ETV Bharat / state

ಬೆಂಗಳೂರು: ರೌಡಿಶೀಟರ್ ಹತ್ಯೆ ಕೇಸ್‌ನಲ್ಲಿ ನಾಲ್ವರ ಬಂಧನ - Rowdy Sheeter Murder Case

ರೌಡಿಶೀಟರ್ ಹತ್ಯೆಗೈದ ಆರೋಪದಡಿ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

MURDER CASE
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Aug 6, 2024, 9:43 PM IST

ಬೆಂಗಳೂರು: ಹಳೆದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಹಾಡಹಾಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆಗಸ್ಟ್ 1ರಂದು ಹತ್ಯೆಗೊಳಗಾಗಿದ್ದ ಅಜಿತ್ ಎಂಬಾತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ನರಸಿಂಹನ್, ಅಜಯ್, ಪ್ರಕಾಶ್ ಹಾಗೂ ಅರುಣ್ ಎಂಬುವರನ್ನು ಬಂಧಿಸಿದ್ದಾರೆ.

ರಾಮಮೂರ್ತಿ ನಗರದಲ್ಲಿರುವ ಬ್ಲಡ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌ನನ್ನು ಶೇಷಾದ್ರಿಪುರದಲ್ಲಿರುವ ಅವರ ನಿವಾಸ ಬಳಿಯೇ ಹತ್ಯೆ ಮಾಡಲಾಗಿತ್ತು.

ಆರೋಪಿಗಳ ಪೈಕಿ ನರಸಿಂಹನ್ ಮಗ ಗಣೇಶ್ ಹಾಗೂ ಅಜಿತ್‌ ಮಧ್ಯೆ ಹಾಲು ಹಂಚಿಕೆ ವಿಚಾರದಲ್ಲಿ ಗಲಾಟೆಯಾಗಿತ್ತು. ಇದೇ ದ್ವೇಷದ ಮೇರೆಗೆ 2022ರಲ್ಲಿ ಅಜಿತ್, ಗಣೇಶನನ್ನು ಕೊಲೆಗೈದಿದ್ದ. ಈ ಸಂಬಂಧ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದ. ಮಗನ ಕೊಲೆಗೈದಿರುವ ಅಜಿತ್‌ನನ್ನು ಹತ್ಯೆಗೈಯಲು ಏರಿಯಾದಲ್ಲಿರುವ ಹುಡುಗರನ್ನು ಒಗ್ಗೂಡಿಸಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ - EXTORTING FROM POLICE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.