ETV Bharat / state

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ: ಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ಅಧಿದೇವತೆ - First Ashada Friday - FIRST ASHADA FRIDAY

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಕಳೆಗಟ್ಟಿದೆ. ಭಕ್ತರು ಮುಂಜಾನೆಯಿಂದ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ
ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ (ETV Bharat)
author img

By ETV Bharat Karnataka Team

Published : Jul 12, 2024, 11:50 AM IST

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಸಂಭ್ರಮ (ETV Bharat)

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ವಿಶೇಷ ಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಂದು ಬೆಳಗ್ಗಿನಿಂದ ರಾತ್ರಿಯವರೆಗೂ ಶೇಷ ಆಷಾಢ ಪೂಜೆ ನಡೆಯಲಿದೆ.

ದೇವಾಲಯದಲ್ಲಿ ಮುಂಜಾನೆ 3.30ರಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಬೆಳಗ್ಗೆ ರುದ್ರಾಭಿಷೇಕ, ಸಹಸ್ರನಾಮ ಅರ್ಚನೆಯ ಬಳಿಕ ಮಹಾಮಂಗಳಾರತಿ ನಡೆಯಿತು. 6 ಗಂಟೆಯಿಂದ ಭಕ್ತರಿಗೆ ಉಚಿತ ದರ್ಶನ ಹಾಗೂ 50 ರೂಪಾಯಿ, 500 ರೂಪಾಯಿ ಟಿಕೆಟ್​​​ನೊಂದಿಗೆ ವಿಶೇಷ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ದೇವಾಲಯದ ಪ್ರಧಾನ ಅರ್ಚಕ ಶಶಿ ಶೇಖರ್‌ ದಿಕ್ಷೀತ್‌ ಮಾತನಾಡಿ, "ಬಹಳ ವಿಶೇಷವಾದ ಶಕ್ತಿ ದೇವತೆಯನ್ನು ಆರಾಧಿಸುವ ಮಾಸವೇ ಆಷಾಢ ಮಾಸ. ಬ್ರಾಹ್ಮೀ ಮುಹೂರ್ತದಲ್ಲಿ ಬೆಳಗ್ಗೆ 3.30ಕ್ಕೆ ಪೂಜಾ ಕೈಂಕರ್ಯಗಳು ನಡೆದವು. 5.30ರಿಂದ ಆರಂಭವಾದ ದೇವಿ ದರ್ಶನ ರಾತ್ರಿ 10.30ರವರೆಗೆ ಇರಲಿದೆ. ನಾಲ್ಕು ಆಷಾಢ ಶುಕ್ರವಾರಗಳಂದು ತಾಯಿಗೆ ಲಕ್ಷ್ಮೀ ದೇವಿ ಅಲಂಕಾರ ನಡೆಯುತ್ತದೆ. ನಾಲ್ಕು ಶುಕ್ರವಾರ ಹಾಗೂ ವರ್ಧಂತಿಯ ದಿನ ವಿಶೇಷ ಅಲಂಕಾರ ಇರಲಿದೆ. ಆಷಾಢ ಮಾಸದಲ್ಲಿ ಶಕ್ತಿ ದೇವಿಯ ಆರಾಧನೆ, ಶ್ರಾವಣ ಮಾಸದಲ್ಲಿ ವಿಷ್ಣುವಿನ ಆರಾಧನೆ, ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆ ಮಾಡುವುದು ವಿಶೇಷ. ಆಷಾಢದಲ್ಲಿ ಶಕ್ತಿ ದೇವತೆಯನ್ನು ಆರಾಧಿಸಿದರೆ ಪ್ರಾರ್ಥನೆ ಸಿದ್ಧಿಸುತ್ತದೆ ಎಂಬ ನಂಬಿಕೆ" ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಶಿವರಾಜ್‌ ಮಾತನಾಡಿ, "ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಪೂಜೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ದತೆ ಮಾಡಿದೆ. ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಭಕ್ತರನ್ನು ಕರೆತರಲು ಐದು ದಿನಗಳು ಅಂದರೆ ನಾಲ್ಕು ಶುಕ್ರವಾರಗಳು ಹಾಗೂ ವರ್ಧಂತಿ ದಿನ ಕೆಎಸ್​ಆರ್​ಟಿಸಿ ಬಸ್​ಗಳನ್ನು ಒದಗಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ದಕ್ಷಿಣಕಾಶಿ ನಂಜನಗೂಡಿನಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ; ಕಣ್ತುಂಬಿಕೊಂಡ ಸಹಸ್ರಾರು ಭಕ್ತರು - Girija Kalyana

ETV Bharat Logo

Copyright © 2025 Ushodaya Enterprises Pvt. Ltd., All Rights Reserved.