ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜೀಯವರ ಅಧ್ವರ್ಯದಲ್ಲಿ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ 650ಕ್ಕೂ ಹೆಚ್ಚು ಜನರು ಸತತವಾಗಿ ಅಹೋರಾತ್ರಿ 33 ಗಂಟೆ 33 ನಿಮಿಷ 33 ಸೆಕೆಂಡ್ ಹನುಮಾನ್ ಚಾಲೀಸಾ ಪಾರಾಯಣ ಮಾಡಿದರು. ಹನುಮಾನ್ ಜಯಂತಿ ದಿನ ಶುಕ್ರವಾರ ಸಂಜೆ ಈ ಪಾರಾಯಣವು ಸಂಪನ್ನಗೊಂಡಿತು.
ಈ ಪ್ರಯತ್ನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆ ಸಂಸ್ಥೆಯು ಅವರ ಪ್ರತಿನಿಧಿ ಸ್ವಪ್ನಿಲ್ ಡಂಗರಿಕರ್ ಅವರನ್ನು ಕಳುಹಿಸಿದ್ದರು ಹಾಗೂ ಇದು "ಸತತ ಪಾರಾಯಣ ಗಿನ್ನಿಸ್ ವಿಶ್ವ ದಾಖಲೆ" ಸೇರ್ಪಡೆಯಾಗಿದೆ. ವಡೋದರದ ಸ್ವಾಮಿನಾರಾಯಣ ಭಜನ್ ಯಾಗ, ಸದ್ಗುರು ಶ್ರೀ ಜ್ಞಾನಿವಂದಸ್ಜಿ ಸ್ವಾಮಿ - ಕುಂಡಲಧಾಮ ಅವರು 2022ನೇ 23 ಜುಲೈ ರಂದು 27 ಗಂಟೆ 27 ನಿಮಿಷ 27 ಸೆಕೆಂಡ್ ಪಾರಾಯಣ ಮಾಡಿ ಈ ಹಿಂದೆ ದಾಖಲೆ ನಿರ್ಮಿಸಿದ್ದರು.
ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ: ನಾದಮಂಟಪದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ವತಿಯಿಂದ ಹೊರತಂದಿರುವ ಅಂಚೆ ಚೀಟಿ ಪ್ರಪಂಚದ ಅತಿ ದೊಡ್ಡ ಅಂಚೆ ಚೀಟಿ (postal stamp) (3.12 meters - 4.2 meters) ಅಳತೆವುಳ್ಳದು ಕೂಡ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಪ್ರಿನ್ಸಿಟಾ ವಿಯನ್ನೆ ಡಿಸೋಜ 40.15 ನಿಮಿಷ ಯೋಗ ನಿದ್ರಾಸನ: ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ