ETV Bharat / state

ದಾವಣಗೆರೆ: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ.ಬಿ.ವಿನಯ್ ಕುಮಾರ್ ನಿರ್ಧಾರ - G B Vinay Kumar - G B VINAY KUMAR

ಜಿ.ಬಿ.ವಿನಯ್ ಕುಮಾರ್ ಅವರು ತಾವು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.

gb-vinay-kumar
ಜಿ ಬಿ ವಿನಯ್ ಕುಮಾರ್
author img

By ETV Bharat Karnataka Team

Published : Apr 8, 2024, 4:54 PM IST

Updated : Apr 8, 2024, 5:16 PM IST

ಜಿ.ಬಿ.ವಿನಯ್ ಕುಮಾರ್ ಪ್ರತಿಕ್ರಿಯೆ

ದಾವಣಗೆರೆ: ಸಿಎಂ ಸಿದ್ದರಾಮಯ್ಯ, ಕಾಗಿನೆಲೆ ಶ್ರೀ ನೇತೃತ್ವದಲ್ಲಿ ನಡೆದ ಬಂಡಾಯ ಶಮನ ಯತ್ನ ವಿಫಲವಾಗಿದೆ. ಜಿ.ಬಿ.ವಿನಯ್ ಕುಮಾರ್ ಇಂದು ಸಭೆ ನಡೆಸಿ ತಾವು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂಬುದಾಗಿ ಘೋಷಣೆ ಮಾಡಿದ್ದಾರೆ.

ಈ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಬಂಡಾಯ ಶಮನಗೊಳಿಸುವ ಪ್ರಯತ್ನ ನಡೆದಿದೆ. ಅವರೆಲ್ಲ ದೊಡ್ಡ ವ್ಯಕ್ತಿಗಳು, ಗೌರವ ಕೊಟ್ಟು ನಾನು ಹೋಗಿ ಕೂತು ಮಾತನಾಡಿದ್ದೇನೆ. ಈ ವೇಳೆ ನಾನು ಗಟ್ಟಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಮೂಲೆಮೂಲೆಗಳಿಂದ ಜನ ಬರುತ್ತಿದ್ದಾರೆ. ನಾನು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿಲ್ಲ. ಮತದಾರರು ಇದ್ದರೆ ಪ್ರಜಾಪ್ರಭುತ್ವ. ಅವರ ಮಾತಿಗೆ ಮನ್ನಣೆ ಕೊಡಬೇೆಕೆಂದು ಪಕ್ಷೇತರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇನೆ ಎಂದರು.

ಸಿಎಂ ಸಿದ್ದರಾಮಯ್ಯನವರು ಕರೆಸಿ ಭೇಟಿ ಮಾಡಿ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ನೀನು ಪಕ್ಷೇತರ ನಿಲ್ಲುವುದು ಕಷ್ಟ ಆಗುತ್ತದೆ, ಯೋಚನೆ ಮಾಡು ಎಂದಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಎರಡು ಕುಟುಂಬಗಳಿವೆ. ಒಂದು ಸಿದ್ದೇಶ್ವರ್ ಇನ್ನೊಂದು ಶಾಮನೂರು ಕುಟುಂಬ. ಅವರೆಲ್ಲ ಒಳ್ಳೆಯ ವ್ಯಕ್ತಿಗಳು. ಆದರೆ ಅವರು ಒಂದು ವ್ಯವಸ್ಥೆ ಕಟ್ಟಿದ್ದಾರೆ. ಅಲ್ಲಿ ಬೇರೆಯವರಿಗೆ ಅವಕಾಶ ಇಲ್ಲ. ಆ ವ್ಯವಸ್ಥೆಯಲ್ಲಿ ಅಹಿಂದ ಬಹಳ ಕಷ್ಟಪಡುತ್ತಿದೆ. ಆದ್ದರಿಂದ ಯಾವುದೇ ಕುಟುಂಬದ ವ್ಯಕ್ತಿ ವಿರುದ್ಧ ನನ್ನ ಹೋರಾಟವಲ್ಲ, ವ್ಯವಸ್ಥೆಯ ವಿರುದ್ಧ ನನ್ನ ಹೋರಾಟ ಎಂದು ಹೇಳಿದರು.

ದಾವಣಗೆರೆಯಲ್ಲಿ ಅಭಿವೃದ್ಧಿ ಮುಖ್ಯ. ಇಲ್ಲಿನ ಜನರಿಗೆ ಸಿದ್ಧಾಂತ ಮುಖ್ಯವಲ್ಲ. ಪ್ರಭಾ ಮಲ್ಲಿಕಾರ್ಜುನ್‌, ಗಾಯಿತ್ರಿ ಸಿದ್ದೇಶ್ವರ್, ಜಿ.ಬಿ.ವಿನಯ್ ಕುಮಾರ್ ಮೂವರಲ್ಲಿ ಯಾರನ್ನು ಆಯ್ಕೆ ಮಾಡಿದ್ರೆ ಒಳ್ಳೆಯದು ಎಂದು ಜನ ಯೋಚನೆ ಮಾಡ್ತಾರೆ. ಜನ ನನ್ನ ಪರ ಇದ್ದಾರೆ. ನಾನು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಾನು ಸ್ಪರ್ಧೆ ಮಾಡಿ ಗೆದ್ರೆ ಮಾತ್ರ ಅದು ಕಾಂಗ್ರೆಸ್ ಗೆಲುವು ಆಗಲಿದೆ : ಪಕ್ಷೇತರ ಅಭ್ಯರ್ಥಿ ವಿನಯ್​ - LoK Sabha Election

Last Updated : Apr 8, 2024, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.