ಬೆಂಗಳೂರು: ಪ್ರತಿ ವರ್ಷದಂತೆ ಈ ಬಾರಿಯೂ ಜೆ.ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ಮತ್ತು ವೈಭವದಿಂದ ಆಚರಿಸಲಾಯಿತು. ಈ ಬಾರಿ ನಾಡಿನೆಲ್ಲೆಡೆ ಸಮೃದ್ಧವಾಗಿ ಮಳೆಯಾಗಿರುವ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಮೂಲಕ ದೇವಸ್ಥಾನ ಅಲಂಕರಿಸಲಾಗಿದ್ದು, ವಿಶೇಷವಾಗಿ ರೈತ ಗಣೇಶೋತ್ಸವ ನಡೆಯಿತು.
![ಕೃಷಿ ಉತ್ಪನ್ನಗಳಲ್ಲಿ ಕಂಗೊಳಿಸುತ್ತಿರುವ ಗಣಪ](https://etvbharatimages.akamaized.net/etvbharat/prod-images/07-09-2024/kn-bng-01-farm-prouduce-used-for-ganesha-chaturthi-at-satya-ganapathi-temple-7210969_07092024152248_0709f_1725702768_348.jpg)
ದೇವಸ್ಥಾನದ ಟ್ರಸ್ಟಿ ರಾಮ್ ಮೋಹನ ರಾಜ್ ಈ ಕುರಿತು ಮಾಹಿತಿ ನೀಡಿ, ಜೋಳ, ತೆಂಗಿಕಾಯಿ, ಬೆಲ್ಲದ ಕಾಯಿ ಮೂಲಕ ಗಣೇಶಮೂರ್ತಿಯನ್ನು ಸಿಂಗರಿಸಲಾಗಿದೆ. ಗಣಪತಿಗೆ ಪ್ರಿಯವಾದ ವಸ್ತುಗಳನ್ನು ಬಳಸಲಾಗಿದೆ. ಬಳಸಿದ ಪ್ರತಿಯೊಂದು ಹಣ್ಣು, ತರಕಾರಿ, ವಸ್ತುಗಳನ್ನು ನಂತರ ಪ್ರಸಾದದ ಸ್ವರೂಪದಲ್ಲಿ ಭಕ್ತಾದಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
![ಸತ್ಯಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ](https://etvbharatimages.akamaized.net/etvbharat/prod-images/07-09-2024/kn-bng-01-farm-prouduce-used-for-ganesha-chaturthi-at-satya-ganapathi-temple-7210969_07092024152248_0709f_1725702768_876.jpg)
ಪ್ರತಿವರ್ಷ ಹೊಸದೊಂದು ಥೀಮ್ನಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಆಲಂಕಾರವನ್ನು ಮಾಡುವ ಮೂಲಕ ದೇಶದ ಗಮನ ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳಗ್ಗೆಯಿಂದ ವಿಶೇಷ ಪೂಜಾಕಾರ್ಯಕ್ರಮ ಆರಂಭವಾಗಿದೆ. ಹೂವು ಹಣ್ಣುಗಳಿಂದ ಸಿಂಗರಿಸಲಾಗಿರುವ ದೇವಸ್ಥಾನ ಕಣ್ಣಿಗೆ ಹಬ್ಬವಾಗಿದೆ. ವಿಶೇಷ ಪೂಜೆಯ ಜೊತೆಗೆ ಪ್ರಸಾದ ವಿತರಣೆಯು ನಡೆಯುತ್ತಿದೆ ಎಂದು ಹೇಳಿದರು.
![ಸತ್ಯಗಣಪತಿ ದೇವಸ್ಥಾನ](https://etvbharatimages.akamaized.net/etvbharat/prod-images/07-09-2024/kn-bng-01-farm-prouduce-used-for-ganesha-chaturthi-at-satya-ganapathi-temple-7210969_07092024152248_0709f_1725702768_239.jpg)
ಇದನ್ನೂ ಓದಿ: ಹುಬ್ಬಳ್ಳಿ: ಅದ್ಧೂರಿ ಮೆರವಣಿಗೆಯೊಂದಿಗೆ ಈದ್ಗಾ ಮೈದಾನಕ್ಕೆ ಬಂದ ಶ್ರೀರಾಮನ ಅವತಾರದ ಗಣಪತಿ - idgah maidan ganesha