ETV Bharat / state

ನಿಮ್ಮ ಮೊಬೈಲ್ ಕಳುವಾಗಿದೆಯೇ ? ಹಾಗಾದ್ರೆ ಸಿಇಐಆರ್ ಪೋರ್ಟಲ್​ಗೆ ದೂರು ನೀಡಿ - CEIR PORTAL TO FIND MOBILES - CEIR PORTAL TO FIND MOBILES

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಸಿಇಐಆರ್ ಪೋರ್ಟಲ್ ಜಾರಿಗೆ ತಂದಿದೆ. ಒಂದು ವೇಳೆ ಮೊಬೈಲ್ ಕಳ್ಳತನವಾದರೆ ಆನ್​ಲೈನ್ ಮೂಲಕ ನೇರವಾಗಿ ದೂರು ಸಲ್ಲಿಸಬಹುದಾಗಿದೆ.

Mobiles
ಕಳುವಾದ ಮೊಬೈಲ್​ಗಳು (ETV Bharat)
author img

By ETV Bharat Karnataka Team

Published : Jun 23, 2024, 9:10 PM IST

ಎಸ್ಪಿ ಅಂಶುಕುಮಾರ್ (ETV Bharat)

ಹಾವೇರಿ : ಸಂವಹನ ಸಂಪರ್ಕ ಸಾಧನ ಮೊಬೈಲ್​ ಇಂದು ಎಲ್ಲರ ಕೈಯಲ್ಲೂ ರಿಂಗಣಿಸುತ್ತಿರುತ್ತದೆ. ಮೊಬೈಲ್ ಇಲ್ಲದೆ ಜೀವನ ಸಾಗಿಸುವುದೇ ಕಷ್ಟ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.

ಸರ್ಕಾರ ಸಿಇಐಆರ್ ಜಾರಿಗೆ; ಹೌದು, ಬಹುತೇಕರು ಒಂದಿಲ್ಲ ಒಂದು ಕಾರಣಕ್ಕೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಸಾವಿರ ರೂಪಾಯಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊಬೈಲ್ ಖರೀದಿ ಮಾಡುತ್ತಾರೆ. ಆದರೆ, ಈ ರೀತಿ ಖರೀದಿ ಮಾಡಿದ ಮೊಬೈಲ್​ ಕದಿಯುವ ಖದೀಮರ ಸಂಖ್ಯೆಯೇನು ಕಡಿಮೆಯಿಲ್ಲ. ಇದಕ್ಕಾಗಿ ಸರ್ಕಾರ ಸಿಇಐಆರ್ ಜಾರಿಗೆ ತಂದಿದೆ.

ಸೆಂಟ್ರಲ್ ಎಕ್ಯುಪ್​ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಆರಂಭಿಸಿದೆ. ಬೇರೆ ಪ್ರಕರಣಗಳಲ್ಲಿ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದಂತೆ ಮೊಬೈಲ್ ಕಳೆದಾಗ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡುವ ಅವಶ್ಯಕತೆ
ಇಲ್ಲಿಲ್ಲ. ಅದರ ಬದಲು ಮೊಬೈಲ್ ಕಳೆದುಕೊಂಡವರು ಆನ್​ಲೈನ್‌ನಲ್ಲಿ ನೇರವಾಗಿ ದೂರು ಸಲ್ಲಿಸಬಹುದು. ಜೊತೆಗೆ ಹತ್ತಿರದ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಸಲ್ಲಿಸಿದರೂ ನಡೆಯುತ್ತೆ.

ಈ ರೀತಿ ಹಾವೇರಿ ಜಿಲ್ಲೆಯಲ್ಲಿ ಕೇವಲ 15 ದಿನಗಳ ಅಂತರದಲ್ಲಿ ಅಂದರೆ 08-06-2024 ರಿಂದ 22-06-2024 ರವರೆಗೆ ಸುಮಾರು 245 ಕಳ್ಳತನವಾದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಸಿಇಐಆರ್ ಪ್ರಕರಣಗಳಲ್ಲಿ ದಾಖಲು ಮಾಡಿರುವ ಮೊಬೈಲ್‌ಗಳ ವಿತರಣಾ ಕಾರ್ಯ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಇಂದು ನಡೆಯಿತು.

ಹಾವೇರಿ ಎಸ್ಪಿ ಅಂಶುಕುಮಾರ್ ಮೊಬೈಲ್ ಕಳೆದುಕೊಂಡು ಪ್ರಕರಣ ದಾಖಲಿಸಿದವರಿಗೆ ಮೊಬೈಲ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ''ದಿನದಿಂದ ದಿನಕ್ಕೆ ಮಾನವ ಮೊಬೈಲ್‌ಗೆ ಹೆಚ್ಚು ಅವಲಂಬನೆಯಾಗುತ್ತಿದ್ದಾನೆ. ಇದರ ಜೊತೆಗೆ ಮೊಬೈಲ್ ಬಳಕೆ ಅಧಿಕವಾಗುತ್ತಿದ್ದು, ಕೆಲವೊಂದು ಮೊಬೈಲ್‌ಗಳನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಲಾಗುತ್ತದೆ.

ಇಂತಹ ಹೆಚ್ಚು ಬೆಲೆಯ ಮೊಬೈಲ್ ಕಳ್ಳತನವಾದಾಗ ಆತಂಕಕ್ಕೆ ಒಳಗಾಗದೆ ಸಿಇಐಆರ್ ಪೊರ್ಟಲ್‌ನಲ್ಲಿ ದೂರು
ದಾಖಲಿಸಿದರೆ, ಆದಷ್ಟು ಬೇಗ ಮೊಬೈಲ್ ಹುಡುಕಲು ಸಹಾಯವಾಗುತ್ತೆ'' ಎಂದು ತಿಳಿಸಿದರು. ಮೊಬೈಲ್ ಮರುಪಡೆದ ಬಳಕೆದಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಮೊಬೈಲ್​ ಖರೀದಿ ಬಿಲ್​ ಇಟ್ಟುಕೊಳ್ಳಿ; ಮೊಬೈಲ್ ಖರೀದಿ ಮಾಡುವಾಗ ಬಿಲ್ ಸರಿಯಾಗಿ ಇಟ್ಟುಕೊಂಡು ಕಳ್ಳತನವಾದಾಗ ಪೋರ್ಟಲ್‌ನಲ್ಲಿ ಸರಿಯಾಗಿ ದಾಖಲು ಮಾಡಿದರೆ, ಪೊಲೀಸರಿಗೆ ಮೊಬೈಲ್ ಹುಡುಕಲು ಅನುಕೂಲವಾಗುತ್ತೆ. ಮೊಬೈಲ್ ಕಳೆದುಕೊಂಡವರಿಗೆ ಸಿಇಐಆರ್ ಪೋರ್ಟಲ್ ಹೆಚ್ಚು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ರಶ್‌ ಇರುವ ಬಸ್‌ಗಳಲ್ಲಿ ಮೊಬೈಲ್​ ದೋಚುತ್ತಿದ್ದ ಅಂತರ್‌ರಾಜ್ಯ ಕಿಸೆಕಳ್ಳರ ಬಂಧನ: ₹30 ಲಕ್ಷ ಮೌಲ್ಯದ 107 ಫೋನ್‌ಗಳು‌ ವಶಕ್ಕೆ - Mobile Theft Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.