ಬೆಂಗಳೂರು : ಕೋನದಾಸಪುರ ವಸತಿ ಸಮುಚ್ಚಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಬಿ.ಡಿ.ಎ ಹೇಳಿದೆ.
ಈ ಮೇಳದಲ್ಲಿ ನಾಗರಬಾವಿ ಚಂದ್ರಾ ಬಡಾವಣೆಯಲ್ಲಿ 3 ಬಿ.ಹೆಚ್.ಕೆ ಫ್ಲಾಟ್ಗಳಲ್ಲಿ ಕೆಲವು ಫ್ಲಾಟ್ಗಳು ಮಾತ್ರ ಹಂಚಿಕೆಗೆ ಲಭ್ಯವಿದ್ದವು. ಉಳಿದ ಫ್ಲಾಟ್ಗಳು ಮಾರಾಟವಾದವು. ಕಣಿಮಿಣಿಕೆಯಲ್ಲಿ 2 ಬಿ.ಹೆಚ್.ಕೆ ಫ್ಲಾಟ್ಗಳು ಮತ್ತು ಕೋನದಾಸಪುರ ಹಂತ-2ರ (2 ಬಿ.ಹೆಚ್.ಕೆ) ‘ಎಫ್’ ಬ್ಲಾಕ್ ಹಂಚಿಕೆಗೆ ಲಭ್ಯವಿತ್ತು. ಇವನ್ನೆಲ್ಲ ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ ಎಂದಿದೆ.

ಶನಿವಾರ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ನಡೆಸಲಾಗುತ್ತಿದ್ದು, ಪೂರ್ವಾಹ್ನದಲ್ಲಿಯೇ ಅತಿ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಫ್ಲಾಟ್ ಮೇಳದಲ್ಲಿ ಒಟ್ಟಾರೆಯಾಗಿ 150 ಫ್ಲಾಟ್ಗಳು ಸ್ಥಳದಲ್ಲಿಯೇ ಮಾರಾಟವಾಗಿ 75 ಫ್ಲಾಟ್ ಹಂಚಿಕೆದಾರರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ.
ಬಾಕಿ 75 ಫ್ಲಾಟ್ಗಳ ಖರೀದಿದಾರರು ತಾಂತ್ರಿಕ ಕಾರಣಗಳಿಂದ ಆನ್ಲೈನ್ ಮೂಲಕ ಫ್ಲಾಟ್ ಮೊತ್ತವನ್ನು ಪಾವತಿಸಲಾಗದೇ ಚೆಕ್ ಅನ್ನು ನೀಡಿದ್ದಾರೆ. ಮುಂದಿನ ವಾರದ ಕಚೇರಿ ಸಮಯದಲ್ಲಿ ಆನ್ಲೈನ್ ಮೂಲಕ ಹಣ ಪಾವತಿಸಿದ ನಂತರ ಚೆಕ್ ಅನ್ನು ಹಿಂತಿರುಗಿಸಿ ಹಂಚಿಕೆ ಪತ್ರವನ್ನು ನೀಡಲಾಗುವುದು ಎಂದು ಬಿಡಿಎ ಮಾಹಿತಿ ನೀಡಿದೆ.

ಈ ಫ್ಲಾಟ್ ಮೇಳದಲ್ಲಿ ಸುಮಾರು 8 ಬ್ಯಾಂಕ್ಗಳು ಭಾಗವಹಿಸಿದ್ದವು. ಪ್ರತಿ ಬ್ಯಾಂಕ್ಗಳಿಗೆ ಸಾಲ ಸೌಲಭ್ಯಕ್ಕಾಗಿ 10 ರಿಂದ 15 ಅರ್ಜಿಗಳು ಸ್ವೀಕೃತಗೊಂಡಿವೆ. ಫೆಬ್ರವರಿ ತಿಂಗಳ ಫ್ಲಾಟ್ ಮೇಳದಲ್ಲಿ ಮಾರಾಟವಾದ 50 ಫ್ಲಾಟ್ಗಳಿಗೆ ಈಗಾಗಲೇ ಶುದ್ಧ ಕ್ರಯಪತ್ರವನ್ನು ನೀಡಿ ನೋಂದಾಯಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ದಕ್ಷಿಣ ಭಾರತ ಉತ್ಸವದಲ್ಲಿ 4,200 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆ: ಸಚಿವ ಹೆಚ್.ಕೆ.ಪಾಟೀಲ್ - DAKSHIN BHARAT UTSAV 2024