ಚಿಕ್ಕಮಗಳೂರು: ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗದೆ ಹಳ್ಳ, ಕೊಳ್ಳ, ನದಿ, ತೊರೆಗಳು ಖಾಲಿಯಾಗಿವೆ. ಕೆರೆ ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ರೈತರು ಹಾಗೂ ಜನರು ಪರದಾಡುವಂತಹ ಪರಿಸ್ಥಿತಿ ಇದೆ. ಈ ಮಧ್ಯೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯೊಬ್ಬರ ವಿರುದ್ಧ ಕುಡಿಯುವ ನೀರನ್ನು ಅಕ್ರಮವಾಗಿ ತೋಟಕ್ಕೆ ಸರಬರಾಜು ಮಾಡಿಕೊಂಡಿದ್ದ ಆರೋಪ ಕೇಳಿಬಂದಿದ್ದು ಇಲ್ಲಿನ ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾ.ಪಂ.ಕಾರ್ಯದರ್ಶಿ ಈಶ್ವರಯ್ಯ ವಿರುದ್ಧ ಐಪಿಸಿ 427, 430 ಹಾಗೂ ಸಾರ್ವಜನಿಕ ಸ್ವತ್ತು ಹಾನಿ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಕೈಗೊಂಡಿದ್ದಾರೆ.
ಮೂರು ತಿಂಗಳು ಅಕ್ರಮವಾಗಿ ಕುಡಿಯುವ ನೀರನ್ನು ತಮ್ಮ ತೋಟಕ್ಕೆ ಬಳಸಿದ್ದಾರೆ ಎಂದು ಈಶ್ವರಯ್ಯ ವಿರುದ್ಧ ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದರು. ಕೆಮ್ಮಣ್ಣು ಗುಂಡಿ ಸಮೀಪದ ಶಾಂತಿ ಫಾಲ್ಸ್‌ನಿಂದ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಈ ನೀರಿನ ಪೈಪ್ಗೆ ಅಕ್ರಮವಾಗಿ ವಾಲ್ ಬಳಸಿ ಆ ಮೂಲಕ ತೋಟಕ್ಕೆ ನೀರು ಹರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಈ ಸಂಬಂಧ ಗ್ರಾ.ಪಂ.ಕಾರ್ಯದರ್ಶಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಮಾಡಿದ್ದರು. ಕೂಡಲೇ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳನ್ನು ಆಗ್ರಹಿಸಿದ್ದರು.
ಇದನ್ನೂ ಓದಿ: ಕಾರ್ ವಾಶ್, ಗಾರ್ಡನ್‌ಗೆ ನೀರು ಬಳಸಿದ್ದಕ್ಕೆ ಜಲಮಂಡಳಿಯಿಂದ 22 ಮನೆಗಳಿಗೆ ದಂಡ - 22 Houses fined by water board