ತುಮಕೂರು: ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವೊಂದಕ್ಕೆ ತುಮಕೂರಿಗೆ ಭೇಟಿ ನೀಡಲಿದ್ದು, ಈ ವೇಳೆ ಧಿಕ್ಕಾರ ಕೂಗಿದ್ರೆ 1 ಲಕ್ಷ ರೂ ಬಹುಮಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಇಂದು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದರು.
"ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದೇನಾ ಆರ್ಎಸ್ಎಸ್ ಹೇಳಿಕೊಟ್ಟಿರೋದು?, ಎಫ್ಐಆರ್ ಆಗಿ ತನಿಖೆ ಆಗಬೇಕು. ತುಮಕೂರು ಎಸ್ಪಿಗೆ ದೂರು ನೀಡಲು ಜಿಲ್ಲಾ ಕಾಂಗ್ರೆಸ್ ಘಟಕ ಮುಂದಾಗಿದೆ" ಎಂದು ತಿಳಿಸಿದರು.
"ನೀವು ಪ್ರತಿಭಟನೆ ಮಾಡಿ, ಅದು ಎಲ್ಲರ ಹಕ್ಕು. ಪ್ರತಿಭಟನೆ ಮಾಡಲು ಹಣ ನೀಡೋದು ತಪ್ಪು. ಎಷ್ಟು ಲಕ್ಷ ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ಸಿಎಂ ಬಂದಾಗ ಪ್ರೊವೋಕ್ ಮಾಡಿ ಎತ್ತಿಕಟ್ಟುವ ಯತ್ನ ಮಾಡ್ತಿದ್ದೀರಿ. ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಬೇಕು" ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಡಿ.5ರಂದು ಕಾಂಗ್ರೆಸ್ ನೇತೃತ್ವದಲ್ಲೇ ಹಾಸನದಲ್ಲಿ ಸಮಾವೇಶ: ಡಿಸಿಎಂ ಡಿ.ಕೆ.ಶಿವಕುಮಾರ್