ETV Bharat / state

ದೀಪಾವಳಿ ಹಬ್ಬ: ಏಕಮುಖ ವಿಶೇಷ ರೈಲು ಸಂಚಾರ, 14 ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ - EXTRA SPECIAL EXPRESS TRAIN

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ವಿಶೇಷ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ.

special-express-train
ವಿಶೇಷ ಎಕ್ಸ್​ಪ್ರೆಸ್​ ರೈಲು (IANS)
author img

By ETV Bharat Karnataka Team

Published : Oct 24, 2024, 7:22 PM IST

ಹುಬ್ಬಳ್ಳಿ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ಹೆಚ್ಚುವರಿ ವಿಶೇಷ ಎಕ್ಸ್​​ಪ್ರೆಸ್ ರೈಲುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ. ವಿವರಗಳು ಈ ಕೆಳಗಿನಂತಿವೆ.

ರೈಲು ಸಂಖ್ಯೆ 07323 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ಒನ್ ವೇ ವಿಶೇಷ ಎಕ್ಸ್​ಪ್ರೆಸ್ ರೈಲು ಅಕ್ಟೋಬರ್ 30, 2024 ರಂದು (ಬುಧವಾರ) ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8:00 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 3:45 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 07324 ಯಶವಂತಪುರ - ಕಲಬುರಗಿ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 30, 2024 ರಂದು (ಬುಧವಾರ) ಯಶವಂತಪುರದಿಂದ ಸಂಜೆ 5:15ಕ್ಕೆ ಹೊರಟು, ಮರುದಿನ ಅಂದರೆ ಅಕ್ಟೋಬರ್ 31, 2024 ರಂದು (ಗುರುವಾರ) ಬೆಳಗಿನ ಜಾವ 4:15ಕ್ಕೆ ಕಲಬುರಗಿ ತಲುಪಲಿದೆ. ಮಾರ್ಗದಲ್ಲಿ ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 07325 ಕಲಬುರಗಿ - ಎಸ್‌ಎಸ್‌ಎಸ್ ಹುಬ್ಬಳ್ಳಿ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 31, 2024 ರಂದು (ಗುರುವಾರ) ಕಲಬುರಗಿಯಿಂದ ಬೆಳಗ್ಗೆ 6:15 ಕ್ಕೆ ಹೊರಟು ಅದೇ ದಿನ ಸಂಜೆ 4:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಮಾರ್ಗದಲ್ಲಿ ಈ ರೈಲು ಶಹಾಬಾದ್, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಮೇಲೆ ತಿಳಿಸಿದ ಈ ವಿಶೇಷ ರೈಲುಗಳು (07323, 07324, ಮತ್ತು 07325) 1 ಎಸಿ ಫಸ್ಟ್ ಕ್ಲಾಸ್, 2 ಎಸಿ 2 ಟೈರ್, 4 ಎಸಿ 3 ಟೈರ್, 3 ಎಸಿ 3-ಟೈರ್ ಎಕಾನಮಿ, 6 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, 1 ಪ್ಯಾಂಟ್ರಿ ಕಾರ್ ಮತ್ತು 2 ಲಗೇಜ್ ಬ್ರೇಕ್ ಮತ್ತು ಜನರೇಟರ್ ಕಾರುಗಳು ಸೇರಿದಂತೆ 21 ಬೋಗಿಗಳನ್ನು ಒಳಗೊಂಡಿರುತ್ತದೆ.

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

14 ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ : ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, 14 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕವಾಗಿ ಜೋಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ.

1. ಅಕ್ಟೋಬರ್ 25 ರಿಂದ ನವೆಂಬರ್ 24, 2024ರ ವರೆಗೆ ರೈಲು ಸಂಖ್ಯೆ 16589 ಕೆಎಸ್ಆರ್ ಬೆಂಗಳೂರು-ಸಾಂಗ್ಲಿ ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ, 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

2. ಅಕ್ಟೋಬರ್ 26 ರಿಂದ ನವೆಂಬರ್ 25, 2024ರ ವರೆಗೆ ರೈಲು ಸಂಖ್ಯೆ 16590 ಸಾಂಗ್ಲಿ-ಕೆಎಸ್ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

3.ಅಕ್ಟೋಬರ್ 25 ರಿಂದ ನವೆಂಬರ್ 24, 2024ರ ವರೆಗೆ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

4. ಅಕ್ಟೋಬರ್ 26 ರಿಂದ ನವೆಂಬರ್ 25, 2024ರ ವರೆಗೆ ರೈಲು ಸಂಖ್ಯೆ 20654 ಬೆಳಗಾವಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

5.ಅಕ್ಟೋಬರ್ 25 ರಿಂದ ನವೆಂಬರ್ 25, 2024 ರವರೆಗೆ ರೈಲು ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

6.ಅಕ್ಟೋಬರ್ 27 ರಿಂದ ನವೆಂಬರ್ 28ರ ವರೆಗೆ ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

7. ಅಕ್ಟೋಬರ್ 24 ರಿಂದ ನವೆಂಬರ್ 26, 2024ರ ವರೆಗೆ ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

8. ಅಕ್ಟೋಬರ್ 30 ರಿಂದ ನವೆಂಬರ್ 29, 2024ರ ವರೆಗೆ ರೈಲು ಸಂಖ್ಯೆ 12630 ಹಜರತ್ ನಿಜಾಮುದ್ದೀನ್-ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.

9. ಅಕ್ಟೋಬರ್ 25 ರಿಂದ ನವೆಂಬರ್ 22, 2024ರ ವರೆಗೆ ರೈಲು ಸಂಖ್ಯೆ 17323 ಎಸ್ಎಸ್ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಬೋಗಿ ಜೋಡಿಸಲಾಗುತ್ತಿದೆ.

10. ಅಕ್ಟೋಬರ್ 27 ರಿಂದ ನವೆಂಬರ್ 24, 2024ರ ವರೆಗೆ ರೈಲು ಸಂಖ್ಯೆ 17324 ಬನಾರಸ್-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಬೋಗಿ ಜೋಡಿಸಲಾಗುತ್ತಿದೆ.

11. ಅಕ್ಟೋಬರ್ 26 ರಿಂದ ನವೆಂಬರ್ 23, 2024 ರವರೆಗೆ ರೈಲು ಸಂಖ್ಯೆ 22685 ಯಶವಂತಪುರ-ಚಂಡೀಗಢ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

12. ಅಕ್ಟೋಬರ್ 29 ರಿಂದ ನವೆಂಬರ್ 26, 2024 ರವರೆಗೆ ರೈಲು ಸಂಖ್ಯೆ 22686 ಚಂಡೀಗಢ-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

13. ಅಕ್ಟೋಬರ್ 31 ರಿಂದ ನವೆಂಬರ್ 28, 2024 ರವರೆಗೆ ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

14. ನವೆಂಬರ್ 1 ರಿಂದ 29, 2024ರ ವರೆಗೆ ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.

ಇದನ್ನೂ ಓದಿ : ರೈಲ್ವೆ ಪ್ರಯಾಣಿಕರೇ ಗಮನಿಸಿ: ದೀಪಾವಳಿ ಪ್ರಯುಕ್ತ ಈ ಮಾರ್ಗದಲ್ಲಿ ವಿಶೇಷ ರೈಲುಗಳ ಓಡಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.