ETV Bharat / state

ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಸ್ಲೀಪರ್ ಸೆಲ್​​ಗಳ ಪತ್ತೆಗೆ ಕಾರ್ಯಪಡೆ ರಚಿಸಿ: ಅಶೋಕ್ ಆಗ್ರಹ - Sleeper Cell

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ ಭಯವೇ ಇಲ್ಲದಂತಾಗಿದೆ. ಸ್ಲೀಪರ್ ಸೆಲ್​ಗಳು ಹೆಚ್ಚಾಗಿದ್ದು, ಪತ್ತೆಗೆ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ.

ಆರ್ ಅಶೋಕ್
ಆರ್ ಅಶೋಕ್ (ETV Bharat)
author img

By ETV Bharat Karnataka Team

Published : Sep 10, 2024, 4:00 PM IST

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭಯೋತ್ಪಾದಕರಿಗೆ ಭಯ ಇಲ್ಲದಂತಾಗಿದೆ. ಸ್ಲೀಪರ್ ಸೆಲ್​ಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಅವರನ್ನು ಪತ್ತೆ ಹಚ್ಚಿ ಹೊರ ಹಾಕುವ ಕೆಲಸ ಮಾಡಬೇಕು. ಅದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.

ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ಉಗ್ರರು ಬಿಜೆಪಿ ಕಚೇರಿ ಬ್ಲಾಸ್ಟ್ ಸಂಚು ಮಾಡಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ವರದಿ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ ಭಯ ಇಲ್ಲ. ರಾಮೇಶ್ವರ ಕೆಫೆಗೆ ಹೋದ ಕಾಂಗ್ರೆಸ್ ನಾಯಕರು ಬಿಸಿನೆಸ್ ರೈವಲರಿ ಅಂದರು. ಇದು ಭಯೋತ್ಪಾದನಾ ಚಟುವಟಿಕೆಗೆ ಕುಮ್ಮಕ್ಕು ಕೊಟ್ಟಂತೆ ಆಗುತ್ತದೆ. ರಾಮೇಶ್ವರ ಕೆಫೆ ಸ್ಫೋಟದ ದಿನವೇ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡಬೇಕು ಅನ್ನೋ ಸಂಚು ಇತ್ತು. ಆದರೆ, ಅವರ ಟಾರ್ಗೆಟ್ ಹಿಂದೂಗಳು. ಭಯ ಹುಟ್ಟಿಸಿ ಇಲ್ಲಿ ಆಗುವ ಆರ್ಥಿಕ ಚಟುವಟಿಕೆಗೆ ತಡೆ ನೀಡಬೇಕು ಅನ್ನೋದು ಅವರ ಉದ್ದೇಶ ಎಂದು ದೂರಿದರು.

ಬೆಂಗಳೂರಿನಲ್ಲೂ ಭಯ ಹುಟ್ಟಿಸಬೇಕು ಅಂತ ಶಂಕಿತರು ಸಂಚು ರೂಪಿಸಿದ್ದರು. ಇಲ್ಲೂ ಕೂಡ ಬಾಂಗ್ಲಾದೇಶ ರೀತಿಯಲ್ಲೇ ರಾಜಭವನದಲ್ಲಿ ಆಗುತ್ತದೆ ಅಂತ ಒಬ್ಬ ಎಂಎಲ್‌ಸಿ ಹೇಳಿದ್ದರು. ಸ್ಲೀಪರ್ ಸೆಲ್ಸ್‌ಗಳು ಹೆಚ್ಚಾಗ್ತಿದ್ದಾರೆ. ಬಾಂಗ್ಲಾ ದೇಶದಿಂದ ಬಂದು ಕೋಲ್ಕತ್ತಾ ಸೇರಿ ಅವರ ಕಡೆ ಇರುವವರ ಜೊತೆ ಸೇರ್ತಿದ್ದಾರೆ. ಕಳ್ಳತನ, ಇತರೆ ಚಟುವಟಿಕೆಗಳನ್ನು ಮಾಡ್ತಿದ್ದಾರೆ. ಸರ್ಕಾರ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇವರನ್ನ ಪತ್ತೆ ಹಚ್ಚಲು ಟಾಸ್ಕ್ ಫೋರ್ಸ್ ಮಾಡಬೇಕು. ಕೈ ಮೀರಿ ಹೋಗುವ ಹಂತಕ್ಕೆ ಪರಿಸ್ಥಿತಿ ಬರಬಾರದು. ಸರ್ಕಾರ ಇರುತ್ತದೆ, ಹೋಗುತ್ತದೆ. ಆದರೆ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಈ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್: ಆರೋಪಪಟ್ಟಿಯಲ್ಲಿನ ದರ್ಶನ್ ವಿರುದ್ಧದ ರಹಸ್ಯ ಮಾಹಿತಿ ಪ್ರಸಾರಕ್ಕೆ ಹೈಕೋರ್ಟ್ ನಿರ್ಬಂಧ - Renukaswamy Murder Case

ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೂ ಕೂಡ ಕಾಂಗ್ರೆಸ್​​ನವರು ಅವರ ಸಮರ್ಥನೆಗೆ ನಿಂತರು. ಆ ರೀತಿ ಕೂಗಿಲ್ಲ ಅಂದರು. ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನ ಬ್ರದರ್ಸ್ ಅಂದರು. ಕರ್ನಾಟಕವನ್ನ ಯಾಕೆ ಅವರು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಇದನ್ನ ಜನ ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಮಾಡಿದರೆ ಏನೂ ಮಾಡಲ್ಲ, ಸೇಫ್ ಅಂತಾ ಈ ರೀತಿ ಮಾಡ್ತಿದ್ದಾರಾ ? ಎಂದು ಪ್ರಶ್ನಿಸಿದರು.

ದೆಹಲಿ ಪ್ರವಾಸ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಅಮಿತ್ ಶಾ, ಜೆಪಿ ನಡ್ಡಾ ಅವರು ಸಭೆ ಕರೆದಿದ್ದಾರೆ. ಸದಸ್ಯತ್ವ ಅಭಿಯಾನ ಸಂಬಂಧ ಮೀಟಿಂಗ್ ತೆಗೆದುಕೊಳ್ತಿದ್ದಾರೆ. ನಾನು, ಛಲವಾದಿ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಹೋಗ್ತಿದ್ದೇವೆ‌ ಎಂದರು.

ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ನಿನ್ನೆ ಕೂಡ ಯೋಗೇಶ್ವರ್ ನನ್ನ ಜೊತೆ ಮಾತನಾಡಿದ್ದಾರೆ. ಅವಕಾಶ ಸಿಕ್ಕರೆ ಕುಮಾರಸ್ವಾಮಿ ಹಾಗೂ ನಮ್ಮ ನಾಯಕರ ಜೊತೆ ಚರ್ಚೆ ಮಾಡಿಬರ್ತೀವಿ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಬಿಜೆಪಿ ಕಚೇರಿ ಸ್ಫೋಟಿಸುವ ಸಂಚು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ: ಗೃಹ ಸಚಿವ ಪರಮೇಶ್ವರ್ - Rameshwaram Cafe Blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.