟಲ್ ಬ್ಯಾಡ್ಮಿಂಟನ್ ಆಡಿ ವಿಶ್ರಾಂತಿ ಪಡೆಯುತ್ತಿದ್ದ ಸರ್ಕಾರಿ ಅಧಿಕಾರಿಯೊಬ್ಬರು ಕುಳಿತಲ್ಲಿಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ಮಲ್ಲಿಕಾರ್ಜುನ್ (50) ಮೃತ ಅಧಿಕಾರಿ. ಮಲ್ಲಿಕಾರ್ಜುನ್ ಡಯಟ್ ಆಫೀಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಲ್ಲಿಕಾರ್ಜುನ್ ಸಾವಿಗೆ ಶಿವಮೊಗ್ಗ ಸೈಕಲ್ ಕ್ಲಬ್ನ ಅಧ್ಯಕ್ಷ ಶ್ರೀಕಾಂತ್ ಭಾರದ್ವಾಜ್ ಹಾಗೂ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರಣೋದಯ ಘಟಕದ ವಾಗೀಶ್ ಮತ್ತು ರೋಟರಿ ಸಂಸ್ಥೆ ಜಿ ವಿಜಯಕುಮಾರ್, ನರಸಿಂಹಮೂರ್ತಿ, ಬ್ಯಾಡ್ಮಿಂಟನ್ ಆಟಗಾರರು ಹಾಗೂ ಸುರಹೊನ್ನೇ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ನಟ ವಿನೋದ್ ರಾಜ್ ಆರೋಗ್ಯದಲ್ಲಿ ಏರುಪೇರು; ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ - Vinod Raj