ETV Bharat / state

ಸರ್ಕಾರಿ ಅತಿಥಿ ಗೃಹದ ಸಾಮಗ್ರಿ ನಾಪತ್ತೆ ಕೇಸ್​: ರೋಹಿಣಿ ಸಿಂಧೂರಿ ವಿರುದ್ಧದ ಪ್ರಕರಣ ಮುಕ್ತಾಯ - GUEST HOUSE PROPERTY MISSING CASE

ರೋಹಿಣಿ ಸಿಂಧೂರಿ ಅವರು ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಸರ್ಕಾರಿ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗೆ ತಗಲುವ ಮೊತ್ತವನ್ನು ಅಂದಿನ ಅತಿಥಿ ಗೃಹದ ವ್ಯವಸ್ಥಾಪಕರು ಪಾವತಿ ಮಾಡಿದ್ದಾರೆ.

ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ (ETV Bharat)
author img

By ETV Bharat Karnataka Team

Published : Dec 10, 2024, 10:54 PM IST

ಮೈಸೂರು: ರೋಹಿಣಿ ಸಿಂಧೂರಿ ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ, ಸರ್ಕಾರಿ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗೆ ತಗಲುವ ಮೊತ್ತವನ್ನು ಅಂದಿನ ಅತಿಥಿ ಗೃಹದ ವ್ಯವಸ್ಥಾಪಕರಾಗಿದ್ದ ವಿಶ್ವಾಸ್​ ಪಾವತಿಸಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ಅವರ ಮೇಲಿದ್ದ ಸಾಮಗ್ರಿ ನಾಪತ್ತೆ ಪ್ರಕರಣ ಇತ್ಯರ್ಥವಾಗಿದೆ.

ರೋಹಿಣಿ ಸಿಂಧೂರಿ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದಲ್ಲಿ ನಾಪತ್ತೆಯಾಗಿದ್ದ ಸಾಮಗ್ರಿಗಳ ಪ್ರಕರಣ ಸಂಬಂಧ ಅವರ ವೇತನದಲ್ಲಿ ಕಡಿತಗೊಳಿಸಿ ಆ ಹಣವನ್ನು ನಮಗೆ ನೀಡುವಂತೆ ಮೈಸೂರು ನಗರದ ಆಡಳಿತ ತರಬೇತಿ ಸಂಸ್ಥೆಯು ಎಟಿಐ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

ಇದೀಗ ಅಂದಿನ ವಸತಿಗೃಹದ ವ್ಯವಸ್ಥಾಪಕರಾಗಿದ್ದ ವಿಶ್ವಾಸ್ ಅವರು ಸಂಸ್ಥೆಯ ಖಾತೆಗೆ 77,296 ರೂ ಜಮಾ ಮಾಡಿದ್ದು ಪ್ರಕರಣ ಮುಕ್ತಾಯವಾಗಿದೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣರ ಆಡಳಿತ ವೈಖರಿಯ ಬಗ್ಗೆ ಹೆಚ್.ವಿಶ್ವನಾಥ್ ಮನದಾಳದ ಮಾತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.