ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಏರ್ ಕಸ್ಟಮ್ಸ್ ಮಾಜಿ ಅಧೀಕ್ಷಕ ವಿ.ವಿಶ್ವೇಶ್ವರ ಭಟ್ ಎಂಬವರಿಗೆ 4 ವರ್ಷಗಳ ಜೈಲುವಾಸ ಹಾಗೂ 26.25 ಲಕ್ಷ ದಂಡ ವಿಧಿಸಿ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಆರೋಪಿತ ಅಧಿಕಾರಿ 2010ರಿಂದ 2016ರ ಅವಧಿಯಲ್ಲಿ ಏರ್ ಕಸ್ಟಮ್ಸ್ ಅಧೀಕ್ಷಕನಾಗಿದ್ದಾಗ 39.65 ಲಕ್ಷ ರೂ ಆಸ್ತಿ, ಅಂದರೆ ತಮ್ಮ ಆದಾಯದ ಮೂಲಕ್ಕಿಂತಲೂ ಶೇ 113.46 ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 2016ರ ಮಾರ್ಚ್‌ನಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ತನಿಖೆ ಪೂರ್ಣಗೊಳಿಸಿದ್ದ ಸಿಬಿಐ, 'ಆರೋಪಿ 2010ರಿಂದ 2016ರವರೆಗಿನ ಅವಧಿಯಲ್ಲಿ ಸಾರ್ವಜನಿಕ ಸೇವಕರಾಗಿ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾಗ, 28.38 ಲಕ್ಷ ರೂ ಅಂದರೆ ಆದಾಯಕ್ಕಿಂತಲೂ ಶೇ 61.94 ಅಧಿಕ ಆಸ್ತಿ ಹೊಂದಿದ್ದಾರೆ'' ಎಂದು 2017ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ಕೇಂದ್ರ ಸಚಿವ ವಿ.ಸೋಮಣ್ಣ ವಿರುದ್ಧದ ಪ್ರಕರಣ 6 ತಿಂಗಳಲ್ಲಿ ಮುಗಿಸಲು ಹೈಕೋರ್ಟ್ ಸೂಚನೆ - V Somanna