ETV Bharat / state

ಈ ಬಾರಿ ವಚನ ಭ್ರಷ್ಟ ಬಿಜೆಪಿ - ವಚನ ಪಾಲಕರ ನಡುವೆ ಲೋಕಸಭಾ ಚುನಾವಣೆ: ಮಾಜಿ ಸಂಸದ ಉಗ್ರಪ್ಪ

author img

By ETV Bharat Karnataka Team

Published : Mar 9, 2024, 1:14 PM IST

Updated : Mar 9, 2024, 4:26 PM IST

ನಡೆದಂತೆ ನುಡಿಯದ ಬಿಜೆಪಿಗೆ ವಚನ ಪಾಲಕ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ವಿ ಎಸ್. ಉಗ್ರಪ್ಪ ಹೇಳಿದರು.

ಮಾಜಿ ಸಂಸದ ಉಗ್ರಪ್ಪ
Former MP Ugrappa

ದಾವಣಗೆರೆ: "ಈ ಬಾರಿ ಲೋಕಸಭಾ ಚುನಾವಣೆ ವಚನ ಭ್ರಷ್ಟರು ಹಾಗೂ ವಚನ ಪಾಲಕರ ನಡುವೆ ನಡೆಯುವ ಚುನಾವಣೆಯಾಗಿದೆ. ಬಿಜೆಪಿಯವರೇ ಈ ವಚನ ಭ್ರಷ್ಟರು, ಅವರಿಗೆ ಶ್ರೀರಾಮನ ಹೆಸರು ಹೇಳುವ ನೈತಿಕತೆ ಇಲ್ಲ" ಎಂದು ಮಾಜಿ‌ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದರು.

Former MP Ugrappa

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಮಠದಲ್ಲಿ ಮಾತನಾಡಿದ ಅವರು, "ಶ್ರೀರಾಮ ವಚನ ಪಾಲನೆಗೆ ಹೆಸರಾದವರು. ಬಿಜೆಪಿಯವರು ಹೇಳಿದ ಯಾವುದೇ ಆಶ್ವಾಸನೆ ಈಡೇರಿಸಲು ಆಗಿಲ್ಲ. ಆದರೆ, ನಾವು ಐದು ಗ್ಯಾರೆಂಟಿಗಳನ್ನು ಪೂರೈಸುವ ಕೆಲಸವನ್ನು ಮಾಡಿದ್ದೇವೆ. ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಹೋರಾಟ ಮಾಡುತ್ತಿದ್ದರೆ ಬಿಜೆಪಿ ಸಂವಿಧಾನವನ್ನು ತೆಗೆದುಹಾಕುವ ಮಾತು ಹೇಳುತ್ತಿದೆ. ಸಂವಿಧಾನವನ್ನು ತೆಗೆದುಹಾಕಲು ಹೊರಟ ಮೋದಿ ಅಂಡ್​ ಟೀಮ್​ ಜನ ತೆಗೆದುಹಾಕುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಅನ್ನು ಜನರು ಗೆಲ್ಲಿಸುತ್ತಾರೆ" ಎಂದರು.

ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಸಿಎಂ ಸ್ಥಾನ ಖಾಲಿ ಇಲ್ಲ. ದಲಿತ ಸಿಎಂ ವಿಚಾರ ಚರ್ಚೆ ಅಪ್ರಸ್ತುತ." ಎಂದು ಹೇಳಿದರು. ಜಾತಿ ಜನಗಣತಿ ಕುರಿತು ಪ್ರತಿಕ್ರಿಯಿಸಿ, "ಸರ್ಕಾರ ತೀರ್ಮಾನ ಮಾಡಿ ಸಮೀಕ್ಷೆ ಮಾಡಿಸಿದೆ. ಸಮೀಕ್ಷೆಯ ವರದಿ‌ ನೀಡಿದ್ದು, ಅದರಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ. ಎರಡು ಸದನಗಳ ಮುಂದೆ ಇಟ್ಟು, ನಂತರ ಸಾರ್ವಜನಿಕವಾಗಿ ಬಿಟ್ಟಾಗ ಮಾತ್ರ ಅದರಲ್ಲಿ ಲೋಪ ಇದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತದೆ. ವರದಿ ಸಮೀಕ್ಷೆ ತಿಳಿದುಕೊಳ್ಳದೇ ಮಾತನಾಡುವುದು ಸಮಂಜಸವಲ್ಲ‌. ಯಾವುದೇ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮಾಹಿತಿ ಅಗತ್ಯ ಇದೆ. ಆ ಮಾಹಿತಿಗಳು ಈ ವರದಿಯಲ್ಲಿವೆ ಎಂದು ಭಾವಿಸುತ್ತೇನೆ" ಎಂದು ತಿಳಿಸಿದರು.

ಗೋವಾ ಸಿಎಂಗೆ ರಾಜ್ಯದ ಎಬಿಸಿಡಿನೂ ಗೊತ್ತಿಲ್ಲ: "ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ ರಾಜ್ಯದ ಎಬಿಸಿಡಿನೂ ಗೊತ್ತಿಲ್ಲ. ಅವರ ಟೀಕೆಗೆ ನಾನು ಉತ್ತರಿಸುವುದು ಸರಿಯಲ್ಲ. ದೇಶದ ಭದ್ರತೆ ಇಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅದರ ಹೊಣೆ ಯಾರು ಹೊತ್ತುಕೊಳ್ಳಬೇಕು. ಅಕ್ಕ ಪಕ್ಕದ ರಾಷ್ಟ್ರಗಳು ನಮ್ಮ ಅಧಿಕಾರವಿದ್ದಾಗ ಸ್ನೇಹಮಯವಾಗಿದ್ದವು. ಆದರೆ, ಈಗ ಎಲ್ಲವನ್ನು ಶತ್ರುರಾಷ್ಟ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ರಾಷ್ಟ್ರ ರಕ್ಷಣೆಯಲ್ಲಿ ಕೂಡ ಎಲ್ಲೋ ಒಂದು ಕಡೆ ತಪ್ಪು ಹೆಜ್ಜೆ ಇಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ 180 ಲಕ್ಷ ಕೋಟಿಗೆ ದೇಶದ ಸಾಲವನ್ನು ಏರಿಸಿದ್ದಾರೆ. ತಪ್ಪು ಆರ್ಥಿಕ ನೀತಿಗಳಿಂದ ದೇಶದ ಜನರನ್ನು ಸಾಲಗಾರರನ್ನಾಗಿ‌ ಮಾಡಿದ್ದಾರೆ. ಈ ಬಾರಿ ನನಗೆ ಲೋಕಸಭಾ ಟಿಕೆಟ್ ಸಿಗುವ ವಿಶ್ವಾಸ ಇದೆ" ಎಂದರು.

2019ರಲ್ಲಿ ಈ ಬಿಜೆಪಿಯವರು ಪುಲ್ವಾಮ ಅದು ಇದು ಎನ್ನುವ ಸುಳ್ಳು ಮಾಹಿತಿ ನೀಡಿ ಕಳೆದ ಬಾರಿ ವೇವ್ ಕ್ರೀಯೆಟ್ ಮಾಡಿದ್ರು. ಆಗ ನಾನು ಸೋಲು ಅನುಭವಿಸಿದ್ದೆ. ಇನ್ನು 13 ಸಾವಿರ ಮತಗಳು ನನಗೆ ಬಿದ್ದಿದ್ದರೆ ನಾನು ಗೆಲ್ಲುತ್ತಿದೆ. ಬಳ್ಳಾರಿಯಲ್ಲಿ ಐದು ವರ್ಷಗಳಿಂದ ಮನೆ ಮಾಡಿಕೊಂಡು ಅಲ್ಲಿನ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಪಕ್ಷ ನಿಷ್ಠೆ ಪಕ್ಷದ ಕೆಲಸವನ್ನು ಗಣನೆಗೆ ತೆಗೆದುಕೊಂಡು ಈ ಬಾರಿ ಕೂಡ ಅವಕಾಶ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ.

ಪಾಕ್ ಪರ ಘೋಷಣೆ ಕೂಗಿದ ವಿಚಾರವಾಗಿ ಮಾತನಾಡಿದ ಅವರು, "ಯಾರೋ ಕಿಡಿಗೇಡಿಗಳು ಕೂಗಿದ್ದಾರೆ. ಸರ್ಕಾರ ಸುಮೋಟೋ ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದೆ. ಯಾರೋ ಕೂಗಿದ್ದಾರೆ ಎಂದು ನಾಸೀರ್ ಹುಸೇನ್ ಅವರ ಮೇಲೆ ಆರೋಪ ಮಾಡಿದರೆ ತಪ್ಪು" ಎಂದರು.

ಇದನ್ನೂ ಓದಿ: ಹಾವೇರಿ-ಗದಗ ಕ್ಷೇತ್ರದಲ್ಲಿ ಗೆಲುವು ನಮ್ಮದೇ: ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ

Last Updated : Mar 9, 2024, 4:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.