ETV Bharat / state

ಲೋಕಸಭೆ ಮೊದಲ ಹಂತದ ಚುನಾವಣೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಕಣದಲ್ಲಿ 358 ಅಭ್ಯರ್ಥಿಗಳು - Nomination - NOMINATION

ರಾಜ್ಯದಲ್ಲಿ ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಒಟ್ಟು 358 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Apr 4, 2024, 10:58 PM IST

ಬೆಂಗಳೂರು: ರಾಜ್ಯದಲ್ಲಿನ ಮೊದಲ‌ ಹಂತದ ಲೋಕಸಮರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಅಂತ್ಯವಾಗಿದ್ದು, ರಾಜ್ಯದಲ್ಲಿ ಒಟ್ಟು 358 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಚುನಾವಣೆಯ ನಡೆಯಲಿದೆ. ಮಾ.28ರಿಂದ ಇಂದಿನವರೆಗೆ ನಡೆದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಒಟ್ಟು 358 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 333 ಪುರುಷರು ಹಾಗೂ 25 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಒಟ್ಟು 211 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳ ಒಟ್ಟು 161 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಒಂದೇ ಕೊನೆ ದಿನ ಉಮೇದುವಾರಿಗೆ ಸಲ್ಲಿಸುವ ಭರಾಟೆ ಜೋರಾಗಿತ್ತು. ಒಂದೇ ದಿನ 183 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ 171 ಪುರುಷರು ಹಾಗೂ 12 ಮಹಿಳೆಯರಿದ್ದಾರೆ. ಒಟ್ಟು 102 ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳ 71 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸುಮಲತಾಗೆ ಬಿಜೆಪಿಯಲ್ಲಿ ಉತ್ತಮ ಭವಿಷ್ಯವಿದೆ: ರಾಧಾಮೋಹನ್ ದಾಸ್ ಅಗರ್‌ವಾಲ್ - Sumalatha

ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳ ಚುನಾವಣೆಗೆ ಮಾ.28ರಂದು ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಏ.4 ಕೊನೆ ದಿನ ಮತ್ತು ಹಿಂಪಡೆಯುವ ಏ.8 ಕೊನೆ ದಿನವಾಗಿದೆ.

ಎಲ್ಲಿಲ್ಲಿ ಎಷ್ಟು ಅಭ್ಯರ್ಥಿಗಳು ನಾಮಪತ್ರ?:

ಉಡುಪಿ ಚಿಕ್ಕಮಗಳೂರು - 13
ಹಾಸನ - 21
ದಕ್ಷಿಣ ಕನ್ನಡ - 11
ಚಿತ್ರದುರ್ಗ (ಎಸ್‌ಸಿ) - 28
ತುಮಕೂರು - 22
ಮಂಡ್ಯ - 27
ಮೈಸೂರು - 28
ಚಾಮರಾಜನಗರ (ಎಸ್‌ಸಿ) - 25
ಬೆಂಗಳೂರು ಗ್ರಾಮಾಂತರ - 31
ಬೆಂಗಳೂರು ಉತ್ತರ - 25
ಬೆಂಗಳೂರು ಕೇಂದ್ರ - 32
ಬೆಂಗಳೂರು ದಕ್ಷಿಣ - 34
ಚಿಕ್ಕಬಳ್ಳಾಪುರ - 36
ಕೋಲಾರ (ಎಸ್‌ಸಿ) - 2

ನಾಮಪತ್ರ ಸಲ್ಲಿಸಿರುವ ಪ್ರಮುಖರು: ಮೊದಲ ಹಂತದ ಚುನಾವಣೆಗೆ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್​.ಡಿ. ಕುಮಾರಸ್ವಾಮಿ, ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾಂಗ್ರೆಸ್​ನಿಂದ ಲಕ್ಷ್ಮಣ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ. ಸಿ.ಎನ್.ಮಂಜುನಾಥ್, ಕಾಂಗ್ರೆಸ್​ನಿಂದ ಡಿ.ಕೆ.ಸುರೇಶ್, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಡಾ. ಕೆ.ಸುಧಾಕರ್, ಬೆಂಗಳೂರು ದಕ್ಷಿಣದಿಂದ ಬಿಜೆಪಿಯ ತೇಜಸ್ವಿ ಸೂರ್ಯ, ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಗೋವಿಂದ ಜಾರಕಿಹೊಳಿ, ಹಾಸನದಲ್ಲಿ ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ, ತುಮಕೂರಲ್ಲಿ ಕಾಂಗ್ರೆಸ್​​ನಿಂದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಕೋಲಾರದಲ್ಲಿ ಕಾಂಗ್ರೆಸ್​ನಿಂದ ಕೆ.ವಿ. ಗೌತಮ್ ಮತ್ತು ಜೆಡಿಎಸ್​ನಿಂದ ಮಲ್ಲೇಶ್ ಬಾಬು, ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಿಂದ 'ಘರ್‌ ಘರ್‌ ಗ್ಯಾರಂಟಿ' ಘೋಷಣೆ: 8 ಕೋಟಿ ಮನೆಗಳನ್ನು ತಲುಪಲಿರುವ ನೂತನ ಅಭಿಯಾನಕ್ಕೆ ಚಾಲನೆ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.