ಬೆಂಗಳೂರು : ಖಾಸಗಿ ಸುದ್ದಿ ವಾಹಿನಿ ಹೆಸರಿನಲ್ಲಿ ಸ್ಪಾ ಮಾಲೀಕರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಸುಲಿಗೆ ಯತ್ನ ಆರೋಪ ಸಂಬಂಧ ಆರೋಪಿ ವೆಂಕಟೇಶ್ ವಿರುದ್ಧ ನಾಲ್ಕನೇ ಎಫ್ಐಆರ್ ದಾಖಲಾಗಿದೆ. ಜೀವನ್ ಭೀಮಾನಗರ, ಇಂದಿರಾನಗರ, ಹೆಚ್ಎಸ್ಆರ್ ಲೇಔಟ್ ಬಳಿಕ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋರ್ಲೆ ವರಪ್ರಸಾದ್ ಎಂಬುವರು ನೀಡಿದ ದೂರಿನ ಬಳಿಕ ವೆಂಕಟೇಶ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದೆ.
ಕೋರಮಂಗಲದ ಟ್ರ್ಯಾಂಕೂರ್ ಇಂಟರ್ ನ್ಯಾಷನಲ್ ಸ್ಪಾ ವ್ಯವಹಾರವನ್ನ ಕಳೆದ ಐದು ತಿಂಗಳಿನಿಂದ ವರಪ್ರಸಾದ್ ನಡೆಸುತ್ತಿದ್ದರು. ಮೂವರು ಪಾಲುದಾರಿಕೆಯಲ್ಲಿ ನಡೆಯುತ್ತಿದ್ದ ಸ್ಪಾ ನಡೆಸುತ್ತಿದ್ದರು. ಹೀಗಿರುವಾಗ ವೆಂಕಟೇಶ್ ಕರೆ ಮಾಡಿ ತಿಂಗಳಿಗೆ 15 ಸಾವಿರ ಕೊಡಬೇಕು, ಇಲ್ಲದಿದ್ದರೆ ನಿಮ್ಮ ಬಿಸಿನೆಸ್ಗೆ ತೊಂದರೆ ಮಾಡುತ್ತೇನೆ. ಅಲ್ಲದೇ ಸುದ್ದಿ ವಾಹಿನಿಗಳಲ್ಲಿ ವಿಡಿಯೊ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ವರಪ್ರಸಾದ್ ತಿಳಿಸಿದ್ದಾರೆ.
ಜೀವನಭೀಮಾನಗರ ಪೊಲೀಸರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಸ್ಪಾ ಕಂಪನಿ ಮಾಲೀಕರು ತಮಗೂ ಬೆದರಿಕೆ ಹಾಕಿದ್ದರು ಎಂದು ದೂರು ನೀಡುತ್ತಿದ್ದಾರೆ. ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ನೀಡುವಂತೆ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ ನ್ಯಾಯಾಂಗ ಬಂಧನದಲ್ಲಿರುವ ವೆಂಕಟೇಶ್ನನ್ನ ಬಾಡಿ ವಾರಂಟ್ ಮೇರೆಗೆ ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ : ಇನ್ಸ್ಟಾಗ್ರಾಮ್ನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಯುವತಿಯ ಸಾವಿಗೆ ಕಾರಣನಾದವ ಅರೆಸ್ಟ್!