ETV Bharat / state

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ - ಕಾಂಗ್ರೆಸ್ ಅಭ್ಯರ್ಥಿಗಳಿಗೆ ಇದು ಪ್ರಥಮ ಚುನಾವಣೆ - Loksabha Election - LOKSABHA ELECTION

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ‌ ಎರಡು ಪಕ್ಷಗಳ ಅಭ್ಯರ್ಥಿಗಳು ಚುನಾವಣೆಗೆ ಹೊಸಬರಾಗಿರುವುದು ವಿಶೇಷವಾಗಿದೆ.

ಪದ್ಮರಾಜ್ ರಾಮಯ್ಯ ಮತ್ತು ಕ್ಯಾ.ಬೃಜೇಶ್ ಚೌಟ
ಪದ್ಮರಾಜ್ ರಾಮಯ್ಯ ಮತ್ತು ಕ್ಯಾ.ಬೃಜೇಶ್ ಚೌಟ
author img

By ETV Bharat Karnataka Team

Published : Mar 25, 2024, 7:34 PM IST

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಎರಡು ಪಕ್ಷಗಳ ಹೊಸ ಅಭ್ಯರ್ಥಿಗಳು

ಮಂಗಳೂರು (ದಕ್ಷಿಣ ಕನ್ನಡ): ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಲೋಕಸಭೆ ಚುನಾವಣೆಗೆ ಅಖಾಡ ಸಿದ್ದವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎರಡು ಪ್ರಮುಖ ರಾಜಕೀಯ ಪಕ್ಷಗಳು ಘೋಷಣೆ ಮಾಡಿರುವ ಅಭ್ಯರ್ಥಿಗಳಿಬ್ಬರು ಚುನಾವಣಾ ರಾಜಕೀಯಕ್ಕೆ ಹೊಸಬರು ಎಂಬುದು ವಿಶೇಷವಾಗಿದೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕ್ಯಾ.ಬೃಜೇಶ್ ಚೌಟ ಅವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಅತೀ ದೊಡ್ಡ ಚುನಾವಣೆಯಾಗಿದ್ದರೂ ಈ ಇಬ್ಬರು ಅಭ್ಯರ್ಥಿಗಳು ಗ್ರಾಪಂ, ತಾಪಂ, ಜಿಪಂ, ಕಾರ್ಪೋರೇಷನ್, ವಿಧಾನಸಭೆ, ವಿಧಾನಪರಿಷತ್ ಈ ಯಾವುದೇ ಚುನಾವಣೆಗೆ ಈವರೆಗೆ ಸ್ಪರ್ಧಿಸಿಲ್ಲ. ಅವರು ಇದು ಸ್ಪರ್ಧಿಸುವ ಮೊದಲ ಚುನಾವಣೆ ಲೋಕಸಭಾ ಚುನಾವಣೆ ಆಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ಉದಾಹರಣೆ ಇದೆ. ಆದರೆ, ಎರಡು ಪಕ್ಷಗಳ ಅಭ್ಯರ್ಥಿಗಳು ಏಕಕಾಲದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದು ಮೊದಲ ಬಾರಿಯಾಗಿದೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್, ನಾನು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರಬಹುದು. ಆದರೆ ನಾನು ಅನುಭವಸ್ಥನೇ. ನನ್ನ ನಾಯಕ ಜನಾರ್ದನ ಪೂಜಾರಿ ಅವರ ಚುನಾವಣೆ ಮತ್ತು ಕಳೆದ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ‌ ಅವರ ಚುನಾವಣೆಯಲ್ಲಿ ನಾನು ದುಡಿದಿದ್ದೇನೆ. ಆದರೂ ಜಿಲ್ಲೆಯ ನಾಯಕರ ನೇತೃತ್ವದಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಛಲ ತೊಟ್ಟಿದ್ದಾರೆ. ಹಾಗಾಗಿ ನಾನು ಹೊಸದಾಗಿ ಚುನಾವಣೆ ಎದುರಿಸುತ್ತಿದ್ದೇನೆ ಎಂಬ ಭಾವನೆ ಬರುತ್ತಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಆಧಾರಿತ ಪಾರ್ಟಿ. ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಕೊಡುವುದು ನಮ್ಮ‌ ಕಾರ್ಯ ಪದ್ದತಿ. ಅದರ ಭಾಗವಾಗಿ ನನಗೆ ಅವಕಾಶ ಕೊಟ್ಟಿದೆ. ಎಲ್ಲರೂ ಮೊದಲ ಬಾರಿ ಚುನಾವಣೆ ಎದುರಿಸಲೇಬೇಕು. ನನಗೆ ಕಾರ್ಯಕರ್ತರ, ಸಂಘಟನೆಯ ಶಕ್ತಿ ದೊಡ್ಡದಿದೆ. ಜನಪ್ರತಿನಿಧಿಗಳು ಮತ್ತು ಮೋದಿಯವರು ಮಾಡಿದ ಸಾಧನೆಗಳ ಶ್ರೀರಕ್ಷೆ ಯಿಂದ ಈ ಸವಾಲುಗಳನ್ನು ಒಟ್ಟಾಗಿ ಒಂದಾಗಿ ಶಕ್ತಿಯುತವಾಗಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೆಆರ್​​ಪಿಪಿ ಬಿಜೆಪಿಯೊಂದಿಗೆ ವಿಲೀನ: ಕಲ್ಯಾಣದಲ್ಲಿ ಕಮಲ ಅರಳಿಸಲಿದ್ದಾರಾ ಜನಾರ್ದನ ರೆಡ್ಡಿ? - Lok Sabha Election

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.