ಮೈಸೂರು: ಪಕ್ಷ ಈ ಹಿಂದೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿತ್ತು, ಆದರೆ ಈಗ ಟಿಕೆಟ್ ನಿರಾಕರಣೆ ಮಾಡಿದೆ. ಯಾವ ಕಾರಣಕ್ಕೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ, ಇದು ಯಕ್ಷಪ್ರಶ್ನೆಯಾಗಿದೆ ಎಂದು ಮಾಜಿ ಎಂಎಲ್ಸಿ ಶ್ರೀಕಂಠೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರ ಸಂಬಂಧ ಇವತ್ತು ಶಿಕ್ಷರ ಸಭೆ ಆಯೋಜನೆ ಮಾಡಿದ್ದೆ. ನಂಜರಾಜ ಅರಸ್ ಸೇರಿದಂತೆ ಅನುಭವಿ ಶಿಕ್ಷಕರ ವೃಂದ ಸಭೆಯಲ್ಲಿ ಪಾಲ್ಗೊಂಡಿತ್ತು. ಅವರೆಲ್ಲರೂ ಸ್ವಾಭಿಮಾನಿ ಶಿಕ್ಷಕರ ವೇದಿಕೆಯಿಂದ ನೀವು ಸ್ಪರ್ಧೆ ಮಾಡಬೇಕು ಎಂದು ಒಕ್ಕೊರಲಿನ ನಿರ್ಣಯ ಮಾಡಿದ್ದಾರೆ. ಮಂಡ್ಯ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಮಾಡಿ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದರು.
ಪಕ್ಷ ಯಾಕೆ ಟಿಕೆಟ್ ನಿರಾಕರಿಸಿತು ಎಂಬ ಬಗ್ಗೆ ಕಾರಣ ತಿಳಿದುಕೊಳ್ಳುವ ಪ್ರಯತ್ನ ನಡೆಸುತ್ತೇನೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಈ ಹಿಂದೆ ಗೆದ್ದಿಲ್ಲ, ಕಾಂಗ್ರೆಸ್ಗೂ ಶಿಕ್ಷಕರಿಗೂ ಆಗಿ ಬರುವುದಿಲ್ಲ, ಕಾಂಗ್ರೆಸ್ಗೂ ನೌಕರರಿಗೂ ಆಗಿಬರುವುದಿಲ್ಲ. ಇಲ್ಲಿ ಗೆದ್ದಿರುವುದು ಜೆಡಿಎಸ್ ಮತ್ತು ಬಿಜೆಪಿ ಮಾತ್ರ. ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ ಮತ್ತು ಶಿಕ್ಷಕ ಮತದಾರರಿಗೆ ಆದ್ಯತೆಯ ಮೇರೆಗೆ ಚುನಾವಣೆಗೆ ನಿಂತ ಎಲ್ಲಾ ಅಭ್ಯರ್ಥಿಗಳಿಗೂ ಮತ ಹಾಕುವ ಅವಕಾಶ ಇದೆ. ಹೀಗಾಗಿ ನನಗೆ ಆದ್ಯತೆಯ ಮೇರೆ ಒಂದಲ್ಲ, ಎರಡನೇ ಮತ ಹಾಕುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಟಿಕೆಟ್ಗೆ ಕೆ.ಟಿ.ಶ್ರೀಕಂಠೇಗೌಡ ಪಟ್ಟು - K T Srikantegowda