ETV Bharat / state

ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ ; ಆರೋಪಿಗಳಿಂದ 208 ಗ್ರಾಂ ಚಿನ್ನ ವಶಕ್ಕೆ ಪಡೆದ ಪೊಲೀಸರು - THIEVES ARRESTED - THIEVES ARRESTED

ವಿಜಯಪುರ ಗ್ರಾಮೀಣ ವಿಭಾಗದ ಪೊಲೀಸರು ಐದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತಾರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಅವರಿಂದ 208 ಗ್ರಾಂ ಚಿನ್ನದ ಆಭರಣಗಳನ್ನ ವಶಕ್ಕೆ ಪಡೆದಿದ್ದಾರೆ.

police
ವಿಜಯಪುರ ಗ್ರಾಮೀಣ ವಿಭಾಗದ ಪೊಲೀಸರು (ETV Bharat)
author img

By ETV Bharat Karnataka Team

Published : Sep 7, 2024, 2:01 PM IST

ಎಸ್​ಪಿ ಋಷಿಕೇಶ ಸೋನವಾಣೆ ಅವರು ಮಾತನಾಡಿದರು (ETV Bharat)

ವಿಜಯಪುರ : ಜಿಲ್ಲೆಯಲ್ಲಿ ಈ ಹಿಂದೆ ನಡೆದಿದ್ದ ಒಟ್ಟಾರೆ ಐದು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ಅಂತಾರಾಜ್ಯ ಕಳ್ಳರನ್ನ ಬಂಧಿಸಿ, ಅವರಿಂದ 15 ಲಕ್ಷ ಮೌಲ್ಯದ 208 ಗ್ರಾಂ ಚಿನ್ನದ ಆಭರಣಗಳನ್ನ ಮರುವಶಪಡಿಸಿಕೊಳ್ಳುವಲ್ಲಿ ವಿಜಯಪುರ ಗ್ರಾಮೀಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಎಸ್ಪಿ ಋಷಿಕೇಶ ಸೋನವಾಣೆ ಅವರು, ಈ ಪ್ರಕರಣಗಳ ಪತ್ತೆ ಕುರಿತು ವಿಜಯಪುರ ಗ್ರಾಮೀಣ ಡಿವೈಎಸ್​ಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಯಶಸ್ವಿ ತನಿಖೆ ಮತ್ತು ಕಾರ್ಯಾಚರಣೆ ನಡೆಸಿದೆ. ಅವರೆಲ್ಲರಿಗೂ ಅಭಿನಂದಿಸುತ್ತೇನೆ ಎಂದರು.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ನಂದಾಬಾಯಿ ಗಾಯಕವಾಡ, ಗಣೇಶ ನಾಗೇಶ ಜಾಧವ, ಮಹಾದೇವ ಗಾಯಕವಾಡ, ಸುಂದರಾಬಾಯಿ ಜಾಧವ ಎನ್ನುವ ಅಂತಾರಾಜ್ಯ ಕಳ್ಳರ ತಂಡ ಇದಾಗಿದ್ದು, ಇವರೆಲ್ಲರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದರು.

ಇವರೆಲ್ಲರನ್ನೂ ಸಂಶಯದ ಮೇಲೆ ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳೆದ ಎರಡು ವರ್ಷದಲ್ಲಿ ವಿಜಯಪುರ ಜಿಲ್ಲೆಯ ಡೋಮನಾಳ ಗ್ರಾಮದಲ್ಲಿ, ವಿಜಯಪುರದ ಶಿವಗಿರಿ ಹತ್ತಿರ, ದೇವರ ಹಿಪ್ಪರಗಿ ಹಾಗೂ ತಿಕೋಟಾ ಬಸ್‌ನಿಲ್ದಾಣಗಳಲ್ಲಿ ಸೇರಿದಂತೆ ಮಾಡಿದ ಒಟ್ಟು ಐದು ಕಳ್ಳತನ ಪ್ರಕರಣಗಳನ್ನ ಒಪ್ಪಿಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಭುವನೇಶ್ವರಿ ಜ್ಯುವೆಲರ್ಸ್ ಅಂಗಡಿ ಕಳ್ಳತನ ಪ್ರಕರಣ: ಐವರು ಅಂತರರಾಜ್ಯ ಕಳ್ಳರ ಬಂಧನ, 77 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ - jewellery shop stolen

ETV Bharat Logo

Copyright © 2024 Ushodaya Enterprises Pvt. Ltd., All Rights Reserved.