ETV Bharat / state

ಶಮೀರ್ ಅಲಿ ಹತ್ಯೆ ಕೇಸ್: ನಾಲ್ವರ ಬಂಧನ, ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತೀಕಾರ - Shamir Ali Murder Case

author img

By ETV Bharat Karnataka Team

Published : Aug 14, 2024, 10:24 PM IST

ಶಮೀರ್ ಅಲಿ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ನಾಲ್ವರ ಬಂಧನ
ನಾಲ್ವರ ಬಂಧನ (ETV Bharat)

ಮಂಗಳೂರು: ಉಳ್ಳಾಲದಲ್ಲಿ ಆ.11ರಂದು ನಡೆದ ಶಮೀರ್ ಅಲಿ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಾಟಿಪಳ್ಳ ನಿವಾಸಿ ಮೊಹಮ್ಮದ್ ನೌಶಾದ್ (26), ಕಿನ್ಯ ನಿವಾಸಿ ನಿಯಾಝ್ (23), ಬಜಾಲ್ ಶಾಂತಿನಗರ ನಿವಾಸಿ ತನ್ವೀರ್ ತನ್ನು(27), ಉಡುಪಿ ಮಲಾರ್​ನ ನಿವಾಸಿ ಮೊಹಮ್ಮದ್ ಇಸ್ತಾಲ್ ಬಂಧಿತರು.

ಉಳ್ಳಾಲ ತಾಲೂಕಿನ ಮುಕ್ಕಚ್ಚೇರಿಯಲ್ಲಿ ವಾಸವಾಗಿರುವ ಅಲಿಯಬ್ಬ ಎಂಬುವರ ಮಗ ಕಡಪಾರ ಸಮೀರ್ ಅಲಿ (35 ) ಎಂಬಾತನನ್ನು ಆ.11 ರಂದು ಕಲ್ಲಾಪುವಿನಲ್ಲಿ ಐವರು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 150/2024 ಕಲಂ 189(2), 191(2), 191(3), 352, 351(2), 126(2), 118(2), 103 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮೊಹಮ್ಮದ್ ಸಮೀರ್ ಅಲಿ ಮತ್ತು ಆರೋಪಿಗಳ ನಡುವೆ ಹಳೆ ದ್ವೇಷವಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. 2018 ರಲ್ಲಿ, ಮೊಹಮ್ಮದ್ ನೌಶಾದ್ ಅವರ ಸೋದರಮಾವ, ಟಾರ್ಗೆಟ್ ಇಲ್ಯಾಸ್ ನನ್ನು ಕಡ್ಪಾರ ಸಮೀರ್ ಮತ್ತು ಇತರರು ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೊಹಮ್ಮದ್ ನೌಶಾದ್ ಇತರ ಆರೋಪಿಗಳೊಂದಿಗೆ ಸೇರಿ ಈ ಕೊಲೆ ಮಾಡಿದ್ದಾನೆ.

ಆರೋಪಿಗಳ ವಶದಿಂದ ಅಪರಾಧಕ್ಕೆ ಬಳಸಿದ್ದ ವಾಹನ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಹಮ್ಮದ್ ನೌಶಾದ್ ವಿರುದ್ಧ ಈ ಹಿಂದೆ ಅಪಹರಣ, ಎನ್‌ಡಿಪಿಎಸ್ ಕಾಯ್ದೆ ಉಲ್ಲಂಘನೆ, ಸುರತ್ಕಲ್ ಮತ್ತು ಸಕಲೇಶಪುರ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಮೂರನೇ ಆರೋಪಿ ತನ್ವೀರ್ ತನ್ನು ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಜಾನುವಾರು ಕಳ್ಳತನ ಮತ್ತು ದರೋಡೆ ಯತ್ನ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ - Assault On Youth

ETV Bharat Logo

Copyright © 2024 Ushodaya Enterprises Pvt. Ltd., All Rights Reserved.