ETV Bharat / state

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ: ಚಿಕ್ಕೋಡಿಯಲ್ಲಿ ಐದು ಸೇತುವೆಗಳು ಜಲಾವೃತ - Chikkodi Rain - CHIKKODI RAIN

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾದ ಕಾರಣ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹರಿದು ಹೋಗುತ್ತಿರುವ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನದಿಗೆ ಅಡ್ಡಲಾಗಿರುವ ಐದು ಸೇತುವೆಗಳು ಜಲಾವೃತಗೊಂಡಿವೆ.

ಚಿಕ್ಕೋಡಿಯಲ್ಲಿ ಐದು ಸೇತುವೆಗಳು ಜಲಾವೃತ
ಚಿಕ್ಕೋಡಿಯಲ್ಲಿ ಐದು ಸೇತುವೆಗಳು ಜಲಾವೃತ (ETV Bharat)
author img

By ETV Bharat Karnataka Team

Published : Jul 8, 2024, 2:11 PM IST

ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಕಳೆದು ಒಂದು ವಾರಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮವಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹರಿದು ಹೋಗುತ್ತಿರುವ ಕೃಷ್ಣಾ, ವೇದಗಂಗಾ, ದೂದಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ನದಿಗೆ ಅಡ್ಡಲಾಗಿರುವ ಐದು ಸೇತುವೆಗಳು ಜಲಾವೃತಗೊಂಡಿವೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಕೃಷ್ಣಾ ನದಿಗೆ ಅಡ್ಡಲಾಗಿರುವ ಕೆಳಹಂತದ ಮಾಂಜರಿ - ಭಾವನ ಸೌಂದತ್ತಿ ಹಾಗೂ ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ನದಿಯಲ್ಲೂ ಕೂಡ ನೀರಿನ ಮಟ್ಟ ಏರಿಕೆಯಾಗಿದ್ದು ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತವಾಗಿದ್ದು ಜೊತೆಗೆ ದೂದಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿವೆ.

ಎಲ್ಲವೂ ಕೆಳಹಂತದ ಸೇತುವೆಗಳು ಕೂಡ ಈಗಾಗಲೇ ಮುಳುಗಡೆಯಾಗಿದ್ದು ಪರ್ಯಾಯವಾದ ಮಾರ್ಗಗಳಿರುವುದರಿಂದ ಸರಿ ಸುಮಾರು 10 ಕಿಲೋಮೀಟರನಷ್ಟು ಸುತ್ತಿಕೊಂಡು ಸ್ಥಳೀಯರು ಸಂಚಾರ ಬೆಳೆಸಿದ್ದಾರೆ.

ವೇದಗಂಗಾ ದೂದಗಂಗ ನದಿಗಳ ನೀರು ಕೂಡ ಕೃಷ್ಣಾ ನದಿಗೆ ಸೇರುವುದರಿಂದ ಸದ್ಯಕ್ಕೆ ಕೃಷ್ಣೆಯಲ್ಲಿ 63 ಕ್ಯುಸೆಕ್ ನಷ್ಟು ಒಳಹರಿವು ಇರುವುದರಿಂದ ಭೋರ್ಗರೆದು ನೀರು ಹರಿದು ಹೋಗುತ್ತಿದೆ. ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದೆ

ಇದನ್ನೂ ಓದಿ: ಭಾರೀ ಮಳೆ: ಮಂಗಳೂರು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಇಂದು ರಜೆ - School Holiday

ETV Bharat Logo

Copyright © 2025 Ushodaya Enterprises Pvt. Ltd., All Rights Reserved.