ETV Bharat / state

ಧಾರವಾಡ: ಮಗುವಿನ ಅಳು ಸಹಿಸದ ತಂದೆ ನೆಲಕ್ಕೆಸೆದು ಕೊಂದು ಹಾಕಿದ! - ಮಗು ಹತ್ಯೆಗೈದ ತಂದೆ

ತಂದೆಯೋರ್ವ ಅಳುತ್ತಿದ್ದ ಒಂದು ವರ್ಷದ ಮಗುವನ್ನು ನೆಲಕ್ಕೆಸೆದು ಕೊಂದು ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

dharwada crime
ಧಾರವಾಡ ಅಪರಾಧ
author img

By ETV Bharat Karnataka Team

Published : Feb 29, 2024, 12:50 PM IST

Updated : Feb 29, 2024, 5:37 PM IST

ಧಾರವಾಡ: ಮಲಗುವಾಗ ಅಳುತ್ತದೆ ಎಂಬ ಕಾರಣಕ್ಕೆ ತನ್ನ ಹೆಣ್ಣು ಮಗುವನ್ನು ತಂದೆಯೋರ್ವ ನೆಲಕ್ಕೆಸೆದ ಪರಿಣಾಮ ಮಗು ಮೃತಪಟ್ಟ ಘಟನೆ ತಾಲೂಕಿ‌ನ ಯಾದವಾಡ ಗ್ರಾಮದಲ್ಲಿ ಇಂದು ನಡೆದಿದೆ. ನೆಲಕ್ಕೆ ರಭಸವಾಗಿ ಎಸೆದಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿತ್ತು. ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ ಮೃತಪಟ್ಟಿದೆ. ಮದ್ಯ ವ್ಯಸನಿಯಾಗಿರುವ ಶಂಬುಲಿಂಗಯ್ಯ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಪತ್ನಿ ಗರಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಮಗು ನೆಮ್ಮದಿಯಿಂದ ಮಲಗಲು ಬಿಡುತ್ತಿಲ್ಲ ಎಂದು ಕೋಪಗೊಂಡು ಆರೋಪಿ ಕೃತ್ಯವೆಸಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಗರ್ಭಿಣಿಯಾಗಿದ್ದ ಯುವತಿಯ ಕೊಲೆ; ದೇಹವನ್ನು 20 ತುಂಡುಗಳಾಗಿ ಕತ್ತರಿಸಿ ರಸ್ತೆಗೆಸೆದ ದುಷ್ಕರ್ಮಿಗಳು

Last Updated : Feb 29, 2024, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.