ETV Bharat / state

ದೆಹಲಿಯಲ್ಲಿ ಪ್ರತಿಭಟನೆ: 'ಕೇಂದ್ರ ಸರ್ಕಾರ ಸಿಎಂರನ್ನು ಕರೆದು ಮಾತನಾಡಿಸಬಹುದಿತ್ತು'-ಜಿ.ಪರಮೇಶ್ವರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ಪಾಲು ವಿಳಂಬ ಕುರಿತು ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಪ್ರತಿಭಟನೆ ನಡೆಸುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

author img

By ETV Bharat Karnataka Team

Published : Feb 6, 2024, 3:57 PM IST

ಗೃಹ ಸಚಿವ ಡಾ ಜಿ ಪರಮೇಶ್ವರ್
ಗೃಹ ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು: ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತದೆ ಎಂದಾಗ ಕೇಂದ್ರ ಸರ್ಕಾರ ಸಿಎಂ ಅವರನ್ನು ಕರೆದು ಮಾತನಾಡಬಹುದಿತ್ತಲ್ಲ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾವು ಪ್ರತಿಭಟನೆ ಮಾಡ್ತೇವೆ ಅಂದೆವು‌. ಆಗ ಸಿಎಂರನ್ನು ಕರೆದು ಕೇಂದ್ರ ಸರ್ಕಾರ ಮಾತನಾಡಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೇನು ಮಾಡಬೇಕು ಹೇಳಿ?. ಕರ್ನಾಟಕಕ್ಕೆ ಹಣ ಕೊಡಬಾರದು ಅಂತ ತೀರ್ಮಾನಿಸಿದ್ದಾರಾ?. ಪೊಲಿಟಿಕಲಿ ಏನು ಬೇಕಾದ್ರೂ ಹೇಳಬಹುದು. ರಾಜ್ಯ ಸರ್ಕಾರಕ್ಕೆ ಹಣ ಕೊಟ್ಟಿದ್ದೇವೆ ಅಂತಾರೆ. ನಾವು ಸುಳ್ಳು ಹೇಳಲು ಆಗುತ್ತಾ?. ಸರ್ಕಾರವೊಂದು ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೆ ಅಂದಾಗ ಅದನ್ನು ಅವರೂ ಯೋಚನೆ ಮಾಡಬೇಕು" ಎಂದು ಹೇಳಿದರು.

ಸತ್ಯಕ್ಕೆ ದೂರವಾದುದನ್ನು ಹೇಳೋಕೆ ಆಗುತ್ತಾ?. ನಮಗೆ ಹಣ ಬಂದಿಲ್ಲ, ಇದು ವಸ್ತುಸ್ಥಿತಿ. 18 ಸಾವಿರ ಕೋಟಿ ರೂ ಬೇಡಿಕೆ ಇಟ್ಟಿದ್ದೇವೆ. ನಾವು ಇಟ್ಟ ಬೇಡಿಕೆ ಕೊಟ್ಟಿದ್ದೀರಾ?. ಜಿಎಸ್​ಟಿ ನಮ್ಮ ಪಾಲು ಎಷ್ಟು ಬರಬೇಕು ಅನ್ನೋದನ್ನು ಕೇಂದ್ರದವರೇ ಹೇಳಲಿ. ನಿರ್ಮಲಾ ಸೀತಾರಾಮನ್ ಅವರ ಮೇಲೆ ಗೌರವ ಇದೆ. ಅವರು ಹೇಳುವ ಮಾತು ಸಮಂಜಸವಲ್ಲ. ನಾವು ಕಟ್ಟಿರುವ ಜಿಎಸ್​ಟಿ ಪಾಲು ಎಷ್ಟು?. ನೀವು ಎಷ್ಟು ಕೊಟ್ಟಿದ್ದೀರಾ? ಅಷ್ಟು ಹೇಳಿ ಸಾಕು ಎಂದರು.

ಬಿಜೆಪಿಯವರೂ ಪ್ರತಿಭಟನೆಗೆ ಬಂದ್ರೆ ಒಳ್ಳೆದು: ಸಂಸದರಿಗೆ ಸಿಎಂ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಎಲ್ಲರನ್ನೂ ಪ್ರತಿಭಟನೆಗೆ ಕರೆದಿದ್ದೇವೆ. ಇದು ರಾಜ್ಯದ ಸಮಸ್ಯೆ, ಕಾಂಗ್ರೆಸ್ ಸಮಸ್ಯೆ ಅಲ್ಲ. ನಮ್ಮ ಸಮಸ್ಯೆಯಾದರೆ ಕೆಪಿಸಿಸಿ ಎದುರು ಧರಣಿ ಮಾಡ್ತೇವೆ. ಬಿಜೆಪಿಯವರೂ ಪ್ರತಿಭಟನೆಗೆ ಬಂದ್ರೆ ಒಳ್ಳೆಯದು ಎಂದು ತಿಳಿಸಿದರು.

ನಾಳೆ ನಡೆಯುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ನಾವು ಹಣ ಕೊಟ್ಟಿಲ್ಲ ಅಂತ ಅವರು ಪ್ರತಿಭಟನೆ ಮಾಡ್ತಿದ್ದಾರೆ. ಹಣ ಎಲ್ಲಿಂದ ಬರಬೇಕು?. ಕೇಂದ್ರದಿಂದ ಬರಬೇಕು. ಅದನ್ನು ತರಿಸಿ ಕೊಡಿ ಆಗ ನಾವೂ ಕೊಡ್ತೇವೆ. 645 ಕೋಟಿ ರೂ. ರೈತರಿಗೆ ಹಣ ಬಿಡುಗಡೆ ಮಾಡಿದ್ದೇವೆ. ನಮ್ಮ ಕಷ್ಟದಲ್ಲೂ ರೈತರಿಗಾಗಿ ಹಣ ಬಿಡುಗಡೆ ಮಾಡಿದ್ದೇವೆ. ಬರ ನಿರ್ವಹಣೆ ಅಂತ ಹಣ ಬಿಡುಗಡೆ ಮಾಡಿದ್ದೇವೆ. ಬಿಡುಗಡೆ ಮಾಡ್ತಿಲ್ಲ ಅಂತ ಅವರೂ ಪ್ರತಿಭಟನೆ ಮಾಡಬೇಕಿದೆ. ಕೇಂದ್ರದಿಂದ ನೀವು ತರಿಸಿಕೊಡಬೇಕಾಗಿತ್ತಲ್ಲಾ? ಎಂದರು.

ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂಬ ವಿಜಯೇಂದ್ರ ಆರೋಪಕ್ಕೆ, ಖಜಾನೆ ಖಾಲಿ ಇರೋದನ್ನು ಅವರು ಯಾವಾಗ ನೋಡಿದ್ದರೋ ಗೊತ್ತಿಲ್ಲ. ಖಾಲಿ ಇದ್ಯಾ ಅಥವಾ ತುಂಬಿದ್ಯಾ ನೋಡಿದ್ದಾರಾ?. ಹಣ ಬಿಡುಗಡೆ ಮಾಡ್ತಾ ಇರೋದು ಖಜಾನೆ ತುಂಬಿರೋದ್ರಿಂದಲೇ ಎಂದು ಹೇಳಿದರು.

ಇದನ್ನೂ ಓದಿ: ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿತ್ತು ಎಂದು ಬಿಜೆಪಿ ಸಾಬೀತುಪಡಿಸಲಿ: ಸಚಿವ ಜಿ ಪರಮೇಶ್ವರ್ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.