ETV Bharat / state

ಶಿವಮೊಗ್ಗ: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವು - wild elephant attack - WILD ELEPHANT ATTACK

ತೋಟದ ಕೆಲಸಕ್ಕೆ ತೆರಳಿದ್ದ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿದ್ದು ರೈತ ಸಾವನ್ನಪ್ಪಿದ್ದಾನೆ.

ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವು
ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸಾವು (ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 25, 2024, 6:47 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಆನೆ ದಾಳಿಗೆ ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಹನುಮಂತಪ್ಪ (40) ಮೃತ ದುರ್ದೈವಿ. ಶಿವಮೊಗ್ಗ ತಾಲೂಕಿನ ಆಲದೇವರ ಹೊಸೂರು ಗ್ರಾಮದಲ್ಲಿ ಶನಿವಾರ ಸಂಜೆ ಕಾಡಾನೆ ದಾಳಿ‌ ನಡೆಸಿದೆ.

ಮೃತ ಹನುಮಂತಪ್ಪ ಗದಗ್​​ ಜಿಲ್ಲಯವರಾಗಿದ್ದು, ಆಲದೇವರ ಹೊಸೂರು ಗ್ರಾಮಕ್ಕೆ ಕೂಲಿ ಕೆಲಸಕ್ಕೆಂದು ತಮ್ಮ ಕುಟುಂಬದೊಂದಿಗೆ ಆಗಮಿಸಿದ್ದರು. ನಿನ್ನೆ ಸಂಜೆ ಅಡಕೆ ತೋಟದ ಕೆಲಸಕ್ಕೆ ಹೋಗಿ ವಾಪಸ್ ಆಗುವ ವೇಳೆ ಆನೆ ದಾಳಿ ಮಾಡಿದೆ. ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಹನುಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಪ್ರಸನ್ನ ಪಟಗಾರ ಹಾಗೂ ಇತರೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನ ಕೊಚ್ಚಿ ಕೊಂದ ಮಲತಂದೆ! - Stepfather Murdered daughters

ETV Bharat Logo

Copyright © 2024 Ushodaya Enterprises Pvt. Ltd., All Rights Reserved.