ETV Bharat / state

ಮಂಗಳೂರಿನಲ್ಲಿ ಭಾರಿ ಸೆಕೆಗೆ ಹೈರಾಣಾದ ಪ್ರಾಣಿಪಕ್ಷಿಗಳು: ಪಿಲಿಕುಳ ಮೃಗಾಲಯದಲ್ಲಿ ​ಸ್ಪ್ರಿಂಕ್ಲರ್ ವ್ಯವಸ್ಥೆ - Pilikula Zoo

ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಬಿಸಿಲಿನ ಬೇಗೆಯಿಂದ ಪ್ರಾಣಿಗಳನ್ನು ರಕ್ಷಿಸಲು ಫ್ಯಾನ್​ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.

ಪಿಲಿಕುಳ ಮೃಗಾಲಯದಲ್ಲಿ ನೀರು ​ಸ್ಪ್ರಿಂಕ್ಲರ್ ವ್ಯವಸ್ಥೆ

author img

By ETV Bharat Karnataka Team

Published : Apr 10, 2024, 7:24 AM IST

Updated : Apr 10, 2024, 11:09 AM IST

ಪಿಲಿಕುಳ ಮೃಗಾಲಯದಲ್ಲಿ ​ಸ್ಪ್ರಿಂಕ್ಲರ್ ವ್ಯವಸ್ಥೆ

ಮಂಗಳೂರು: ಜನಸಾಮಾನ್ಯರು ಬಿಸಿಲ ಧಗೆಯನ್ನು ತಾಳಲಾರದೇ ಹೈರಾಣಾಗುತ್ತಿದ್ದಾರೆ. ಸೆಕೆ ತಾಳಲಾರದೇ ಜನ ನೀರು, ತಂಪು ಪಾನೀಯ, ಎಳ ನೀರನ್ನು ಆಶ್ರಯಿಸುತ್ತಿದ್ದಾರೆ. ಇದೇ ಸಂಕಷ್ಟವನ್ನು ಅನುಭವಿಸುತ್ತಿರುವ ಪ್ರಾಣಿ ಪಕ್ಷಿಗಳು ನೋವು ಹೇಳಲಾರದೇ ಒದ್ದಾಡುತ್ತಿವೆ. ಆದರೆ, ಪಿಲಿಕುಳ ನಿಸರ್ಗಧಾಮದಲ್ಲಿರುವ ಪ್ರಾಣಿ - ಪಕ್ಷಿಗಳನ್ನು ಬಿಸಿಲ ಧಗೆಯಿಂದ ಮುಕ್ತಗೊಳಿಸಿ ತಣ್ಣಗಿನ ವಾತಾವರಣ ನಿರ್ಮಿಸುವ ಪ್ರಯತ್ನವನ್ನು ಈ ಬಾರಿಯೂ ಮಾಡಲಾಗಿದೆ.

ಪಿಲಿಕುಳ ಮೃಗಾಲಯದಲ್ಲಿ ನೀರು ​ಸ್ಪ್ರಿಂಕ್ಲರ್ ವ್ಯವಸ್ಥೆ
ಪಿಲಿಕುಳ ಮೃಗಾಲಯದಲ್ಲಿ ನೀರು ​ಸ್ಪ್ರಿಂಕ್ಲರ್ ವ್ಯವಸ್ಥೆ

ಪಿಲಿಕುಳ ನಿಸರ್ಗಧಾಮದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ನೂರಾರು ಪ್ರಭೇದಗಳ ಸಾವಿರಕ್ಕೂ ಅಧಿಕ ಪ್ರಾಣಿಪಕ್ಷಿಗಳಿವೆ. ಇದರಲ್ಲಿ ಹಲವು ಪ್ರಾಣಿ ಪಕ್ಷಿಗಳು ಸದ್ಯದ ಸೆಕೆಯ ವಾತಾವರಣ ಎದುರಿಸಲಾಗದೇ ಸಂಕಷ್ಟದಲ್ಲಿದೆ. ಆದ್ದರಿಂದ ಅವುಗಳಿಗೆ ತಣ್ಣನೆಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕುಡಿಯಲು ನೀರು ಸಿಗುವುದರೊಂದಿಗೆ, ಅವುಗಳು ಸುತ್ತಾಡುವ ಪ್ರದೇಶದಲ್ಲಿ ಯಥೇಚ್ಚವಾಗಿ ನೀರು ಲಭ್ಯವಿರುವಂತೆ ನೋಡಿಕೊಳ್ಳಲಾಗುತ್ತದೆ. ಅದರಲ್ಲಿಯೂ ಪ್ರಾಣಿಗಳನ್ನು ಇರಿಸಲಾಗಿರುವ ಬೋನಿನ ಹೊರಭಾಗದಲ್ಲಿ ಟೇಬಲ್ ಫ್ಯಾನ್‌ ವ್ಯವಸ್ಥೆ ಮಾಡಿಸಲಾಗಿದೆ.

ಬಿಸಿಲ ಧಗೆ ಹೆಚ್ಚಿರುವ ಸಂದರ್ಭದಲ್ಲಿ ಪೈಪ್​ನಲ್ಲಿ ಪ್ರಾಣಿಗಳ ಮೈಮೇಲೆ ನೀರು ಹಾಯಿಸಲಾಗುತ್ತಿದೆ. ಹುಲಿಗಳ ಗೂಡಿಗೆ ಪೈಪ್ ಮೂಲಕ ಪದೇ ಪದೆ ನೀರು ಹರಿಸಲಾಗುತ್ತದೆ. ವಿವಿಧ ಪ್ರಾಣಿಗಳಿಗೆ ದಿನದಲ್ಲಿ ಸುಮಾರು ಎರಡು - ಮೂರು ಬಾರಿ ನಿಯಮಿತವಾಗಿ ನೀರು ಹಾಯಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇನ್ನು ಹಲವೆಡೆ ಉದ್ಯಾನವನದಲ್ಲಿ ಪ್ರಾಣಿಗಳು ಓಡಾಡುವ ಸ್ಥಳದ ಮೇಲ್ಭಾಗದಲ್ಲಿ ನೀರಿಗಾಗಿ ಸ್ಪ್ರಿಂಕ್ಲರ್​ಗಳನ್ನು ಅಳವಡಿಸಲಾಗಿದ್ದು, ಮೇಲಿಂದ ನೀರು ಬೀಳುವ ಸಂದರ್ಭ ಪ್ರಾಣಿಗಳು ಅದಕ್ಕೂ ಮೈಯೊಡ್ಡಿ ನಿಲ್ಲುತ್ತವೆ. ಹಕ್ಕಿಗಳಿಗೂ ಕೂಡ ನೀರು ಚಿಮ್ಮಿಸುವ ಪ್ರಕ್ರಿಯೆ ನಡೆಯುತ್ತದೆ. ಜತೆಗೆ, ಅಲ್ಲಲ್ಲಿ ನೀರಿನ ಕೊಳಗಳು, ಟ್ಯಾಂಕ್​ಗಳನ್ನೂ ಅಳವಡಿಸಲಾಗಿದೆ.

ಕೆಲವೊಂದು ಪ್ರಾಣಿಗಳ ಗೂಡಿನ ಮೇಲ್ಛಾವಣಿ ಮೇಲೆ ಬಿಳಿ ಬಣ್ಣದ ಪೈಂಟ್‌ಗಳನ್ನು ಬಳಿಯಲಾಗಿದೆ. ಈ ಬಿಳಿ ಬಣ್ಣವು ಬಿಸಿಲನ್ನು ಹೀರಿ ತಂಪು ನೀಡುತ್ತದೆ. ಜತೆಗೆ ಕೆಲವೊಂದು ಪ್ರಾಣಿಗಳ ಬೋನಿನ ಮೇಲ್ಛಾವಣಿಗೆ ತೆಂಗಿನ ಗರಿಗಳನ್ನೂ ಹಾಕಲಾಗಿದೆ. ಹಾವುಗಳಿಗೂ ಮೇಲಿನಿಂದ ನೀರನ್ನು ಸ್ಪ್ರಿಂಕ್ಲರ್‌ ಮೂಲಕ ಹಾಯಿಸಿ ತಣ್ಣಗಿನ ವಾತಾವರಣ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಮೂಕ ಪ್ರಾಣಿಗಳನ್ನು ಬಿಸಿಲ ಧಗೆಯಿಂದ ರಕ್ಷಿಸುವ ಉದ್ದೇಶದಿಂದ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳದಲ್ಲಿರುವ ಪ್ರಾಣಿ ಪಕ್ಷಿಗಳಲ್ಲಿ ಕೆಲವು ಬಿಸಿಲನ್ನು ಸಹಿಸಿಕೊಳ್ಳಲು, ಇನ್ನು ಕೆಲವು ಮಳೆಗಾಲದಲ್ಲಿ ಚಳಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಇಲ್ಲಿರುವ ಪ್ರಾಣಿ ಪಕ್ಷಿಗಳಿಗೆ ವಿಪರೀತ ಮಳೆಯ ಸಂದರ್ಭದಲ್ಲಿ ಬೆಚ್ಚಗಿನ ವ್ಯವಸ್ಥೆಯನ್ನು, ಸೆಕೆಯ ಸಂದರ್ಭದಲ್ಲಿ ತಂಪು ಮಾಡುವ ವ್ಯವಸ್ಥೆಯನ್ನು ಪ್ರತಿ ವರ್ಷವು ಮಾಡಲಾಗುತ್ತದೆ. ಈ ಬಾರಿಯ ವಿಪರೀತ ಸೆಕೆಗೆ ಪ್ರಾಣಿಗಳಿಗೆ ನೀರು ಹಾಯಿಸಿ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಜೊತೆಗೆ ಸ್ಪ್ರಿಂಕ್ಲರ್, ಟೇಬಲ್ ಫ್ಯಾನ್, ಗೂಡಿಗೆ ತೆಂಗಿನ ಗರಿ, ಬಿಳಿ ಬಣ್ಣ ಮಾಡಿ ಅವುಗಳು ತಂಪಾಗಿರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಹೆಚ್ಚುತ್ತಿರುವ ಬಿಸಿಲು: ದಕ್ಷಿಣಕನ್ನಡ ಜಿಲ್ಲೆಯ ಡ್ಯಾಂಗಳಲ್ಲಿ ಇಳಿಕೆಯಾಗುತ್ತಿದೆ ನೀರು - Water is decreasing in dams

Last Updated : Apr 10, 2024, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.