ETV Bharat / state

ಸ್ವಾತಂತ್ರ್ಯಯೋಧೆ ಚಂದ್ರವ್ವ ಕಾಡಪ್ಪ ಗೋಲಬಾವಿ ನಿಧನ - Freedom Fighter Dies

ಸ್ವಾತಂತ್ರ್ಯಯೋಧೆ ಚಂದ್ರವ್ವ ಕಾಡಪ್ಪ ಗೋಲಬಾವಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

Chandravva Kadappa Golabavi
ಚಂದ್ರವ್ವ ಕಾಡಪ್ಪ ಗೋಲಬಾವಿ (ETV Bharat)
author img

By ETV Bharat Karnataka Team

Published : May 19, 2024, 5:59 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಶತಾಯುಷಿ ಹಾಗೂ ಸ್ವಾತಂತ್ರ್ಯ ಯೋಧೆ ಚಂದ್ರವ್ವ ಕಾಡಪ್ಪ ಗೋಲಬಾವಿ ವಯೋಸಹಜ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂಚಗೇರಿ ಮಠದ ಪೂಜ್ಯ ಮಠಾಧಿಪತಿಯಾಗಿದ್ದ ಮಾಧವಾನಂದ ಪ್ರಭುಜಿಯವರ ಜೊತೆಗೆ ತಮ್ಮ ಪತಿ ಕಾಡಪ್ಪ ಗೋಲಬಾವಿಯವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತತವಾಗಿ ಇವರು ಹೋರಾಟ ಮಾಡಿದ್ದರು. ಮಾಧವಾನಂದ ಪ್ರಭುಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ ಹೋರಾಟಕ್ಕೆ ದಿವ್ಯ ಶಕ್ತಿಯನ್ನು ತುಂಬಿ ಇವರು ದೇಶ ಸೇವೆಗೈದವರು.

ಮಾಧವಾನಂದ ಪ್ರಭುಜಿಯವರ ಅಪಾರ ದೇಶ ಭಕ್ತ ಬಳಗಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರಂತರವಾಗಿ ಊಟೋಪಚಾರದ ಜೊತೆಗೆ ಸಹಕಾರ ನೀಡಿದ್ದರು. ಇಂದು ಸ್ವಗ್ರಾಮ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಮಠಾಧೀಶರ ಹಾಗೂ ಹಲವಾರು ಮುಖಂಡರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಜರುಗಿತು.

ಇದನ್ನೂ ಓದಿ : ಹಿರಿಯ ಕಮ್ಯುನಿಸ್ಟ್ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಎನ್. ಶಂಕರಯ್ಯ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.