ETV Bharat / state

ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್; ಸಾಧನೆ ಬಗ್ಗೆ ವಿದ್ಯಾರ್ಥಿ ಕಲ್ಯಾಣ್​ ಹೇಳಿದ್ದೇನು? - NEET Topper - NEET TOPPER

ನೀಟ್​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ವಿ.ಕಲ್ಯಾಣ್​ ಅವರನ್ನು ಶ್ರೀ ಚೈತನ್ಯ ಟೆಕ್ನೋ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

felicitation to neet exam first rank holder v kalyan
ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ಕಲ್ಯಾಣ್​ಗೆ ಸನ್ಮಾನ (ETV Bharat)
author img

By ETV Bharat Karnataka Team

Published : Jun 6, 2024, 10:10 PM IST

Updated : Jun 7, 2024, 11:35 AM IST

ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿ ಕಲ್ಯಾಣ್​ಗೆ ಸನ್ಮಾನ (ETV Bharat)

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಶ್ರೀ ಚೈತನ್ಯ ಟೆಕ್ನೋ ಸಂಸ್ಥೆ ವಿದ್ಯಾರ್ಥಿ ವಿ.ಕಲ್ಯಾಣ್ 720 ಅಂಕಗಳೊಂದಿಗೆ ಅಖಿಲ ಭಾರತದ ಮಟ್ಟದಲ್ಲಿ 1ನೇ ರ‍್ಯಾಂಕ್ ಗಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ವಸಂತನಗರದ ಮಿಲ್ಲರ್ಸ್ ರಸ್ತೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯ ಸಿಇಒ ಜಿ.ಸುನಿಲ್ ಕುಮಾ‌ರ್ ಅವರು ವಿ.ಕಲ್ಯಾಣ್​ ಅವರನ್ನು ಸನ್ಮಾನಿಸಿದರು. ತಮ್ಮ ಸಂಸ್ಥೆಗೆ ಹೆಮ್ಮೆ ತಂದಿರುವ ಅವರ ಶ್ರಮ ಮತ್ತು ಸಮರ್ಪಣೆಗಾಗಿ ಶ್ಲಾಘನೆಯ ಸಂಕೇತವಾಗಿ 25 ಲಕ್ಷ ನಗದು ಬಹುಮಾನ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯ ಪೋಷಕರು ಮತ್ತು ಸಂಸ್ಥೆಯ ಸಿಬ್ಬಂದಿಯನ್ನು ವಿಶೇಷವಾಗಿ ಅಭಿನಂದಿಸಿದರು.

"ಕಲ್ಯಾಣ್ ಕೇವಲ ಆದರ್ಶಪ್ರಾಯವಲ್ಲದೆ ಸಹಪಾಠಿಗಳಿಗೆ ಮಾದರಿಯಾಗಿ ಹೊರಹೊಮ್ಮಿದ್ದಾರೆ. ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ತೋರಿಸಿದ್ದಾರೆ. ಶ್ರೀ ಚೈತನ್ಯ ಪಿಯು ಕಾಲೇಜುಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ" ಎಂದು ತಿಳಿಸಿದರು.

ಟಾಪರ್​ ವಿ.ಕಲ್ಯಾಣ್​ ಮಾತನಾಡಿ, "ಪ್ರತಿ ಸೋಮವಾರ ನಮಗೆ ಪರೀಕ್ಷೆಗಳಿದ್ದ ಕಾರಣ ನಾನು ಹೆಚ್ಚಿನ ಸಮಯವನ್ನು ಅಧ್ಯಯನದಲ್ಲಿಯೇ ಕಳೆಯುತ್ತಿದ್ದೆ. ಶನಿವಾರ ಮಾತ್ರ ಮನೆಗೆ ಬಂದು ವಿಡಿಯೋ ಗೇಮ್‌ಗಳನ್ನು ಆಡುತ್ತಿದ್ದೆ. ಹಾಸ್ಟೆಲ್‌ನಲ್ಲಿದ್ದು ಓದಿದ ಕಾರಣ ಸಾಕಷ್ಟು ಸಹಾಯ ಆಯಿತು. ಎಂ.ಬಿ.ಬಿ.ಎಸ್ ನಂತರ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಯೋಚಿಸುತ್ತಿದ್ದೇನೆ" ಎಂದು ನೀಟ್ ಟಾಪರ್ ವಿ.ಕಲ್ಯಾಣ್ ಹೇಳಿದರು.

ಕಲ್ಯಾಣ್​ ಅವರ ತಂದೆ ಕೋಲಾರ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಬಿ.ವೆಂಕಟೇಶಪ್ಪ ಮಾತನಾಡಿ, "ನನ್ನ ಮಗ ಕಷ್ಟಪಟ್ಟು ಓದಿ ಈ ಸಾಧನೆ ಮಾಡಿದ್ದಾನೆ. ತಡರಾತ್ರಿಯೆಲ್ಲ ಅಧ್ಯಯನ ಮಾಡಿ ವಾರಾಂತ್ಯದಲ್ಲಿ ಮಾತ್ರ ಮನೆಗೆ ಬರುತ್ತಿದ್ದ. ಈಗ ಆತನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀ ಚೈತನ್ಯ ಟೆಕ್ನೋ ಶಾಲೆಯ ಇತರ ಟಾಪರ್ಸ್: ಅನಿಮೇಶ್ ಸಿಂಗ್ ರಾಥೋರ್ 695 ಅಂಕಗಳೊಂದಿಗೆ 3ನೇ ರ‍್ಯಾಂಕ್ ಗಳಿಸಿದ್ದಾರೆ. ಎಚ್.ನೇಹಾಲ್ ಪ್ರಸನ್ನ 715 ಅಂಕಗಳನ್ನು ಪಡೆದರೆ, ಅನನ್ಯಾ ಅಶೋಕ್ ರಾವ್ 710 ಅಂಕಗಳನ್ನು ಪಡೆದುಕೊಂಡಿದ್ದಾರೆ. ಭರಣಿಧರನ್ ಜಿ. 710 ಅಂಕ, ಮಾನ್ಯ ಜೈನ್ 705 ಅಂಕ, ಮೊಕ್ಸಿನ್ ಶೇಕ್ 705, ಆದಿತ್ಯ 702 ಪಡೆದಿದ್ದಾರೆ. ಶೇಕ್ ಫಜಲ್ ಅಹಮದ್ 700, ಎನ್.ವಿ.ನಿತೀಶ್ 700 ಅಂಕ ಪಡೆದಿದ್ದಾರೆ, ಬೇರು ಶಶಾಂಕ್ 700 ಹಾಸಿನಿ ತೇಜೋಮೂರ್ತುಲಾ 700 ಹಾಗೂ ಕುವಲ್ ಕೆ.ಆರ್.700 ಮತ್ತು ಅಮನಸ್ವಿತ 700 ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: ನೀಟ್‌ ಪರೀಕ್ಷೆ: ಪ್ರಥಮ ಸ್ಥಾನ ಪಡೆದ ಮಂಗಳೂರಿನ‌ ಅರ್ಜುನ್ ಕಿಶೋರ್ ಸಂತಸ - NEET TOPPER

Last Updated : Jun 7, 2024, 11:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.