ಮೈಸೂರು: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುತ್ತಿದ್ದಾಗ ನಾಲ್ವರು ಗಾಯಗೊಂಡಿದ್ದು, ಬಾಲಕನೊಬ್ಬನ ಕಣ್ಣಿಗೆ ದೊಡ್ಡಮಟ್ಟದಲ್ಲಿ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಲೋಕೇಶ್(4), ಪಾಂಡವಪುರದ ಗೋಕುಲ್(10) ಹಾಗೂ ನಂಜಗೂಡಿನ ಮಾಣಿಕ್ಯ(8) ಎಂಬವರು ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಹುಣಸೂರು ನಿವಾಸಿ ಚಂದನ್ ಕುಮಾರ್(14) ಎಂಬಾತನಿಗೆ ಒಂದು ಕಣ್ಣಿನ ಭಾಗಕ್ಕೆ ಕಿಡಿ ಬಿದ್ದು ಕಣ್ಣಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದೀಗ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ನಗರದ ವಿವಿಧೆಡೆ ಪಟಾಕಿ ಸಿಡಿತದಿಂದ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರು ಖಾಸಗಿ ಕಣ್ಣಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸುಟ್ಟ ಗಾಯಗಳಿಗೆ ಒಳಗಾದವರನ್ನು ತಾಲೂಕು ಆಸ್ಪತ್ರೆಗಳಿಂದ ಹೆಚ್ಚಿನ ಚಿಕಿತ್ಸೆಗೆ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ದೀಪಾವಳಿ ಪಟಾಕಿಯಿಂದ 145ಕ್ಕೂ ಹೆಚ್ಚು ಜನರಿಗೆ ಗಾಯ, ಕೆಲವರಿಗೆ ನೇತ್ರ ಶಸ್ತ್ರಚಿಕಿತ್ಸೆ