ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಇತರ ನಟರ ಪಾತ್ರ ಇದ್ದರೆ ತನಿಖೆ ನಡೆಯುತ್ತೆ: ಸಚಿವ ಜಿ.ಪರಮೇಶ್ವರ್ - G PARAMESHWAR - G PARAMESHWAR

ರೇಣುಕಾಸ್ವಾಮಿ ಕೊಲೆ​ ಪ್ರಕರಣದಲ್ಲಿ, ದರ್ಶನ ಜತೆ ಇತರ ನಟರು ಭಾಗಿಯಾಗಿರುವುದಾಗಿ ತಿಳಿದು ಬಂದದ್ದೇ ಆದಲ್ಲಿ ಅವರನ್ನೂ ವಿಚಾರಣೆ ನಡೆಸಲಾಗುತ್ತದೆ ಎಂದು ಗೃಹಸಚಿವ ಪರಮೇಶ್ವರ್​ ತಿಳಿಸಿದ್ದಾರೆ.

ಜಿ.ಪರಮೇಶ್ವರ್
ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : Jun 18, 2024, 1:44 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಏನಾದ್ರೂ ದರ್ಶನ ಜತೆ ಇತರ ಸಹ ನಟರ ಪಾತ್ರ ಇದೆ ಅಂತ ವರದಿ ಬಂದರೆ ತನಿಖೆ ನಡೆಯುತ್ತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ದರ್ಶನ್ ಜತೆ ಮತ್ತಷ್ಟು ನಟರಿಗೂ ಸಂಕಷ್ಟ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ದರ್ಶನ್ ಒಬ್ಬ ಚಿತ್ರನಟ, ಉಳಿದವರು ಅವರ ಸಂಪರ್ಕದಲ್ಲಿರೋದು ಸಹಜ. ಆದರೆ, ಉಳಿದ ನಟರಿಗೆ ಈ ಪ್ರಕರಣದಲ್ಲಿ ಲಿಂಕ್ ಇದೆ ಅಂತ ಹೇಳುವುದಕ್ಕೆ ಆಗಲ್ಲ. ಪ್ರಕರಣದ ತನಿಖೆಯಲ್ಲಿ ಏನಾದ್ರೂ ಸಹ ನಟರ ಪಾತ್ರ ಇದೆ ಅಂತ ಬಂದರೆ ಅವರಿಗೂ ತನಿಖೆ ನಡೆಯುತ್ತೆ ಎಂದರು.

ಇಂದು ಚಿತ್ರದುರ್ಗಕ್ಕೆ ತೆರಳಿ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡ್ತೇನೆ. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸ ಮಾಡ್ತೇನೆ. ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ನೆರವು ಕೊಡುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡ್ತೇನೆ. ಈಗ ತನಿಖೆ ನಡೆಯುತ್ತಿದೆ, ನೆರವಿನ ಬಗ್ಗೆ ಈಗಲೇ ನಿರ್ಧಾರ ಮಾಡುವುದು ಕಷ್ಟ ಎಂದರು. ಪಿಎಸ್ಐ ನೇಮಕಾತಿ ವಿಚಾರ ಅಂತಿಮ ಹಂತದಲ್ಲಿದೆ. ಕೆಲವು ತಾಂತ್ರಿಕ ಪ್ರಶ್ನೆಗಳನ್ನು ತೆಗೆಯಲಾಗಿದೆ. ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸ್ತೇವೆ. ಈ ಸಂಬಂಧ ನಾನು ಎರಡು ಮೂರು ಸಭೆ ನಡೆಸಿದ್ದೇನೆ. ಈ ವಾರ ಅಥವಾ ಮುಂದಿನ ವಾರದಲ್ಲಿ ಒಂದು ತೀರ್ಮಾನಕ್ಕೆ ಬರ್ತೇವೆ ಎಂದರು.

ಬಿಜೆಪಿಯಿಂದ ತೈಲ ದರ ಏರಿಕೆ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪ್ರತಿಭಟನೆ ಅವರ ಹಕ್ಕು, ಆಡಳಿತ ನಡೆಸೋದು ನಮ್ಮ ಹಕ್ಕು. ನಮ್ಮ ಅವರ ನಡುವೆ ಇಷ್ಟೇ ವ್ಯತ್ಯಾಸ. ಇದರಲ್ಲಿ ಬಿಜೆಪಿ ರಾಜಕಾರಣ ಮಾಡಲು ಹೊರಟಿದೆ. ಅವರು ಹದಿನಾಲ್ಕು ಸಲ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿದ್ರು. ಇದನ್ನ ಬಿಜೆಪಿಯವ್ರು ಮರೆತಿದ್ದಾರಾ. ಕಚ್ಚಾ ತೈಲದ ದರ ಕಡಿಮೆ ಇದ್ದಾಗಲೂ ಲಕ್ಷಾಂತರ ಕೋಟಿ ತೆರಿಗೆಯನ್ನು ಬಿಜೆಪಿ ಜನರಿಂದ ವಸೂಲಿ ಮಾಡಿದ್ರು? ಆ ಹಣ ಎಲ್ಲಿ ಹೋಯ್ತು?. ನಾವು ಬಹಳ ಯೋಚನೆ ಮಾಡಿ ಪಕ್ಕದ ರಾಜ್ಯಗಳ ದರ ಪರಿಶೀಲಿಸಿ ಏರಿಕೆ ಮಾಡಿದ್ದೇವೆ. ಆದರೂ ಪಕ್ಕದ ರಾಜ್ಯಗಳಿಗಿಂತ ನಮ್ಮಲ್ಲಿ ದರ ಕಡಿಮೆ ಇದೆ. ಇದರಲ್ಲಿ ಅವರು ರಾಜಕಾರಣ ಮಾಡಿದರೆ, ಮಾಡಲಿ, ನಾವು ಅದನ್ನು ಎದುರಿಸ್ತೇವೆ ಎಂದರು.

ವಯನಾಡಿಗೆ ರಾಹುಲ್ ಗಾಂಧಿ ರಾಜೀನಾಮೆ ನಿರ್ಧಾರ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ. ಅವರು ಪ್ರತಿಪಕ್ಷ ನಾಯಕ ಆಗಬೇಕು ಅನ್ನೋದು ನಮ್ಮ ನಿರೀಕ್ಷೆ. ಇಡೀ ದೇಶಾದ್ಯಂತ ಮಲ್ಲಿಕಾರ್ಜುನ ಖರ್ಗೆಯವರ ಜತೆ ಸೇರಿ ಪಾದಯಾತ್ರೆ ನಡೆಸಿ ಕಾಂಗ್ರೆಸ್​ಗೆ ಹೊಸತನ ತಂದಿದ್ದಾರೆ. ಅವರ ವ್ಯಕ್ತಿತ್ವಕ್ಕೆ ಹೆಚ್ಚಿನ ಶಕ್ತಿ ಬರುತ್ತೆ ಅಂತ ನಾವು ತಿಳ್ಕೊಂಡಿದ್ದೇವೆ. ವಯನಾಡಿಗೆ ರಾಜೀನಾಮೆ ಕೊಡೋದು ರಾಹುಲ್ ಅವರ ವೈಯಕ್ತಿಕ ತೀರ್ಮಾನ, ಅದನ್ನು ನಾವೆಲ್ರೂ ಒಪ್ಪಿಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ದರ್ಶನ್ ಮತ್ತಿತರ ಆರೋಪಿಗಳನ್ನು ಮೈಸೂರಿಗೆ ಕರೆದೊಯ್ಯಲು ಪೊಲೀಸರ ಸಿದ್ಧತೆ - Renukaswamy murder case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.