ಶಿವಮೊಗ್ಗ: ದಸರಾ, ವಿಜಯದಶಮಿ ಹಬ್ಬದ ವ್ಯಾಪಾರ ಶಿವಮೊಗ್ಗದ ಮಾರುಕಟ್ಟೆಗಳಲ್ಲಿ ಜೋರಾಗಿ ನಡೆಯುತ್ತಿದೆ. ಆಯುಧ ಪೂಜೆಗೆ ಹೂವು, ಹಣ್ಣುಗಳು ಪ್ರಮುಖವಾಗಿ ಬೇಕಾಗುತ್ತವೆ. ಈ ಬಾರಿ ಮಾರುಕಟ್ಟೆಗೆ ಕೇಸರಿ, ಹಳದಿ ಬಣ್ಣದ ಚೆಂಡಿನ ಹೂವು ಬಂದಿದ್ದು, ಸೇವಂತಿಗೆ ಹೂವಿಗೂ ಬೇಡಿಕೆ ಹೆಚ್ಚಿದೆ.
ಹೂವು, ಹಣ್ಣಿನ ದರಗಳು: ಚೆಂಡಿನ ಹೂವು ಕೆ.ಜಿಗೆ 100 ರೂ ಹಾಗೂ ಒಂದು ಮಾರು ಹೂವಿಗೆ 80 ರೂ ಇದೆ. ಹಣ್ಣುಗಳು, ಮಿಕ್ಸ್ ಹಣ್ಣಿಗೆ ಕೆ.ಜಿಗೆ 100 ರೂ ಹಾಗೂ ಸೇಬಿಗೆ 150 ರೂ. ಆರೆಂಜ್ 70 ರೂ., ಪೇರಲೆ- 50 ರೂ., ಮೂಸಂಬಿ- 120 ರೂ., ದ್ರಾಕ್ಷಿ -150 ರೂ., ದಾಳಿಂಬೆ- 200 ರೂ. ದರವಿದೆ. ಇದರ ಜೊತೆಗೆ ಬೂದಗುಂಬಲಕ್ಕೂ ಹೆಚ್ಚು ಬೇಡಿಕೆ ಇದೆ. ವೀಳ್ಯದೆಲೆ, ಅರಿಶಿನ, ಕುಂಕುಮ ಸೇರಿದಂತೆ ಪ್ಲಾಸ್ಟಿಕ್ ತೋರಣಗಳನ್ನು ಜನ ಕೊಂಡುಕೊಳ್ಳುತ್ತಿದ್ದರು.
"ನಿನ್ನೆ ರಾತ್ರಿ ಸುರಿದ ಮಳೆಯ ಕಾರಣಕ್ಕೆ ವ್ಯಾಪಾರ ಸಾಧಾರಣವಾಗಿದೆ. ಇಂದು ಮತ್ತು ನಾಳೆ ವ್ಯಾಪಾರ ಜೋರಾಗಿರುತ್ತದೆ. ಆದರೆ, ಮಳೆ ಬಂದ್ರೆ ನಮಗೆ ನಿಲ್ಲಲು ಆಗಲ್ಲ, ಹೂವು ಕೂಡಾ ಬೇಗ ಹಾಳಾಗುತ್ತದೆ. ದಸರಾ ಹಾಗೂ ದೀಪಾವಳಿಗೆ ಹೂವಿನೊಂದಿಗೆ ನಾವು ಶಿವಮೊಗ್ಗಕ್ಕೆ ಬರುತ್ತೇವೆ" ಎಂದು ಬ್ಯಾಡಗಿಯ ವ್ಯಾಪಾರಿ ಮಹಬೂಬ್ ಅಲಿ ಹೇಳಿದರು.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ: ಶಿವಮೊಗ್ಗದಲ್ಲಿ ಹೂವು, ಹಣ್ಣು ದುಬಾರಿ - Varamahalakshmi Festival