ಬೆಂಗಳೂರು: ಸ್ಕೂಟರ್ ಬಿಡುತ್ತಾ ಪಟಾಕಿಗೆ ಬೆಂಕಿ ಇಟ್ಟು ಇತರರೆಡೆ ಎಸೆಯುತ್ತ ಪುಂಡಾಟ ಪ್ರದರ್ಶಿಸಿದ್ದ ಇಬ್ಬರು ವ್ಯಕ್ತಿಗಳಿಗೆ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹೆಲ್ಮೆಟ್ ಧರಿಸದೇ, ಅಡ್ಡಾದಿಡ್ಡಿಯಾಗಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಇಬ್ಬರು ಆರೋಪಿಗಳು ಪಟಾಕಿ ಅಂಟಿಸಿ ರಸ್ತೆಯಲ್ಲಿ ಕಂಡಕಂಡವರತ್ತ ಎಸೆಯುತ್ತ ಸಾಗುತ್ತಿದ್ದ ಘಟನೆ ಹೆಣ್ಣೂರು ಬಳಿಯ ಹೆಚ್.ಬಿ.ಆರ್ ಲೇಔಟ್ ಬಳಿ ನಡೆದಿತ್ತು.
ಕಿಡಿಗೇಡಿಗಳ ಪುಂಡಾಟವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದ ವ್ಯಕ್ತಿಯೊಬ್ಬರು ಎಕ್ಸ್ ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಹೆಣ್ಣೂರು ಸಂಚಾರ ಪೊಲೀಸರು ಇಬ್ಬರು ಆರೋಪಿತರನ್ನು ಪತ್ತೆ ಹಚ್ಚಿ ಹೆಲ್ಮೆಟ್ ರಹಿತ ಚಾಲನೆ, ಹಿಂಬದಿ ಸವಾರನ ಹೆಲ್ಮೆಟ್ ರಹಿತ ಪ್ರಯಾಣ, ಪರವಾನಗಿ ರಹಿತವಾಗಿ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ಚಾಲನೆ, ಸಂಚಾರಕ್ಕೆ ಅಡಚಣೆ, ಜಿಗ್ ಜಾಗ್ ಡ್ರೈವಿಂಗ್, ಲೇನ್ ಶಿಸ್ತು ಉಲ್ಲಂಘನೆಯಡಿ ಪ್ರಕರಣ ದಾಖಲಿಸಿದ್ದಾರೆ.
@BlrCityPolice @blrcitytraffic @CPBlr this took place in VV puram, Bengaluru. Breaking all sorts of traffic rules and throwing fireworks on children. Please take necessary action. pic.twitter.com/VaSsHo9EBd
— Vijay K. Rachappa (@ku50568594) November 1, 2024
ವಿ.ವಿ.ಪುರಂ ವ್ಯಾಪ್ತಿಯಲ್ಲಿಯೂ ಸಹ ಕಿಡಿಗೇಡಿಯೊಬ್ಬ ಪಟಾಕಿ ಹಚ್ಚಿ ಮಕ್ಕಳ ಬಳಿ ಎಸೆದಿದ್ದಾನೆ. ಸಂಚಾರಿ ನಿಯಮ ಉಪ್ಲಂಘಿಸಿ ದ್ವಿಚಕ್ರ ವಾಹನ ಚಾಲನೆ ಜೊತೆ ದಾರಿಯಲ್ಲಿ ಪಟಾಕಿ ಎಸೆಯುತ್ತಿರುವುದರ ಕುರಿತು ಎಕ್ಸ್ ಆ್ಯಪ್ ಬಳಕೆದಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ: ಕಣ್ಣಿನ ತೊಂದರೆಗೆ ಒಳಗಾದ ಪ್ರಕರಣಗಳ ಸಂಖ್ಯೆ 54ಕ್ಕೆ ಏರಿಕೆ