ETV Bharat / state

ಬೆಂಗಳೂರು: ಪ್ರಿ-ಸ್ಕೂಲ್​ 3ನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹೆಣ್ಣು ಮಗು ಸಾವು - bengaluru

ಶಾಲೆಯ ಮೂರನೇ ಮಹಡಿಯಲ್ಲಿ ಆಡುತ್ತಿದ್ದಾಗ ಬಿದ್ದು ತಲೆಗೆ ತೀವ್ರ ಗಾಯವಾಗಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಮೃತಪಟ್ಟಿದೆ.

Pre-school
ಶಾಲೆ ಮಹಡಿಯಿಂದ ಬಿದ್ದ ಮಗು ಸಾವು
author img

By ETV Bharat Karnataka Team

Published : Jan 26, 2024, 1:27 PM IST

Updated : Jan 26, 2024, 9:07 PM IST

ಬೆಂಗಳೂರು: ಪ್ರಿ-ಸ್ಕೂಲ್​ ಮೂರನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಪುಟಾಣಿ 3 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದೆ.

ಕಲ್ಯಾಣನಗರದ ಚೆಳ್ಳಿಕೆರೆಯಲ್ಲಿರುವ ಖಾಸಗಿ ಪ್ರಿ-ಸ್ಕೂಲ್​ನಲ್ಲಿ ಕಲಿಯುತ್ತಿದ್ದ ಮಗು ಜನವರಿ 22ರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿ ಮೇಲೆ ಆಡುತ್ತಿದ್ದಾಗ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಕೂಡಲೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪುಟ್ಟ ಮಕ್ಕಳಿರುವ ಶಾಲೆಯನ್ನು ಮೂರನೇ ಮಹಡಿಯಲ್ಲಿ ನಡೆಸುತ್ತಿದ್ದುದರ ಬಗ್ಗೆ ಹಾಗೂ ಮಕ್ಕಳು ಮಹಡಿಯಿಂದ ತಡೆ ಗೋಡೆ ಹತ್ತಿ ಹೊರಗೆ ಬಿದ್ದರೂ ಗಮನಿಸದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಪೋಷಕರಿಗೆ ಕರೆ ಮಾಡಿದ್ದ ಶಾಲೆಯವರು ನಿಜವಾದ ಕಾರಣವನ್ನು ಬಚ್ಚಿಟ್ಟು ಸುಳ್ಳು ಹೇಳಿರುವ ಆರೋಪ ಕೇಳಿ ಬಂದಿದೆ. ನಿರ್ಲಕ್ಷ್ಯತನ ವಹಿಸಿದ್ದ ಶಾಲೆಯ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ: ಬಾಗಲಕೋಟೆ: ಕಬ್ಬು ತುಂಬಿದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ, ನಾಲ್ವರು ಸಾವು

Last Updated : Jan 26, 2024, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.