ETV Bharat / state

3 ದಿನಗಳಲ್ಲಿ ನಾಲೆಗೆ ನೀರು ಹರಿಸಿ: ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ - farmers protest

ಕೆಆರ್​ಎಸ್ ಹಾಗೂ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕೆಂದು ಕುರುಬೂರು ಶಾಂತಕುಮಾರ್​ ಆಗ್ರಹಿಸಿದ್ದಾರೆ.

3 ದಿನಗಳಲ್ಲಿ ನಾಲೆಗೆ ನೀರು ಹರಿಸಿ: ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ

author img

By ETV Bharat Karnataka Team

Published : Mar 6, 2024, 9:54 PM IST

Updated : Mar 6, 2024, 11:01 PM IST

3 ದಿನಗಳಲ್ಲಿ ನಾಲೆಗೆ ನೀರು ಹರಿಸಿ: ಸರ್ಕಾರಕ್ಕೆ ಕುರುಬೂರು ಶಾಂತಕುಮಾರ್ ಆಗ್ರಹ

ಮೈಸೂರು: ನಗರದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಆದ್ದರಿಂದ ಕೆಆರ್​ಎಸ್ ಹಾಗೂ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಮೂರು ದಿನದ ಒಳಗೆ ನೀರು ಹರಿಸಬೇಕು ಎಂದು ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್​ ಸರ್ಕಾರಕ್ಕೆ ಆಗ್ರಹಿಸಿದರು.

ನಗರದ ಕಾಡಾ ಕಚೇರಿಯ ಮುಂಭಾಗದಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಕಾವೇರಿ ಹಾಗೂ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಇದಕ್ಕಾಗಿ ಕೂಡಲೇ ಈ ಭಾಗದ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಮುಖ್ಯ ಇಂಜಿನಿಯರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಾವು ಕಾವೇರಿ ವಿಚಾರದಲ್ಲಿ ಹೋರಾಟ ಮಾಡಿದ್ದೆವು, ರಾಜ್ಯವನ್ನು ಬಂದ್​ ಮಾಡಿದ್ದೆವು. ಆಗ ಯಾರು ಕೂಡ ಗಂಭೀರವಾಗಿ ಯೋಚನೆ ಮಾಡಲಿಲ್ಲ. ಮಾನ್ಯ ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರು ನೀರಿನ ವಿಚಾರದಲ್ಲಿ ಲಘುವಾಗಿ ನಡೆದುಕೊಂಡರು. ತಮಿಳುನಾಡಿನ ಬಾಂಧವ್ಯಗೋಸ್ಕರ ನೀರನ್ನು ಹರಿಸಿದರು. ಇವಾಗ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಅಲ್ಲದೇ ಅಚ್ಚುಕಟ್ಟು ಭಾಗದಲ್ಲಿ ರೈತರು ಜಾಸ್ತಿ ಬೆಳೆ ಬೆಳೆಯಲಿಲ್ಲ. ಹಾಗಾಗಿ ಭತ್ತ, ಅಕ್ಕಿ ಬೆಲೆ ಹೆಚ್ಚಾಗಿದೆ. ಇವಾಗ ಕೆರೆ ಕಟ್ಟೆಗಳೆಲ್ಲಾ ಒಣಗಿ ಹೋಗಿದೆ.

ಕುಡಿಯುವ ನೀರಿಗೂ ಕೂಡ ಪರದಾಡಬೇಕಾಗಿದೆ. ಅದಕ್ಕೆ ಇವತ್ತು ನಾವು ನೀರಾವರಿ ಇಂಜಿನಿಯರ್​ಗೆ ಒತ್ತಾಯ ಮಾಡಿದ್ದೇವೆ. 3 ದಿನದ ಒಳಗಡೆ ಕಾಲುವೆಗಳಿಗೆ ನೀರು ಹರಿಸಬೇಕು, ನೀರಿಲ್ಲದೆ ನಮ್ಮ ಜಾನುವಾರುಗಳು ಸತ್ತು ಹೋಗ್ತಾ ಇವೆ, ಬೆಳೆಗಳು ಒಣಗುತ್ತಿವೆ, ಕುಡಿಯುವ ನೀರಿಗೂ ಸಮಸ್ಯೆ ಇದೆ ಎಂದು ಬಂದಿದ್ದೇವೆ ಎಂದರು.

ಖಾಲಿ ಬಿಂದಿಗೆ ಹಿಡಿದು ವಾಟಾಳ್ ನಾಗರಾಜ್ ಪ್ರತಿಭಟನೆ: ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಖಾಲಿ ಬಿಂದಿಗೆಗಳನ್ನಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ತಮಿಳುನಾಡನ್ನು ಓಲೈಕೆ ಮಾಡಲು ನಮ್ಮ ಜಲಾಶಯಗಳಿಂದ ನೀರು ಹರಿಸಿ ಇಲ್ಲಿಯ ಜಲಾಶಯಗಳನ್ನು ಬರಿದು ಮಾಡಿದೆ. ತಮಿಳುನಾಡಿನ ಜಲಾಶಯಗಳಲ್ಲಿ ನೀರಿದ್ದರೆ, ನಮ್ಮ ಜಲಾಶಯಗಳಲ್ಲಿ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಲು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ತೀವ್ರ ಜಲಕ್ಷಾಮ : ಶುದ್ಧ ನೀರಿನ ಘಟಕಗಳಲ್ಲೂ ಸಾಲು ಸಾಲು ಜನರು

Last Updated : Mar 6, 2024, 11:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.