ETV Bharat / state

ಹಾಸನದಲ್ಲಿ ಮತ್ತೊಂದು ಅಪಘಾತ: ತಂದೆ-ಮಗ ಸಾವು, ಪತ್ನಿಗೆ ಗಂಭೀರ ಗಾಯ

ಶ್ರವಣಬೆಳಗೊಳದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ತಂದೆ-ಮಗ ಅಸುನೀಗಿದ್ದು, ಪತ್ನಿಗೆ ಗಂಭೀರ ಗಾಯಗಳಾಗಿವೆ.

accident
ಚನ್ನರಾಯಪಟ್ಟಣದ ಆಸ್ಪತ್ರೆ ಆವರಣ (ETV Bharat)
author img

By ETV Bharat Karnataka Team

Published : Dec 2, 2024, 3:51 PM IST

ಹಾಸನ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ, ಮಗ ಸಾವನ್ನಪ್ಪಿ, ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ರಾಕೇಶ್ (30) ಹಾಗೂ ಮೋಕ್ಷಿತ್ (08) ಮೃತಪಟ್ಟವರು. ರಾಕೇಶ್ ಪತ್ನಿ ಆಶಾ ಅವರಿಗೆ (25) ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಜೋಡಿಗಟ್ಟೆ ಹಿರೇಹಳ್ಳಿಯವರಾದ ಇವರು, ಶ್ರವಣಬೆಳಗೊಳ ಸಮೀಪದ ಶ್ರವಣೇರಿ ಗ್ರಾಮಕ್ಕೆ ತೆರೆಳುತ್ತಿದ್ದರು. ಕಾರಿನ ಬ್ರೇಕ್ ಫೇಲ್ ಆದ ಹಿನ್ನೆಲೆಯಲ್ಲಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡ ತಂದೆ ಮತ್ತು ಮಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಗಂಭೀರ ಸ್ಥಿತಿಯಲ್ಲಿರುವ ಆಶಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚನ್ನರಾಯಪಟ್ಟಣ ಪೊಲೀಸರು, ಮೃತದೇಹಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಸ್​ ಅಧಿಕಾರಿ ಸಾವು: ಹಾಸನದಲ್ಲಿ ಭಾನುವಾರವೇ ಸಂಭವಿಸಿದ್ದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಪ್ರೊಬೇಷನರಿ ಐಪಿಎಸ್​ ಅಧಿಕಾರಿಯೂ ಕೂಡ ಮೃತಪಟ್ಟಿದ್ದರು. ಮಧ್ಯ ಪ್ರದೇಶದ ಹರ್ಷಬರ್ಧನ್ (26) ಹಾಸನ ಜಿಲ್ಲೆಗೆ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆಗೆ ನಿಯೋಜನೆಗೊಂಡಿದ್ದರು. ಆದರೆ, ಅಧಿಕಾರಿ ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ರಾತ್ರಿ ಶ್ರವಣಬೆಳಗೊಳದಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹಾಸನ: ಪ್ರೊಬೆಷನರಿ ಸೇವೆಗೆ ವರದಿ ಮಾಡಿಕೊಳ್ಳಲು ತೆರಳುವಾಗ ಅಪಘಾತ; ಯುವ ಐಪಿಎಸ್ ಅಧಿಕಾರಿ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.