ಮಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆ.ಎಸ್.ಡಿ.ಸಿ) ಅಧೀನದಲ್ಲಿರುವ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದ ಮೂಲಕ ಹೊಸದಾಗಿ ಐಟಿಐ ತೇರ್ಗಡೆಯಾದ ಅಭ್ಯರ್ಥಿಗಳಿಗೆ ದುಬೈ ಶಿಪ್ ಯಾರ್ಡ್ನಲ್ಲಿ ತರಬೇತಿ, ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಯೋಗಿಕ ಕೌಶಲ್ಯಾಭಿವೃದ್ಧಿ ಮತ್ತು ಬಹು-ವಿಭಾಗೀಯ ಔದ್ಯೋಗಿಕ ತರಬೇತಿ ಒಳಗೊಂಡ ವೃತ್ತಿ ಜೀವನ ನಿರ್ಮಾಣದ ವಿಶಿಷ್ಟ ಅಪ್ರೆಂಟಿಸ್ ಕಾರ್ಯಕ್ರಮ ಇದಾಗಿದೆ. 18 ರಿಂದ 23 ವರ್ಷ ವಯಸ್ಸಿನ ಒಳಗಿನ, ಸರಳ ಇಂಗ್ಲಿಷ್ ಭಾಷಾ ಜ್ಞಾನ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಂಬಳ/ಸ್ಟೈಫಂಡ್ ಪ್ರತಿ ತಿಂಗಳಿಗೆ 27,500 ವರೆಗೆ ನೀಡಲಾಗುತ್ತದೆ.
ಹೆಚ್ಚುವರಿ ಪ್ರಯೋಜನಗಳು: ಉಚಿತ ವಿಮಾನ ಟಿಕೆಟ್, ವೈದ್ಯಕೀಯ ವಿಮೆ, ವಾರ್ಷಿಕ ರಜೆಗಳು, ವಸತಿ, ಉಚಿತ ಆಹಾರ, ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗುತ್ತದೆ.
ವಿದ್ಯಾರ್ಹತೆ: ಐಟಿಐ, ಮಲ್ಟಿಪಲ್ ಟ್ರೇಡ್ಗಳು - ಫಿಟ್ಟರ್, ಫ್ಯಾಬ್ರಿಕೇಟರ್, ವೆಲ್ಡರ್. 2020-21ರಲ್ಲಿ ಅಥವಾ ನಂತರ ಮಾತ್ರ ಉತ್ತೀರ್ಣರಾಗಿರಬೇಕು. 2 ವರ್ಷಗಳ ತರಬೇತಿ ಮತ್ತು 3 ವರ್ಷಗಳ ನಂತರ ಟ್ರೇಡ್/ಟೆಕ್ನಿಷಿಯನ್ ಹುದ್ದೆಗೆ ಕೆಲಸ ನಿರ್ವಹಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 11 ಕೊನೆಯ ದಿನ.
ಆಸಕ್ತ ಅಭ್ಯರ್ಥಿಗಳು http://imck.kaushalkar.com/ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಹಾಗೂ ತಮ್ಮ ಬಯೋಡೆಟಾವನ್ನು hr.imck@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದ (IMC-K) ದೂರವಾಣಿ ಸಂಖ್ಯೆ: 9606492213 / 9606492214 ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ ಜಿಲ್ಲಾಡಳಿತದಿಂದ ನೇಮಕಾತಿ: ಪದವೀಧರರಿಗೆ ಅವಕಾಶ - District Disaster Management