ETV Bharat / state

ಹೆಚ್ಚಿನ ಆದಾಯ ಸಂಗ್ರಹಕ್ಕೆ ತೈಲ ಬೆಲೆ ಏರಿಸಿದ ಸರ್ಕಾರ: ಅಷ್ಟಕ್ಕೂ ತೈಲ ಮಾರಾಟ ಮೇಲಿನ‌ ತೆರಿಗೆ ಸಂಗ್ರಹದ ಸ್ಥಿತಿಗತಿ ಏನಿದೆ? - Tax collection on oil sales

ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಏರಿಸಿರುವ ಕಾಂಗ್ರೆಸ್​ ಸರ್ಕಾರ, ತೈಲ ಮಾರಾಟ ತೆರಿಗೆಯಿಂದ ಬರುವ ಆದಾಯದಿಂದ ರಾಜ್ಯದ ಬೊಕ್ಕಸ ತುಂಬಿಸಲು ನಿರ್ಧರಿಸಿದೆ.

fuel price
ಪೆಟ್ರೋಲ್ ಬಂಕ್​, ವಿಧಾನಸೌಧ (ETV Bharat)
author img

By ETV Bharat Karnataka Team

Published : Jun 19, 2024, 6:44 AM IST

ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ. ಸಂಪನ್ಮೂಲ ಕ್ರೋಢೀಕರಣಕ್ಕಾಗಿ ತೆರಿಗೆ ಹೆಚ್ಚಳ ಮಾಡಿದ್ದೇವೆ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ. ಅಷ್ಟಕ್ಕೂ ರಾಜ್ಯದ ಬೊಕ್ಕಸಕ್ಕೆ ತೈಲ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯಿಂದ ಬರುವ ಆದಾಯ ಏನು ಎಂಬ ವರದಿ ಇಲ್ಲಿದೆ.

ರಾಜ್ಯ ಸರ್ಕಾರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದ ಹಾಗೆ ಅಚಾನಕ್ ಆಗಿ ತೈಲ ಬೆಲೆ ಏರಿಸುವ ಮೂಲಕ ಶಾಕ್ ನೀಡಿದೆ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು ಏರಿಕೆ ಮಾಡುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಆ ಮೂಲಕ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ತಲಾ 3ರೂ. ವಷ್ಟು ಏರಿಕೆ ಕಂಡಿದೆ. ರಾಜ್ಯದ ಪ್ರಮುಖ ಆದಾಯ ಮೂಲಗಳಲ್ಲಿ ಮಾರಾಟ ತೆರಿಗೆ ಒಂದಾಗಿದೆ. ಇದೀಗ ತೈಲ ಬೆಲೆ ಏರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3,000 ಕೋಟಿ ರೂ. ವರೆಗೆ ಹೆಚ್ಚುವರಿ ಆದಾಯ ಬರುವ ನಿರೀಕ್ಷಿಸಲಾಗಿದೆ.

ರಾಜ್ಯದ ಅಭಿವೃದ್ಧಿಗಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವ ಹಿನ್ನೆಲೆ ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ತೈಲ ಬೆಲೆ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಸಮಜಾಯಿಶಿ ನೀಡುತ್ತಿದ್ದಾರೆ. ಜಿಎಸ್​ಟಿಯಿಂದ ನಮಗೆ ಬರುವ ತೆರಿಗೆ ಮೂಲಗಳು ಸೀಮಿತವಾಗಿದೆ. ಹೀಗಾಗಿ ಮಾರಾಟ ತೆರಿಗೆ ಮೂಲಕ ಆದಾಯ ಸಂಗ್ರಹದ ಮೊರೆ ಹೋಗಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ‌. ಅಷ್ಟಕ್ಕೂ ರಾಜ್ಯದ ಬೊಕ್ಕಸದ ಮೇಲೆ ಮಾರಾಟ ತೆರಿಗೆಯ ಕೊಡುಗೆ ಏನು ಎಂಬ ವರದಿ ಇಲ್ಲಿದೆ.

ನಿರೀಕ್ಷಿತ ಗುರಿ ಮುಟ್ಟದ ವಾಣಿಜ್ಯ ತೆರಿಗೆ ಸಂಗ್ರಹ: 2024-25ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ 1,10,000 ಕೋಟಿ ರೂ‌. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನೀಡಿದೆ. ವಾಣಿಜ್ಯ ತೆರಿಗೆ ರಾಜ್ಯ ಸರ್ಕಾರದ ಅತಿ ದೊಡ್ಡ ಆದಾಯ ಮೂಲವಾಗಿದೆ. ಈ ವಾಣಿಜ್ಯ ತೆರಿಗೆಯಲ್ಲಿ ಜಿಎಸ್​ಟಿ, ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ಒಳಗೊಂಡಿರುತ್ತದೆ. ರಾಜ್ಯದ ಬೊಕ್ಕಸದಲ್ಲಿ ವಾಣಿಜ್ಯದ ತೆರಿಗೆಯದ್ದೇ ಬಹುಪಾಲಾಗಿದೆ. ಆರ್ಥಿಕ ವರ್ಷದ ಎರಡು ತಿಂಗಳಲ್ಲಿ ವಾಣಿಜ್ಯ ತೆರಿಗೆ ನಿರೀಕ್ಷಿತ ಗುರಿ ಮುಟ್ಟಿಲ್ಲ.

ಎರಡು ತಿಂಗಳಲ್ಲಿ ರಾಜ್ಯ ವಾಣಿಜ್ಯ ತೆರಿಗೆ ರೂಪದಲ್ಲಿ ಒಟ್ಟು 17,089 ಕೋಟಿ ರೂ. ಆದಾಯ ಸಂಗ್ರಹಿಸಿದೆ. ಈ ವರ್ಷದಲ್ಲಿ ಮಾಸಿಕ 9,166 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನಿಗದಿಯಾಗಿದೆ. ಅದರಂತೆ ಎರಡು ತಿಂಗಳಲ್ಲಿ ಒಟ್ಟು 18,332 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಮಾಡಬೇಕಿತ್ತು. ಆದರೆ, ಈವರೆಗೆ 17,089 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ. ಅಂದರೆ 1,243 ಕೋಟಿ ರೂ. ಕೊರತೆಯಾಗಿದೆ. ಮೊದಲ ತಿಂಗಳಾದ ಏಪ್ರಿಲ್​ನಲ್ಲಿ 9,665 ಕೋಟಿ ರೂ. ವಾಣಿಜ್ಯ ತೆರಿಗೆಯನ್ನು ಬಜೆಟ್ ಗುರಿ ಮೀರಿ ಸಂಗ್ರಹ ಮಾಡಲಾಗಿತ್ತು. ಆದರೆ, ಮೇ ತಿಂಗಳಲ್ಲಿ ಅದು 7,424 ಕೋಟಿ ರೂ.ಗೆ ಕುಸಿತವಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.19.2 ರಷ್ಟಿದ್ದು, ದೇಶದಲ್ಲಿಯೇ ಅತಿ ಹೆಚ್ಚಿದೆ.‌ ದೇಶದ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ದರ ಶೇ.15 ರಷ್ಟು ಮಾತ್ರ ಇದೆ. ಈ ಬಾರಿ ಶೇ.24ರ ಬೆಳವಣಿಗೆ ಗುರಿಯನ್ನು ನೀಡಲಾಗಿದೆ. ಗುರಿಗಿಂತ ಹೆಚ್ಚಿನ ಸಾಧನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ವಾಣಿಜ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತೈಲ ಮೇಲಿನ ಮಾರಾಟ ತೆರಿಗೆ ಸಂಗ್ರಹ ಏನಿದೆ?: ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ವಿಧಿಸುವ ಮಾರಾಟ ತೆರಿಗೆ ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತೆ. ಹೆಚ್ಚಿನ ಆದಾಯ ಸಂಗ್ರಹಕ್ಕಾಗಿ ಮೊನ್ನೆಯಷ್ಟೇ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿತ್ತು. ಆ ಮೂಲಕ ತೈಲ ಬೆಲೆಯನ್ನು ತಲಾ 3 ರೂ.ನಷ್ಟು ಏರಿಕೆ ಮಾಡಿತ್ತು. ಈ ಬೆಲೆ ಏರಿಕೆ ಮೂಲಕ ಸುಮಾರು 3,000 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹದ ಗುರಿ ಹೊಂದಲಾಗಿದೆ.

2024-25ರ ಎರಡು ತಿಂಗಳಲ್ಲಿ ರಾಜ್ಯ ಸರ್ಕಾರ 3,543 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಮಾಡಿದೆ. ಏಪ್ರಿಲ್ ತಿಂಗಳಲ್ಲಿ 1,811 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಮಾಡಿದ್ದರೆ, ಮೇ ತಿಂಗಳಲ್ಲಿ 1,731 ಕೋಟಿ ರೂ. ತೈಲ ಬೆಲೆ ಮೇಲಿನ ಮಾರಾಟ ತೆರಿಗೆ ಸಂಗ್ರಹ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಮಾರಾಟ ತೆರಿಗೆ ರೂಪದಲ್ಲಿ ಒಟ್ಟು 20,578 ಕೋಟಿ ರೂ. ಆದಾಯ ಸಂಗ್ರಹ ಮಾಡಿತ್ತು. ಇದೀಗ ತೈಲ ಬೆಲೆ ಏರಿಸುವ ಮೂಲಕ ಹೆಚ್ಚುವರಿ ವಾರ್ಷಿಕ ಸುಮಾರು 3,000 ಕೋಟಿ ಮಾರಾಟ ತೆರಿಗೆ ಸಂಗ್ರಹದ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಗಗನಮುಖಿಯಾದ ಪೆಟ್ರೋಲ್, ಡೀಸೆಲ್ ಬೆಲೆ; ದರ ಏರಿಕೆಗೆ ಬೆಳಗಾವಿ ಮಂದಿ ಏನಂತಾರೆ? - petrol and diesel price hike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.